ವಿದ್ಯಾರ್ಥಿಗಳಿಂದ ಪರಸ್ಪರ ಅವಲಂಬನೆ ಚಟುವಟಿಕೆ ಪ್ರದರ್ಶನ

| Published : Dec 04 2024, 12:33 AM IST

ಸಾರಾಂಶ

ಸಮಾಜದಲ್ಲಿ ಎಲ್ಲರನ್ನು ನಾವು ಗೌರವಿಸಬೇಕು ಎಂಬುದನ್ನು ವಿದ್ಯಾರ್ಥಿಗಳು ಆಟದ ಮೂಲಕ ತಿಳಿಸಿಕೊಟ್ಟಿದ್ದಾರೆ. ಜನತೆ ಈ ಚಟುವಟಿಕೆಯ ಮುಖಾಂತರ ಅರ್ಥೈಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಭಾರತೀನಗರ

ಸಬ್ಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪರಸ್ಪರ ಅವಲಂಬನೆ ಚಟುವಟಿಕೆ ಪ್ರದರ್ಶನ ಕಾರ್ಯಕ್ರಮ ಜರುಗಿತು.

ಸಾರ್ವಜನಿಕರ ಶಿಕ್ಷಣ ಇಲಾಖೆ, ದೇಶ್ ಅಪ್ನಾಯೇನ್ ಸಹಯೋಗ್ ಫೌಂಡೇಷನ್ ಮುಂಬೈ ಸಹಯೋಗದಲ್ಲಿ ಆಕ್ಟಿಜನ್ ಕ್ಲಬ್ ಕಾರ್ಯಕ್ರಮದ ಅಂಗವಾಗಿ ಶಾಲೆ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಪರಸ್ಪರ ವೃತ್ತಿ ಗೌರವದ ಬಗ್ಗೆ ಚಟುವಟಿಕೆಗಳ ಮುಖಾಂತರ ತಿಳಿಸಿಕೊಟ್ಟರು.

ಕಾರ್ಯಕ್ರಮದ ಸಂಯೋಜಕ ವೈ.ಎನ್.ಚಂದ್ರಕುಮಾರ್ ಮಾತನಾಡಿ, ಸಮಾಜದಲ್ಲಿ ಎಲ್ಲರನ್ನು ನಾವು ಗೌರವಿಸಬೇಕು ಎಂಬುದನ್ನು ವಿದ್ಯಾರ್ಥಿಗಳು ಆಟದ ಮೂಲಕ ತಿಳಿಸಿಕೊಟ್ಟಿದ್ದಾರೆ. ಜನತೆ ಈ ಚಟುವಟಿಕೆಯ ಮುಖಾಂತರ ಅರ್ಥೈಸಿಕೊಳ್ಳಬೇಕೆಂದರು.

ಈ ವೇಳೆ ಶಾಲೆ ಎಡಿಎಂಸಿ ಅಧ್ಯಕ್ಷ ಮಂಚಲಿಂಗೇಗೌಡ, ಕೃಷ್ಣ, ಶಾಲೆಯ ಶಿಕ್ಷಕರಾದ ಮೋಹನ್‌ಕುಮಾರ್, ಕೌಶಲ್ಯ ಸಿಂಧು ಸುಮಾ .ಲೀಲಾವತಿ ಏರಿದಂತೆ ಹಲವರಿದ್ದರು.

ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ ಹೊಂದಬೇಕು: ಅಣ್ಣೂರು ಸತೀಶ್

ಕನ್ನಡಪ್ರಭ ವಾರ್ತೆ ಭಾರತೀನಗರ

ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ ಹೊಂದಬೇಕು ಎಂದು ಪರಿಸರ ಜಾಗೃತಿ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಅಣ್ಣೂರು ಸತೀಶ್ ತಿಳಿಸಿದರು.

ಕೂಳಗೆರೆ ಗ್ರಾಮದಲ್ಲಿ ಭಾರತೀ ಪದವಿ ಪೂರ್ವ ಕಾಲೇಜಿನಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾಯೋಜನೆ ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು. ಜೊತೆಗೆ ನಮ್ಮ ಮನೆ-ಹೊಲ, ಗದ್ದೆಗಳಲ್ಲಿ, ರಸ್ತೆ ಬದುಗಳಲ್ಲಿ ಮರಗಿಡಗಳನ್ನು ಬೆಳೆಸಿ ಪೋಷಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದರು.

ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ ಮತ್ತು ಜಲಸಂರಕ್ಷಣೆ ಕಾರ್ಯಗಳು ಕೇವಲ ಸರ್ಕಾರದ ಮೇಲೆ ಅವಲಂಬಿತವಾಗಬಾರದು. ಜನರು ತಮ್ಮ ಹೊಣೆಗಾರಿಕೆ ಇದೆ ಎಂದು ತಿಳಿದು ಕೆಲಸಮಾಡಬೇಕು ಎಂದು ಸಲಹೆ ನೀಡಿದರು.

ಪರಿಸರ ಜಾಗೃತಿ ವೇದಿಕೆ ನಿರ್ದೇಶಕ ಅಣ್ಣೂರು ಜಗದೀಶ್ ಅವರು ಪರಿಸರದ ಬಗ್ಗೆ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ರಾಷ್ಟ್ರೀಯ ಸೇವಾಯೋಜನೆಯ ಶಿಬಿರಾಧಿಕಾರಿ ಎಸ್.ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪರಿಸರ ಜಾಗೃತಿ ವೇದಿಕೆಯ ಉಪಾಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ, ನಿರ್ದೇಶಕರಾದ ಮಣಿಗೆರೆ ರಾಮಚಂದ್ರೇಗೌಡ, ಆಸರೆಸೇವಾಟ್ರಸ್ಟ್ ಅಧ್ಯಕ್ಷ ರಘುವೆಂಕಟೇಗೌಡ, ಸಹ ಶಿಬಿರಾಧಿಕಾರಿ ಶ್ರೀದತ್ ಸೇರಿದಂತೆ ಹಲವರಿದ್ದರು.