- ಇಂಟಿಗ್ರೇಟೆಡ್ ಕಮ್ಯೂನಿಕೇಷನ್, ಎಐ ಮತ್ತಿತರೆ ವಿಷಯಗಳ ಚರ್ಚೆ
- - -ದಾವಣಗೆರೆ: ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದಾವಣಗೆರೆ ವತಿಯಿಂದ 2 ದಿನಗಳ ಇಂಟಿಗ್ರೇಟೆಡ್ ಕಮ್ಯೂನಿಕೇಷನ್ ಅಂಡ್ ಸ್ಮಾರ್ಟ್ ಎನ್ವಿರಾನ್ಮೆಂಟ್ಸ್ **(ICICSE-2026)** ಅಂತಾರಾಷ್ಟ್ರೀಯ ಸಮ್ಮೇಳನವನ್ನು ಇತ್ತೀಚೆಗೆ ಜೆಐಟಿಡಿ ಸಭಾಂಗಣದಲ್ಲಿ ಉದ್ಘಾಟಿಸಲಾಯಿತು.
ಸಮ್ಮೇಳನದಲ್ಲಿ ಅಕಾಡೆಮಿಷಿಯನ್‌ಗಳು, ಸಂಶೋಧಕರು, ಕೈಗಾರಿಕಾ ತಜ್ಞರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ, ಇಂಟಿಗ್ರೇಟೆಡ್ ಕಮ್ಯೂನಿಕೇಷನ್, ಕೃತಕ ಬುದ್ಧಿಮತ್ತೆ, ಬುದ್ಧಿವಂತ ತಂತ್ರಜ್ಞಾನಗಳು ಮತ್ತು ಸ್ಮಾರ್ಟ್ ಎಂಜಿನಿಯರಿಂಗ್ ಪರಿಹಾರಗಳ ಹೊಸ ಪ್ರವೃತ್ತಿಗಳು ಹಾಗೂ ಆವಿಷ್ಕಾರಗಳ ಕುರಿತು ಚರ್ಚಿಸಿದರು.ಸಮ್ಮೇಳನದ ಮುಖ್ಯ ಅಥಿತಿಗಳಾಗಿ ಇಟಲಿಯ, ಯೂನಿವರ್ಸಿಟಿ ಆಫ್ ಟೆರಾಮೋದ ಪ್ರಾಧ್ಯಾಪಕ ಡಾ.ಡ್ಯಾನಿಲೋ ಫೆಲೂಸಿ ಹಾಗೂ ಇಟಲಿಯ, ಟೋರ್ಗಾಟ್ ಯೂನಿವರ್ಸಿಟಿ ಆಫ್ ರೋಮ್ಮ ಪ್ರಾಧ್ಯಾಪಕ ಡಾ. ಸರ್ಜಿಯೋ ಸ್ಪಾನೋ ಹಾಗೂ ಮುಖ್ಯ ಭಾಷಣಕಾರರಾಗಿ ಪರ‍್ಚುಗಲ್ ಯೂನಿವರ್ಸಿಡಾಡೇ ಪರ‍್ಟುಕಲೆನ್ಸ್ ಪ್ರಾಧ್ಯಾಪಕ ಡಾ. ಫರ‍್ನಾಂಡೋ ಮೊರೇರಾ ಮತ್ತು ಲಿತುವೇನಿಯಾದ ಕವುನಾಸ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕ ಡಾ.ಜೇವಲ್ ಸೇಂಗುಪ್ತಾ ಭಾಗವಹಿಸಿ, ಕಮ್ಯೂನಿಕೇಷನ್ ಸಿಸ್ಟಮ್‌ಗಳು, ಕೃತಕ ಬುದ್ಧಿಮತ್ತೆ ಹಾಗೂ ಸ್ಮಾರ್ಟ್ ತಂತ್ರಜ್ಞಾನಗಳ ಇತ್ತೀಚಿನ ಪ್ರಗತಿಗಳ ಕುರಿತು ಉಪನ್ಯಾಸ ನೀಡಿದರು.
ಬೆಂಗಳೂರಿನ ಜೆಜಿಐ ಅಧ್ಯಕ್ಷ ಡಾ.ಚೆನ್ರಾಜ್ ರಾಯಚಂದ್ ಹಾಗೂ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದಾವಣಗೆರೆಯ ಅಧ್ಯಕ್ಷ ಅಚಲ್ ಚಂದ್ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಡಿ.ಬಿ.ಗಣೇಶ, ಸಲಹೆಗಾರ ಡಾ.ಎಸ್.ಮಂಜಪ್ಪ, ಸಮ್ಮೇಳನದ ಆಯೋಜನಾ ಅಧ್ಯಕ್ಷರಾದ ಜೆಐಟಿ ದಾವಣಗೆರೆ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ. ಬಿ.ಎಂ. ಲತಾ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ ವಿಭಾಗದ ಮುಖ್ಯಸ್ಥ ಡಾ. ಅಜೀಜ್ ಖಾನ್ ಎಫ್. ಪಠಾನ್, ಸಮ್ಮೇಳನದ ಸಂಯೋಜಕ ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಎಚ್.ಆರ್. ಡಾ.ಚೇತನ್, ಡಾ. ಬಿ.ಎಂ. ನಂದೀಶ್ ಹಾಗೂ ಜೆಐಟಿ ದಾವಣಗೆರೆ, ವಿವಿಧ ವಿಭಾಗಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
- - -
-17ಕೆಡಿವಿಜಿ31: ದಾವಣಗೆರೆಯ ಜೈನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ICICSE-2026 ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.