ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಕ್ಕಳಿಗೆ ಶಾಲಾ ಹಂತದಲ್ಲಿ ನಾಯಕತ್ವದ ಗುಣವನ್ನು ಬೆಳೆಸಲು ರೋಟರಿ ಸಂಸ್ಥೆಯ ಇಂಟರಾಕ್ಟ್ ಕ್ಲಬ್ ನೆರವಾಗುತ್ತದೆ ಎಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ಬಿ.ರವಿಶಂಕರ್ ಹೇಳಿದರು.ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ರೋಟರಿ ಇಂಟರಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇಂಟರಾಕ್ಟ್ ಮುಖಾಂತರ ಮಕ್ಕಳಲ್ಲಿ ನಾಯಕತ್ವ ಕೌಶಲ್ಯಗಳನ್ನು ಬೆಳೆಸಲು ಸಾಧ್ಯವಾಗಲಿದೆ. ಟೀಂ ವರ್ಕ್ ಕಲಿಯಬಹುದು. ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬಹುದು. ಇದು ಕೇವಲ ಕ್ಲಬ್ ಅಲ್ಲ, ವ್ಯಕ್ತಿತ್ವ ನಿರ್ಮಾಣದ ಮಾರ್ಗವಾಗಿದೆ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಕಿಶೋರ್ ಕುಮಾರ್ ಡಿ ಮಾತನಾಡಿ, ಈ ಶಾಲೆಯಲ್ಲಿ ಕಲಿತ ಪಾಠಗಳು ನಿಮ್ಮನ್ನು ಜೀವನದಲ್ಲಿ ಮಹಾನ್ ವ್ಯಕ್ತಿಗಳಾಗಿ ರೂಪಿಸಲಿದೆ. ವಿದ್ಯಾರ್ಥಿಗಳು ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಡಾ. ಧನಂಜಯ್ ಮಾತನಾಡಿ, ಮಕ್ಕಳಲ್ಲಿ ಅಸಾಧಾರಣ ಸಾಮರ್ಥ ಹೊಂದಿರುವವರು ಇರುತ್ತಾರೆ. ನಮ್ಮ ಭವಿಷ್ಯ ನಾವೇ ನಿರ್ಮಿಸಿಕೊಳ್ಳಬೇಕು ಎಂದು ಹೇಳಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಶಿಕ್ಷಣದಿಂದ ಉತ್ತಮ ಬದುಕು ರೂಪಿಸಿಕೊಳ್ಳಬಹುದು. ಇತರರ ಬದುಕನ್ನೂ ಬೆಳಗಿಸಬಹುದು ಎಂದರು.ಟ್ರಸ್ಟ್ ಉಪಾಧ್ಯಕ್ಷೆ ನಾಗವೇಣಿ ಮಾತನಾಡಿ, ಬಡತನ ಎನ್ನುವುದು ಅಡಚಣೆಯಾಗಬಹುದು. ಆದರೆ ಅದು ಕನಸುಗಳಿಗೆ ಕಡಿವಾಣವಲ್ಲ. ನಮ್ಮ ಹಿನ್ನೆಲೆ ಏನೇ ಇರಲಿ, ಶ್ರದ್ಧೆ, ಶ್ರಮ ಮತ್ತು ನಂಬಿಕೆಯಿಂದ ನಾವು ಉನ್ನತ ಸಾಧನೆ ಮಾಡಬಹುದು ಎಂದು ತಿಳಿಸಿದರು.
ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಶಬ್ಧಕೋಶಗಳನ್ನು ನೀಡಿ ಗೌರವಿಸಲಾಯಿತು. ಇಂಟರಾಕ್ಟ್ ಕ್ಲಬ್ ನೂತನ ಅಧ್ಯಕ್ಷರಾಗಿ ಪ್ರೀತಮ್, ಕಾರ್ಯದರ್ಶಿಯಾಗಿಬನಶ್ರೀ ಅಧಿಕಾರ ವಹಿಸಿಕೊಂಡು. ಶಾಲೆಯ ವಿದ್ಯಾರ್ಥಿಗಳಿಗೆ ಡಿಕ್ಷನರಿ, ಪೆನ್, ನೋಟ್‌ಬುಕ್ ವಿತರಿಸಲಾಯಿತು. ಟ್ರಸ್ಟ್ ಅಧ್ಯಕ್ಷರಾದ ರಾಮಚಂದ್ರ, ಮುಷ್ತಕ್ ಆಲಿ, ಪರಮೇಶ್, ಗಣೇಶ್, ಆರ್.ಮನೋಹರ್, ಪ್ರೀತಮ್, ರೂಪ, ಬನಶ್ರಿ, ಮುಖ್ಯಶಿಕ್ಷಕ ಸೂರ್ಯನಾರಾಯಣ್ ಮತ್ತಿತರು ಉಪಸ್ಥಿತರಿದ್ದರು.
ಶಿವಮೊಗ್ಗದ ನಗರದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ರೋಟರಿ ಇಂಟರಾಕ್ಟ್ ಕ್ಲಬ್ ಪದಗ್ರಹಣ ಕಾರ್ಯಕ್ರಮ ನಡೆಯಿತು.