ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಪಿಎಸ್ಸಿ) ರಾಯಚೂರು ವಲಯದ 16 ವರ್ಷದೊಳಗಿನ ಅಂತರ್ ಜಿಲ್ಲಾ ಕ್ರಿಕೆಟ್ ಪಂದ್ಯಕ್ಕೆ ನಗರದಲ್ಲಿ ಗುರುವಾರ ಚಾಲನೆ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಬೀದರ್ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಪಿಎಸ್ಸಿ) ರಾಯಚೂರು ವಲಯದ 16 ವರ್ಷದೊಳಗಿನ ಅಂತರ್ ಜಿಲ್ಲಾ ಕ್ರಿಕೆಟ್ ಪಂದ್ಯಕ್ಕೆ ನಗರದಲ್ಲಿ ಗುರುವಾರ ಚಾಲನೆ ನೀಡಲಾಗಿದೆ.ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ವಿಜಯಪುರ - ಯಾದಗಿರಿ ತಂಡಗಳ ನಡುವೆ ಪಂದ್ಯ ನಡೆಯಿತು. ಟಾಸ್ ಗೆದ್ದ ಯಾದಗಿರಿ ತಂಡ ವಿಜಯಪುರಕ್ಕೆ ಬ್ಯಾಂಟಿಂಗ್ ನೀಡಿತು. 28.3 ಓವರ್‌ಗಳಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ವಿಜಯಪುರ 111 ರನ್ ಗಳಿಸಿತು. ಅನಿಕೇತ್ 54 ಎಸೆತಗಳಲ್ಲಿ 29 ರನ್ ಗಳಿಸಿ ಗಮನ ಸೆಳೆದರು. ಯಾದಗಿರಿ ತಂಡದ ಸಂಕೇತ ಮಠ 4 ಓವರಗಳಲ್ಲಿ 13 ರನ್ ನೀಡಿ ಎರಡು ವಿಕೆಟ್ ಪಡೆದರೆ, ಸಿದ್ಧಾರ್ಥ ನಾಲ್ಕು ಓವರಗಳಲ್ಲಿ 21 ರನ್ ನೀಡಿ ಎರಡು ವಿಕೆಟ್ ಪಡೆದರು. ನಂತರ ಬ್ಯಾಟಿಂಗ್ ಮಾಡಿದ ಯಾದಗಿರಿ ತಂಡ 32.3 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 114 ರನ್ ಗಳಿಸಿ ಗೆಲುವು ಸಾಧಿ ಸಿತು. ಮನೋಜ್ 31 ಎಸೆತಗಳಲ್ಲಿ 49 ರನ್ ಬಾರಿಸಿ ಮಿಂಚಿದರು.
ಇಲ್ಲಿನ ಪಶುವೈದ್ಯಕೀಯ ಕಾಲೇಜಿನ ಮೈದಾನದಲ್ಲಿ ರಾಯಚೂರು - ಕಲಬುರಗಿ ತಂಡದ ನಡುವೆ ಪಂದ್ಯ ಜರುಗಿತು. ಕಲಬುರಗಿ ತಂಡ ಮೊದಲ ಬ್ಯಾಂಟಿಂಗ್ ಮಾಡಿ 50 ಓವರಗಳಲ್ಲಿ 9 ವಿಕೆಟ್ ಕಳೆದುಕೊಂಡು 211 ರನ್ ಬಾರಿಸಿದರು. ಮಹ್ಮದ್ ಹುಸೇನ್ 141 ಎಸೆತದಲ್ಲಿ 85ರನ್, ಕಾರ್ತಿಕ್ 50 ಎಸೆತಗಳಲ್ಲಿ 27 ರನ್ ಬಾರಿಸಿದರು. ರಾಯಚೂರು ತಂಡದ ವರುಣಕುಮಾರ ಆರು ಓವರ್ ಹಾಕಿ ಮೂರು ವಿಕೆಟ್ ಪಡೆದರು. ರುವಮ್ ಬೋಹ್ರಾ ಎರಡು ವಿಕೆಟ್ ಪಡೆದರು. ನಂತರ ಬ್ಯಾಟಿಂಗ್ ಮಾಡಿದ ರಾಯಚೂರು ತಂಡ 44 ಓವರಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 198 ರನ್ ಗಳಿಸಿ ಸೋಲು ಅನುಭವಿಸಿತು. ಅಜೀತ್ ಚಾಪಲ್ 92 ರನ್ ಗಳಿಸಿದರು. ಕಲಬುರಗಿ ತಂಡದ ಕಾರ್ತಿಕ್ ರಾಠೋಡ್ 10 ಓವರ್‌ಗಳಲ್ಲಿ 44 ರನ್ ನೀಡಿ ಐದು ವಿಕೆಟ್ ಪಡೆದರು. ನಗರದ ಬಿವಿಬಿ ಕಾಲೇಜಿನಲ್ಲಿ ಕನ್ವೀನರ್ -11 ಮತ್ತು ಕೊಪ್ಪಳ -11 ತಂಡಗಳ ನಡುವೆ ಪಂದ್ಯ ನಡೆಯಿತು. ಮೊದಲ ಬ್ಯಾಂಟಿಂಗ್ ಮಾಡಿದ ಕನ್ವೀನರ್-11 ತಂಡ 21 ಓವರಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 63 ಗಳಿಸಿತು. ಸಮರ್ಥ ಬಿ. 20 ರನ್ ಗಳಿಸಿದರು. ಕೊಪ್ಪಳ ತಂಡದ ಶಾಶ್ವತ್ 3 ಓವರಗಳಲ್ಲಿ 2 ರನ್ ನೀಡಿ 4 ವಿಕೆಟ್ ಪಡೆದರು. ಅಭಿಷೇಕ್ ಏಳು ಓವರಗಳಲ್ಲಿ ಮೂರು ವಿಕೆಟ್ ಪಡೆದರು. ನಂತರ ಬ್ಯಾಂಟಿಂಗ್ ಮಾಡಿದ ಕೊಪ್ಪಳ-11 ತಂಡ 13.2 ಓವರಗಳಲ್ಲಿ 3 ವಿಕೆಟ್ ಕಳೆದುಕೊಂಡು 64 ರನ್ ಗಳಿಸಿ ಭರ್ಜರಿಯಾಗಿ ಜಯಗಳಿಸಿತು. ಪವನಕುಮಾರ ಬಾಲಾ 27 ರನ್, ಆಕಾಶ ವೀರೇಶ 20 ರನ್ ಗಳಿಸಿದರು.ಪಂದ್ಯಕ್ಕೆ ಚಾಲನೆ: ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪಂದ್ಯಕ್ಕೆ ಕೆಎಸ್ಸಿಎ ಟಿರ್‌ಡಿಒ ಕೆ.ಎಂ.ಅಯ್ಯಪ್ಪ ಚಾಲನೆ ನೀಡಿದರು. ಆಯ್ಕೆಗಾರ ಮಹೇಶ ಮಠ, ರುಕ್ಮಣ್ಯ ಮಡಿವಾಳ, ಸಿದ್ದರಾಜ, ಸುಧೀಂದ್ರ ಜೋಶಿ, ಸಿದ್ದರಾಮಪ್ಪ ಜೆ., ಸಂತೋಷಕುಮಾರ ಇತರರಿದ್ದರು.ಕೆಎಸ್ಸಿಎ ರಾಯಚೂರು ವಲಯದ ಅಧ್ಯಕ್ಷ ಚಂದ್ರಶೇಖರ ಮೈಲಾರ, ಸಂಚಾಲಕ ಕುಶಾಲ ಪಾಟೀಲ್ ಗಾದಗಿ ನೇತೃತ್ವದಲ್ಲಿ ನಗರದಲ್ಲಿ ಪಂದ್ಯ ಆಯೋಜಿಸಿದ್ದು, ಇಲ್ಲಿನ ಮೂರು ಮೈದಾನದಲ್ಲಿ ಸೆ.7 ರವರೆಗೆ ನಡೆಯಲಿವೆ. ಒಟ್ಟು 8 ತಂಡಗಳು ಮಧ್ಯೆ ಪಂದ್ಯಗಳು ನಡೆಯುತ್ತಿವೆ ಎಂದು ರಾಯಚೂರು ವಲಯದ ಮಾಧ್ಯಮ ಸಂಯೋಜಕ ಅನೀಲಕುಮಾರ ದೇಶಮುಖ ತಿಳಿಸಿದ್ದಾರೆ.