ಸಾರಾಂಶ
ಸಿದ್ದನಕೊಳ್ಳದಲ್ಲಿ ಜ.15ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಜರುಗಿದ 2024ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿಂದಗಿಯ ಪ್ರತಿಭೆ ನಟ ತುಷಾರ್ ಚಿತ್ರಕ್ಕೆ ಪ್ರಶಸ್ತಿ ದೊರೆತಿದೆ.
ಕನ್ನಡಪ್ರಭ ವಾರ್ತೆ ಸಿಂದಗಿ
ಬಾಗಲಕೋಟೆಯ ಸಿದ್ದನಕೊಳ್ಳದಲ್ಲಿ ಜ.15ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಜರುಗಿದ 2024ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿಂದಗಿಯ ಪ್ರತಿಭೆ ನಟ ತುಷಾರ್ ಚಿತ್ರಕ್ಕೆ ಪ್ರಶಸ್ತಿ ದೊರೆತಿದೆ.ರಾಜ್ಯದ ಮೂಲೆ ಮೂಲೆಗಳಿಂದ ನೂರಾರು ಚಲನಚಿತ್ರಗಳು ಆಯ್ಕೆಗೆ ಅರ್ಜಿ ಸಲ್ಲಿಸಿದ್ದ ಪ್ರಯುಕ್ತ ಮಲಗೊಂಡ ಫಿಲಂ ಪ್ರೊಡಕ್ಷನ್ ಅಡಿಯಲ್ಲಿ ತಯಾರಾದ ತುಷಾರ್ ಚಲನಚಿತ್ರ ಕಳುಹಿಸಲಾಗಿತ್ತು. ಚಿತ್ರ ನೋಡಿದ ಹಿರಿಯ ನಿರ್ದೇಶಕರು, ಕಲಾವಿದರು, ಆಯ್ಕೆ ಸಮಿತಿ ತುಷಾರ್ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾಗಿ ತುಷಾರ್ ಚಲನಚಿತ್ರದ ನಟ ನಿರ್ದೇಶಕ ನಿರ್ಮಾಪಕ ವಿಶ್ವಪ್ರಕಾಶ ಟಿ.ಮಲಗೊಂಡ ಅವರಿಗೆ ಸಮಾರಂಭದಲ್ಲಿ ಚಲನಚಿತ್ರ ಅವಾರ್ಡ್ ನೀಡುವುದರ ಮೂಲಕ ಸನ್ಮಾನಿಸಿ, ತುಷಾರ್ ಚಲನಚಿತ್ರ ಪ್ರದರ್ಶನಗೊಂಡಿದೆ ಎಂದು ಆಯ್ಕೆ ಸಮಿತಿ ಪ್ರಕಟಿಸಿದೆ.
ಈ ಸಂದರ್ಭದಲ್ಲಿ ಸಿದ್ದನಕೊಳ್ಳ ಮಠದ ಡಾ.ಶಿವಕುಮಾರ ಸ್ವಾಮಿಗಳು, 750ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ ಖಳನಾಯಕ ಚಿತ್ರ ನಟ ಶೋಭರಾಜ್, ಕೆಜಿಎಫ್ ಸಿನಿಮಾ ಖ್ಯಾತಿಯ ಸಾಹಿತ್ಯಗಾರ ಹಾಗೂ ಚಿತ್ರ ನಿರ್ದೇಶಕ ಕಿನ್ನಾಳ ರಾಜ್, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಕೆಪಿಸಿಸಿ ಸದಸ್ಯೆ ರಕ್ಷಿತಾ ಇಟಿ, ಗೋವಾದ ಉದ್ಯಮಿ ಕಾಂಗ್ರೆಸ್ ಹಿರಿಯ ನಾಯಕ ಸಿದ್ದಣ್ಣ ಮೇಟಿ, ನಟ ನಿರ್ದೇಶಕ ನಿರ್ಮಾಪಕ ಡಾ.ಪ್ರಭು ಗಂಜಿಹಾಳ, ಟಿವಿ ಧಾರಾವಾಹಿ ನಟ ನಟಿಯರು, ಸಿನಿಮಾ ನಿರ್ದೇಶಕರು, ಕಲಾವಿದರು ಸೇರಿದಂತೆ ಇನ್ನಿತರರು ಚಲನಚಿತ್ರೋತ್ಸವದಲ್ಲಿ ಇದ್ದರು.