ಕಂಪ್ಲಿಯಲ್ಲಿ ಅಂತರಾಷ್ಟ್ರೀಯ ಕಬಡ್ಡಿ ಸ್ಟೇಡಿಯಂ: ಅರುಣ ಲಕ್ಷ್ಮಿ

| Published : Mar 12 2024, 02:01 AM IST

ಕಂಪ್ಲಿಯಲ್ಲಿ ಅಂತರಾಷ್ಟ್ರೀಯ ಕಬಡ್ಡಿ ಸ್ಟೇಡಿಯಂ: ಅರುಣ ಲಕ್ಷ್ಮಿ
Share this Article
  • FB
  • TW
  • Linkdin
  • Email

ಸಾರಾಂಶ

ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕಂಪ್ಲಿ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಅಭಿವೃದ್ಧಿಯ ಹುಲಿಯಾಗಿದ್ದಾರೆ.

ಕಂಪ್ಲಿ: 2028ರ ವಿಧಾನಸಭಾ ಚುನಾವಣೆಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ 10 ಕ್ಷೇತ್ರದಲ್ಲಿ ಕೆಆರ್‌ಪಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಪಕ್ಷದ ಬೆಂಬಲದಿಂದ ಸರ್ಕಾರ ರಚನೆಯಾದಲ್ಲಿ ಕಂಪ್ಲಿಗೆ ಇಂಟರ್‌ನ್ಯಾಷನಲ್ ಕಬಡ್ಡಿ ಸ್ಟೇಡಿಯಂ ನಿರ್ಮಿಸಲಾಗುವುದು ಎಂದು ಜನಾರ್ದನ್ ರೆಡ್ಡಿ ಧರ್ಮಪತ್ನಿ ಅರುಣಲಕ್ಷ್ಮಿ ಭರವಸೆ ನೀಡಿದರು.ಪಟ್ಟಣದ ಎಸ್ಎನ್ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ಕಂಪ್ಲಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನಿಂದ ಹಮ್ಮಿಕೊಳ್ಳಲಾಗಿದ್ದ ಪ್ರೊ ಕಬಡ್ಡಿ ಸೀಸನ್ 2 ಪಂದ್ಯಾವಳಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕಂಪ್ಲಿ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಅಭಿವೃದ್ಧಿಯ ಹುಲಿಯಾಗಿದ್ದಾರೆ. ಜನಾರ್ದನ ರೆಡ್ಡಿ ಬೆಳ್ಳಗಿರುವುದೆಲ್ಲ ಹಾಲೆಂದು ನಂಬಿದವರು. ಅವರಿಗೆ ಮೋಸ ಮಾಡಿ ಬೆನ್ನಿಗೆ ಚೂರಿ ಹಾಕಿದಂತವರಿಗೆ ಮುಂದಿನ ದಿನಗಳಲ್ಲಿ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದರು.ಇನ್ನು ಪ್ರೊ ಕಬಡ್ಡಿ ಸೀಸನ್-2 ಪಂದ್ಯಾವಳಿಯಲ್ಲಿ 10 ತಂಡಗಳು ಭಾಗಿಯಾಗಿವೆ. ಮೂರು ದಿನಗಳವರೆಗೆ ಪಂದ್ಯಾವಳಿ ಜರುಗಿತು. ಶತಮಾನ ಶಾಲೆ ಎಮ್ಮಿಗನೂರು ತಂಡ ಟೂರ್ನಿಯ ಪ್ರಥಮ ಸ್ಥಾನ ಪಡೆದು ₹60 ಸಾವಿರ ಹಾಗೂ ಟ್ರೋಫಿ, ರಾಕಿ ರೇಂಜರ್ಸ್ ಸುಗ್ಗೇನಹಳ್ಳಿ ತಂಡ ದ್ವಿತೀಯ ಸ್ಥಾನ ಪಡೆದು ₹50ಸಾವಿರ ಹಾಗೂ ಟ್ರೋಫಿ, ಕಂಪ್ಲಿ ಶುಗರ್ ಫ್ಯಾಕ್ಟರಿಯ ರಂಗೋಲಿ ಬಾಯ್ಸ್ ತೃತೀಯ ಸ್ಥಾನ ಪಡೆದು ₹40 ಸಾವಿರ ಹಾಗೂ ಟ್ರೋಫಿ, ಸೆವೆನ್ ಬಾಯ್ಸ್ ತಂಡ ನಾಲ್ಕನೇ ಸ್ಥಾನ ಪಡೆದು ₹30 ಸಾವಿರ ಹಾಗೂ ಟ್ರೋಫಿಯನ್ನು ಮುಡಿಗೇರಿಸಿಕೊಂಡರು. ವಿಜೇತರಿಗೆ ಟ್ರೋಫಿ ಹಾಗೂ ನಗದು ಬಹುಮಾನವನ್ನು ಜನಾರ್ಧನ್ ರೆಡ್ಡಿ ಅವರ ಧರ್ಮಪತ್ನಿ ಅರುಣ ಲಕ್ಷ್ಮಿ ನೀಡಿದರು.ಈ ಸಂದರ್ಭದಲ್ಲಿ ಕನ್ನಡ ಕಿರುತೆರೆಯ ಚಲನ ಚಿತ್ರನಟ ಪ್ರಮೋದ್ ಶೆಟ್ಟಿ, ಕೆಆರ್ ಪಿ ಪಕ್ಷದ ಜಿಲ್ಲಾಧ್ಯಕ್ಷರಾದ ದಮ್ಮೂರು ಶೇಖರ್, ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷ ರಾಘವೇಂದ್ರ, ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ದರಪ್ಪ ನಾಯಕ, ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ವೀರಶೈವ ಲಿಂಗಾಯತ ಯುವ ವೇದಿಕೆಯ ಜಿಲ್ಲಾಧ್ಯಕ್ಷರಾದ ಹೊಸಕೋಟೆ ಜಗದೀಶ್, ಪಕ್ಷದ ಮುಖಂಡರಾದ ಕೆ.ಎಸ್.ದಿವಾಕರ್, ಗೋನಾಳ ರಾಜಶೇಖರ್ ಗೌಡ, ವೆಂಕಟರಮಣಯ್ಯ, ಉಮಾ ರಾಜ್, ಪ್ರಭು ಶೇಖರ್ ಗೌಡ, ಕೊಳಗಲ್ ಅಂಜಿನಿ, ಬಿ.ಮಲ್ಲಿಕಾರ್ಜುನ ಆಚಾರ್ಯ, ಮುನ್ನಾಭಾಯಿ, ಕುಡೇಕರ್ ರಾಜೇಶ್, ಸುರೇಶ್, ಪಾಲ್ತೂರ್, ದಾನಪ್ಪ, ವೆಂಕಟೇಶ್, ಪಟ್ಟಣದ ಮುಖಂಡರಾದ ಡಾ.ಎ.ಸಿ.ದಾನಪ್ಪ, ಕಂಪ್ಲಿ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನ ಅಧ್ಯಕ್ಷ ಸಿ.ಎನ್. ಸೂರ್ಯನಾರಾಯಣ, ಗೌರವ ಅಧ್ಯಕ್ಷ ಎಂ.ಮಾರುತಿ, ಪ್ರಕಾಶ ದುರ್ಗೇಶ್, ಪ್ರಮುಖರಾದ ಮೋಹನಕುಮಾರ್ ದಾನಪ್ಪ, ಐಬು, ಬಸವರಾಜ್ ಇದ್ದರು.