ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಅತಿಸೂಕ್ಷ್ಮ ಅಲೆಮಾರಿ, ಅರೆಅಲೆಮಾರಿ ಜನಾಂಗಕ್ಕೆ ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ವರದಿ ಮಾರಕವಾಗುವಂತಿದೆ ಎಂದು ರೈತಸಂಘದ ಮುಖಂಡ ನಾರಾಯಣಸ್ವಾಮಿ ತಿಳಿಸಿದರು.ಹೋಬಳಿಯ ಕೃಷ್ಣಾಪುರ ಗ್ರಾಮದಲ್ಲಿ ಸಿಂಧೋಳ, ಸಿಳ್ಳೆಕ್ಯಾತದಂತಹ ಉಪಜಾತಿಗಳಿಗೆ ಆಗುವ ಅನ್ಯಾಯದ ಕುರಿತು ಮಾತನಾಡಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಸರ್ಕಾರಕ್ಕೆ ಸಲ್ಲಿಸಿರುವ ಒಳಮೀಸಲಾತಿ ವರದಿಯಲ್ಲಿ 49ಪರಿಶಿಷ್ಟ ಜಾತಿ ಹಾಗೂ ವರ್ಗ1(ಎ)ರಲ್ಲಿ ಸಿಂಧೋಳ, ಸಿಳ್ಳೆಕ್ಯಾತ, ದೊಂಬಿದಾಸದಂತಹಅತಿ ಸೂಕ್ಷ್ಮ ಹಿಂದುಳಿದ ಅಲೆಮಾರಿಜನಾಂಗ ಈ ವರದಿಯಲ್ಲಿ ಸೇರಿದೆ. ಭಿಕ್ಷೆ ಬೇಡುತ್ತ ಊರೂರು ಅಲೆಯುವ ಈ ಪಂಗಡಗಳು ಇತರೆ ಪರಿಶಿಷ್ಟ ಜಾತಿಗಳೊಂದಿಗೆ ಸವಲತ್ತು ಪಡೆಯಲು ಮುಂದಿನ ದಿನದಲ್ಲಿಕಷ್ಟವಾಗಲಿದೆ ಎಂದರು.
ಸರ್ಕಾರಕ್ಕೆ ಈ ನಿಟ್ಟಿನಲ್ಲಿ ವಾಸ್ತವ ಸಂಗತಿ ತಿಳಿಸಲು ಇದೇ ಆ.28ರಂದು ಕೆ.ಆರ್.ಪೇಟೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಈ ಹಿಂದೆ ಇರುವಂತೆ ಅಲೆಮಾರಿ, ಅರೆಅಲೆಮಾರಿ ನಿಗಮ ಮುಂದುವರೆಯಲಿ ಎಂದು ಆಗ್ರಹಿಸಿದರು.ಭೋವಿ, ಕೊರಮ, ಬಂಜಾರದಂತಹ ಹಲವು ಜಾತಿಗಳಲ್ಲಿ ಬಹುಸಂಖ್ಯಾತರು, ರಾಜಕೀಯ ಸ್ಥಾನಮಾನದವರು ಇದ್ದಾರೆ. ಸಿಂಧೋಳ, ಸಿಳ್ಳೆಕ್ಯಾತ, ದೊಂಬಿದಾಸ ಪಂಗಡಗಳಲ್ಲಿ ಯಾವುದೇ ರಾಜಕಾರಣಿ, ಉನ್ನತ ಹುದ್ದೆ, ಅಧಿಕಾರಿಗಳು ಇಲ್ಲ. ಇವರೊಂದಿಗೆ ವರ್ಗ 1(ಎ) ಸೇರ್ಪಡೆಯಾದರೆಕಷ್ಟವಾಗಲಿದೆ. ಮುಂದಿನ ದಿನದಲ್ಲಿ ಸವಲತ್ತುಗಳಿಗೆ ಪೈಪೋಟಿ ಮಾಡಲು ಸಾಧ್ಯವಾಗಲಾರದು ಎಂದು ನುಡಿದರು.
ಕಳೆದ ಏ.29 ರಂದು ಗ್ರಾಮಕ್ಕೆಅಲೆಮಾರಿಅಭಿವೃದ್ಧಿ ನಿಗಮದ ಅಧ್ಯಕ್ಷೆ ಪವಿತ್ರ ಆಗಮಿಸಿದ್ದರು. 15 ದಿನದೊಳಗೆ ವಸತಿರಹಿತರಿಗೆ ನಿವೇಶನ, ಮನೆ ನಿರ್ಮಿಸಲು, ಸ್ಮಶಾನದಂತಹ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿಕೊಡಲು ಅಧಿಕಾರಿಗಳಿಗೆ ತಿಳಿಸಿದ್ದರು.ಇ ದುವರೆವಿಗೂ ಏನು ಆಗಿಲ್ಲ. ನ್ಯಾಯಕ್ಕಾಗಿ ಹೋರಾಡಲು ಆಗಮಿಸುವಂತೆ ಮನವಿ ಮಾಡಿದರು.ಈ ವೇಳೆ ಹಂದಿ ಜೋಗಿ ಜನಾಂಗದ ತಾಲೂ ಉಪಾಧ್ಯಕ್ಷ ಶಿವಣ್ಣ, ದೊಂಬಿದಾಸಜನಾಂಗದ ಮಾಣಿಕನಹಳ್ಳಿ ಅಧ್ಯಕ್ಷ ಮರಿಯಪ್ಪ, ಸಿಳ್ಳೆಕ್ಯಾತ ಜನಾಂಗದ ಕೃಷ್ಣಾಪುರದೇವರಾಜು, ಮುಖಂಡರಾಮು, ರಾಮಣ್ಣ, ಮಾರಪ್ಪ, ಹನುಮಂತು, ಶಿವಣ್ಣ, ಅಂಜನಪ್ಪ, ಕೃಷ್ಣಪ್ಪ ಇದ್ದರು.