ಸಾರಾಂಶ
ಸೊವೇನಿಯಾ, ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಎಸ್ಟೋನಿಯಾ, ಇಟಲಿ, ಮಲೇಷ್ಯಾ, ಸಿಂಗಾಪುರ, ಸ್ವೀಡನ್, ಇಂಡೋನೇಷ್ಯಾ ಮತ್ತು ಗ್ರೀಸ್ ದೇಶಗಳಿಂದ ಮತ್ತು ಮಹಾರಾಷ್ಟ್ರ, ಕೇರಳ, ತೆಲಂಗಾಣ, ಒಡಿಶಾ, ರಾಜ್‌ಕೋಟ್‌ಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಟೀಮ್ ಮಂಗಳೂರು ವತಿಯಿಂದ ಕರಾವಳಿ ಉತ್ಸವದ ಅಂಗವಾಗಿ ದ.ಕ. ಜಿಲ್ಲಾಡಳಿತದ ಸಹಯೋಗದಲ್ಲಿ ಒಎನ್‌ಜಿಸಿ-ಎಂಆರ್‌ಪಿಎಲ್ ಪ್ರಾಯೋಜಕತ್ವದಲ್ಲಿ ಈ ಬಾರಿಯ ‘ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ’ ಜನವರಿ 18 ಮತ್ತು 19ರಂದು ತಣ್ಣೀರುಬಾವಿ ಬೀಚ್‌ನಲ್ಲಿ ಏರ್ಪಡಲಿದೆ. ಈ ಬಾರಿ ತುಳುನಾಡಿನ ಶಕ್ತಿವಂತ ಗರ್ವದ ಕೋಳಿಯನ್ನು ಸಾಂಕೇತಿಸುವ ಚಿತ್ರದ ಪೋಸ್ಟರ್‌ನ್ನು ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ. ‘ಒಂದೇ ನೆಲ, ಒಂದೇ ಆಕಾಶ, ಒಂದೇ ಕುಟುಂಬ’ ಎಂಬ ಧ್ಯೇಯೋದ್ದೇಶದೊಂದಿಗೆ ಗಾಳಿಪಟ ಹಾರಾಟದ ಮೂಲಕ ಜಗತ್ತಿನ ಎಲ್ಲ ದೇಶಗಳ ಸಂಸ್ಕೃತಿ, ಪದ್ಧತಿ, ಪ್ರಕೃತಿಯನ್ನು ಬೆಸೆಯುವ, ಅರಿಯುವ ಜೊತೆಗೆ ಜಾಗೃತಿ ಮೂಡಿಸುವ ಸಂದೇಶವನ್ನು ಈ ಗಾಳಿಪಟ ಉತ್ಸವದಲ್ಲಿ ಬಾನಿಗೆ ತೋರಣ ಕಟ್ಟಲಾಗುವುದು. ಎರಡು ದಿನಗಳ ಕಾಲ ಸಂಜೆ 3 ಗಂಟೆಯಿಂದ ಗಾಳಿಪಟ ಉತ್ಸವ ಶುರುವಾಗಲಿದೆ. ಸುಮಾರು 500 ಕ್ಕೂ ಹೆಚ್ಚು ವಿವಿಧ ವಿನ್ಯಾಸ, ಗಾತ್ರದ ಗಾಳಿಪಟಗಳು ಇರಲಿದ್ದು, ಯುರೋಪಿನ ಆರೋಫಾಯ್ಲ್ (ಗಾಳಿ ತುಂಬಿ ಬಲೂನ್ ತರಹ ಹಾರುವ ಗಾಳಿಪಟಗಳು), ಸ್ಟಂಟ್ ಕೈಟ್(ಎರಡು ಕೈಯಲ್ಲಿ ಗಾಳಿಯ ದಿಕ್ಕಿಗೆ ಬದಲಾಯಿಸುವುದು), ಜಾಯಿಂಟ್ ಸೀರೀಸ್(ಒಂದೇ ಹಗ್ಗದಲ್ಲಿ ಸಿರೀಸ್ ಗಾಳಿಪಟ ಹಾರಾಟ) ಮುಂತಾದ ಗಾಳಿಪಟಗಳು ಈ ಉತ್ಸವದ ವಿಶೇಷ ಗಾಳಿಪಟಗಳಾಗಿರುತ್ತವೆ. ಸೊವೇನಿಯಾ, ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಎಸ್ಟೋನಿಯಾ, ಇಟಲಿ, ಮಲೇಷ್ಯಾ, ಸಿಂಗಾಪುರ, ಸ್ವೀಡನ್, ಇಂಡೋನೇಷ್ಯಾ ಮತ್ತು ಗ್ರೀಸ್ ದೇಶಗಳಿಂದ ಮತ್ತು ಮಹಾರಾಷ್ಟ್ರ, ಕೇರಳ, ತೆಲಂಗಾಣ, ಒಡಿಶಾ, ರಾಜ್‌ಕೋಟ್‌ಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅಲ್ಲದೆ ಮುಂಬೈ, ಬರೋಡಾ ಮತ್ತು ಅಹಮದಾಬಾದ್‌ನಿಂದಲೂ ಗಾಳಿಪಟ ಹಾರಾಟಗಾರರು ಭಾಗವಹಿಸಲಿದ್ದಾರೆ ಎಂದು ಟೀಮ್ ಮಂಗಳೂರು ತಂಡದ ದಿನೇಶ್ ಹೊಳ್ಳ ತಿಳಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))