ಅಂಕಪಟ್ಟಿಗೆ ಸೀಮಿತವಾಗಗಿರಿ

| Published : Jul 10 2025, 01:45 AM IST

ಸಾರಾಂಶ

. ಅಧ್ಯಾಪಕರು ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಉನ್ನತ ಶಿಕ್ಷಣದ ಪಠ್ಯಕ್ರಮಗಳು ಉದ್ಯೋಗ ಸೃಷ್ಠಿಸಬೇಕು.

ಕನ್ನಡಪ್ರಭ ವಾರ್ತೆ ನಂಜನಗೂಡುಶಿಕ್ಷಣ ಆತ್ಮವಿಶ್ವಾಸ ಬೆಳೆಸುವಂತಾಗಬೇಕೆ ಹೊರತು, ಅಂಕಪಟ್ಟಿಗೆ ಸೀಮಿತವಾಗಬಾರದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವೆ ಎಂ.ಕೆ. ಸವಿತಾ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಘಟಕವು ರಾಜ್ಯ ಗುಣಮಟ್ಟ ಭರವಸೆ ಘಟಕದ ಸಹಯೋಗದೊಂದಿಗೆ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಮತ್ತು ಶ್ರೇಷ್ಠತೆಯನ್ನು ಹೆಚ್ಚಿಸುವ ತಂತ್ರಗಳು ಎಂಬ ವಿಷಯ ಕುರಿತು ನಡೆದ ಒಂದು

ದಿನದ ಪ್ರಾದೇಶಿಕ ಮಟ್ಟದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣದಲ್ಲಿ ಪೋಷಕರು ಸಾಕಷ್ಟು ವಿಚಾರಗಳನ್ನು ಕಲಿಯಬೇಕಾಗಿದೆ. ಶಿಕ್ಷಣ

ಕೊಡಿಸುವಾಗ ಗೊಂದಲವಿದೆ. ಅಧ್ಯಾಪಕರು ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಉನ್ನತ ಶಿಕ್ಷಣದ ಪಠ್ಯಕ್ರಮಗಳು ಉದ್ಯೋಗ ಸೃಷ್ಠಿಸಬೇಕು. ಆತ್ಮವಿಶ್ವಾಸ ಬೆಳೆಸಬೇಕೇ ಹೊರತು ಅಂಕಪಟ್ಟಿಗಳಿಗೆ ಸೀಮಿತವಾಗಬಾರದು. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು, ಉದ್ಯೋಗಾಧಾರಿತ ಶಿಕ್ಷಣವನ್ನು ಪಡೆಯಲು ಸಿದ್ಧರಾಗಿದ್ದಾರೆ ಹೊರತು ಉನ್ನತ ಶಿಕ್ಷಣವನ್ನಲ್ಲ ಎಂದರು.

ಜೆಎಸ್‌ಎಸ್‌ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಎನ್. ವಾಣಿಶ್ರೀ, ಅವರು ಭಾರತ ದೇಶ ಅಭಿವೃದ್ಧಿ ಹೊಂದುತ್ತದೆ. ಇನ್ನೂ ಕೆಲವೇ ವರ್ಷಗಳಲ್ಲಿ ಅದು ಸಾಧ್ಯವಾಗುವುದು ಗುಣಮಟ್ಟದ ಶಿಕ್ಷಣದಿಂದ ಮಾತ್ರ. ಶಿಕ್ಷಣ ಎಂದರೆ ಪ್ರಕೃತಿ ಮತ್ತು ವ್ಯಕ್ತಿಯ ಸಮಗ್ರ ಬೆಳವಣಿಗೆಯೊಂದಿಗೆ ಬೆಸೆಯಬೇಕು ಎಂದು ರವೀಂದ್ರನಾಥ್ ಟ್ಯಾಗೂರ್‌ ಅವರು ನಂಬಿದ್ದರು. ಯುಜಿಸಿ ವಿದ್ಯಾರ್ಥಿಗಳಿಗೆ ಕೌಶ್ಯಲ್ಯಾಧಾರಿತ ಗುಣಮಟ್ಟದ ಶಿಕ್ಷಣ, ಕಾಲೇಜಿನ ಅಭಿವೃದ್ಧಿ, ಸಂಶೋಧನೆ ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಠಿ ಮಾಡಿಕೊಟ್ಟಿದೆ ಎಂದು ತಿಳಿಸಿದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಅವರು ಅಧ್ಯಾಪಕರು ಸ್ವಯಂ ಶಿಸ್ತನ್ನು

ಬೆಳೆಸಿಕೊಂಡು ಅಂತರಂಗವನ್ನು ಬಲಪಡಿಸಿಕೊಳ್ಳಬೇಕು. ಬಸವಣ್ಣನವರ

ವಚನದಂತೆ ಬೆಲ್ಲದ ಪುತ್ಥಳಿಯಾಗಿರಬೇಕು ಎನಗಿಂತ ಕಿರಿಯರಿಲ್ಲ, ನಿಮಗಿಂತ ಹಿರಿಯರಿಲ್ಲ ಎನ್ನುವ ಮನೋಭಾವನೆಯನ್ನು

ಬೆಳೆಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲ ಡಾ. ಸಿ ಎಸ್. ಹೊನ್ನೇಗೌಡ ಅವರು ಯುಜಿಸಿ ನಿಯಮಾವಳಿಗಳು ವಿದ್ಯಾರ್ಥಿಗಳಲ್ಲಿ ಸ್ವಯಂ ಉದ್ಯೋಗದ ಜಾಗೃತಿಯನ್ನುಂಟು ಮಾಡಿ ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತಹ ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ ನೀಡುತ್ತಿದೆ ಎಂದು ತಿಳಿಸಿದರು.

ಮೊದಲನೇ ಗೋಷ್ಠಿಯಲ್ಲಿ ಡಾ. ಕೆ. ವಿಕ್ರಂ ಉಪನ್ಯಾಸ ನೀಡಿದರು.

ಆಂತರಿಕ ಗುಣಮಟ್ಟ ಭರವಸೆ ಘಟಕದ ಸಂಚಾಲಕರಾದ ಡಾ.ಬಿ.ಕೆ. ಕೆಂಡಗಣ್ಣಸ್ವಾಮಿ, ಕಾರ್ಯಗಾರದ ಸಂಚಾಲಕ ಎಚ್.ಎಸ್. ಪರಶಿವ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಶಿವಕುಮಾರ್, ಅಧ್ಯಾಪಕರು, ಅಧ್ಯಾಪಕೇತರರು ಇದ್ದರು. ಕೀರ್ತನ ಮತ್ತು ತೀರ್ಥನ ಪ್ರಾರ್ಥಿಸಿದರು, ಎಂ.ಎಸ್. ದೀಪಾಲಿ

ಸ್ವಾಗತಿಸಿದರು, ಎಚ್.ಎಸ್. ಪರಶಿವ ವಂದಿಸಿದರು, ಎಂ.ಎನ್. ಜಯಶೀಲಾ ನಿರೂಪಿಸಿದರು.