ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು ರಾಜ್ಯ ಸರಕಾರ ಮಾದಿಗ ಸಮುದಾಯದ 35 ವರ್ಷಗಳ ಹೋರಾಟಕ್ಕೆ ಮನ್ನಣೆ ನೀಡಿ, ಮೀಸಲಾತಿ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಸರಕಾರಕ್ಕೆ, ಸಚಿವರಿಗೆ ಹಾಗೂ ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಯುವ ಮುಖಂಡರಾದ ಕೊಡಿಯಾಲ ಮಹದೇವ್ ಅವರ ನೇತೃತ್ವದಲ್ಲಿ ಹೋರಾಟಗಾರರ ಸಮ್ಮಿಲನ ಮತ್ತು ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚಿಸಲು ನಗರದ ಮುರುಗರಾಜೇಂದ್ರ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು.ಸಭೆಯಲ್ಲಿ ತುಮಕೂರು ಜಿಲ್ಲಾ ಒಳಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣ, ಜಿಲ್ಲಾಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಕೆಂಚಮಾರಯ್ಯ,ಆರ್.ರಾಮಕೃಷ್ಣ್ಪ,ಮಾಜಿ ಶಾಸಕರಾದ ಗಂಗಹನುಮಯ್ಯ,ಮುಖಂಡರಾದ ಪಾವಗಡ ಶ್ರೀರಾಮ್, ವಾಲೆಚಂದ್ರಯ್ಯ,ಗಂಗಾಧರ್,ಮಾಜಿ.ಜಿ.ಪಂ.ಸದಸ್ಯ ನಾರಾಯಣಮೂರ್ತಿ, ನರಸೀಯಪ್ಪ, ಶೆಟ್ಟಾಳಯ್ಯ, ಮಾರುತಿ ಗಂಗಹನುಮಯ್ಯ, ಉರ್ಡಿಗೆರೆ ಕೆಂಪರಾಜು, ಎ.ರಂಜನ್, ಜೆಸಿಬಿ ವೆಂಕಟೇಶ್, ಡಾ.ಕೊಟ್ಟ ಶಂಕರ್, ಡಾ.ಮುಕುಂದ್, ಗೂಳೂರು ರಾಜಣ್ಣ, ಹೆಬ್ಬತ್ತನಹಳ್ಳಿ ಶ್ರೀನಿವಾಸ್, ಗೂಳರಿವೆ ನಾಗರಾಜು,ಸಾಗರ್, ಪಿ.ಎನ್.ರಾಮಯ್ಯ, ಕೇಬಲ್ ರಘು, ಎಂ.ಚಂದ್ರಪ್ಪ ಚರ್ಚೆ ನಡೆಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾರ್ಯಕ್ರಮ ಆಯೋಜಿಸಿದ್ದ ಕೊಡಿಯಾಲ ಮಹದೇವ್, ವರದಿಯಲ್ಲಿ ಅಲ್ಪ, ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು ಒಳ ಮೀಸಲಾತಿ ಕಲ್ಪಿಸಿದೆ. ಮೀಸಲಾತಿ ಪ್ರಮಾಣದಲ್ಲಿ ವ್ಯತ್ಯಾಸ ಮಾಡಿಕೊಳ್ಳಲು ಅವಕಾಶವಿದೆ ಎಂದರು. ಜಿಲ್ಲಾ ಒಳಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣ ಮಾತನಾಡಿ, ಬೆಂಗಳೂರಿನಲ್ಲಿ ಆಗಸ್ಟ್ 31ಕ್ಕೆ ಈ ಸಂಬಂಧ ಒಂದು ಸಭೆ ಕರೆದಿದ್ದು, ಅಲ್ಲಿನ ಸಭೆಯ ತೀರ್ಮಾನದ ನಂತರ ಮುಂದಿನ ರೂಪುರೇಷೆಗಳ ಕುರಿತು ಚರ್ಚೆ ನಡೆಸೋಣ ಎಂದರು. ಜಿ.ಪಂ ಮಾಜಿ.ಸದಸ್ಯ ಕೆಂಚಮಾರಯ್ಯ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ , ಮಾದಿಗ ದಂಡೋರದ ಹಿರಿಯ ಹೋರಾಟಗಾರ ಪಾವಗಡ ಶ್ರೀರಾಮ್, ಹಿರಿಯರಾದ ಮಾಜಿ ಶಾಸಕ ಗಂಗಹನುಮಯ್ಯ ಮಾತನಾಡಿದರು.