ಸಾರಾಂಶ
ಮಣಿಪುರ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಮಣಿಪುರ ರೋಟರಿಯಿಂದ ಪ್ರವರ್ತಿಸಲ್ಪಟ್ಟ ಇಂಟರ್‍ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷ ಚಿರಾಗ್ ಅವರಿಗೆ ನಿಕಟಪೂರ್ವ ಅಧ್ಯಕ್ಷ ಮನ್ವಿತ್ ಅವರಿಂದ ಅಧಿಕಾರ ಹಸ್ತಾಂತರಿಸಿ, ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಕನ್ನಡಪ್ರಭ ವಾರ್ತೆ ಕಟಪಾಡಿ
ಪ್ರೌಢಾವಸ್ಥೆಯಲ್ಲಿಯೇ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಯಲ್ಲಿಯೇ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪರಹಿತ ಚಿಂತನೆ ಸೇವಾದರ್ಶ ಮೌಲ್ಯಗಳನ್ನು ಜಾಗೃತಗೊಳಿಸಿ, ಮಾನವೀಯ ಮೌಲ್ಯಗಳೊಂದಿಗೆ ಸಮರ್ಥ ನಾಯಕತ್ವವನ್ನು ರೂಪಿಸುವಲ್ಲಿ ಇಂಟರ್‍ಯಾಕ್ಟ್ ಉತ್ತಮ ವೇದಿಕೆಯಾಗಿದೆ ಎಂದು ರೋಟರಿ ಜಿಲ್ಲಾ ಸಮುದಾಯ ದಳದ ಜಿಲ್ಲಾ ಚೇರ್‍ಮನ್ ಬಿ.ಪುಂಡಲೀಕ ಮರಾಠೆ ಹೇಳಿದರು.ಅವರು ಶುಕ್ರವಾರ ಮಣಿಪುರ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಮಣಿಪುರ ರೋಟರಿಯಿಂದ ಪ್ರವರ್ತಿಸಲ್ಪಟ್ಟ ಇಂಟರ್‍ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷ ಚಿರಾಗ್ ಅವರಿಗೆ ನಿಕಟಪೂರ್ವ ಅಧ್ಯಕ್ಷ ಮನ್ವಿತ್ ಅವರಿಂದ ಅಧಿಕಾರ ಹಸ್ತಾಂತರಿಸಿ, ಪದಾಧಿಕಾರಿಗಳ ಪದಗ್ರಹಣವನ್ನು ನೆರವೇರಿಸಿ ಮಾತನಾಡಿದರು.ವಿದ್ಯಾರ್ಥಿ ಹಂತದಲ್ಲಿಯೇ ಅವಕಾಶಗಳನ್ನು ಬಳಸಿಕೊಂಡಾಗ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಿ ಯೋಚಿತ ಗುರಿಯನ್ನು ಮುಟ್ಟಲು ಸಾಧ್ಯ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಮಣಿಪುರ ರೋಟರಿ ನಿಕಟಪೂರ್ವ ಅಧ್ಯಕ್ಷ ಮೋಂತು ಡಿಸೋಜ ವಹಿಸಿದ್ದರು. ವಲಯ ಸೇನಾನಿ ಜೋನ್ ಸಿಕ್ವೇರ, ಲಾರೆನ್ಸ್ ಸಿಕ್ವೇರ, ಶಾಲಾ ಮುಖ್ಯಶಿಕ್ಷಕಿ ರೂಪರೇಖಾ ಎಚ್., ಇಂಟರ್‍ಯಾಕ್ಟ್ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.ರೋಟರಿ ಕಾರ್ಯದರ್ಶಿ ಗುರುರಾಜ್ ಭಟ್ ಸ್ವಾಗತಿಸಿದರು. ಮೊಹಮ್ಮದ್ ಶರೀಫ್ ನಿರೂಪಿಸಿದರು. ಇಂಟರ್‍ಯಾಕ್ಟ್ ಮಾರ್ಗದರ್ಶಿ ಶಿಕ್ಷಕ ಸತೀಶ್ ಸಾಲಿಯಾನ್ ವಂದಿಸಿದರು.