ಸಾರಾಂಶ
ದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಚಂದನ ಸ್ಕೂಲ್‌ನಲ್ಲಿ ಡಿ. 10ರಿಂದ 12ರ ವರೆಗೆ ಮೂರು ದಿನಗಳ ಕಾಲ ಬೆಳಗ್ಗೆ 8.30 ರಿಂದ ಸಂಜೆ 4 ಗಂಟೆಯ ವರೆಗೆ ಅಂತಾರಾಷ್ಟ್ರೀಯ ವಿಜ್ಞಾನ ವಿಸ್ತೃತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಟಿ. ಈಶ್ವರ ಹೇಳಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಚಂದನ ಸ್ಕೂಲ್‌ನಲ್ಲಿ ಡಿ. 10ರಿಂದ 12ರ ವರೆಗೆ ಮೂರು ದಿನಗಳ ಕಾಲ ಬೆಳಗ್ಗೆ 8.30 ರಿಂದ ಸಂಜೆ 4 ಗಂಟೆಯ ವರೆಗೆ ಅಂತಾರಾಷ್ಟ್ರೀಯ ವಿಜ್ಞಾನ ವಿಸ್ತೃತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಟಿ. ಈಶ್ವರ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ವಿಶ್ವಮಟ್ಟದ ವಿಜ್ಞಾನಿಗಳಿಂದ ವಿಜ್ಞಾನ ವಿಸ್ತ್ರತ ಕಾರ್ಯಕ್ರಮ ನಡೆಯಲಿದ್ದು, ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಎಜ್ಯುಕೇಶನ್ ಫೌಂಡೇಶನ್ ಹಾಗೂ ಸ್ಕೂಲ್ ಚಂದನ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ. ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಮತ್ತು ಡಾ. ಇಂಧುಮತಿ ರಾವ್ ಕಾರ್ಯಕ್ರಮದ ಪ್ರಾರಂಭಿಕ ನುಡಿಗಳನ್ನಾಡುವರು. ಜವಾಹರಲಾಲ್ ಉನ್ನತ ಸಂಶೋಧನೆ ಕೇಂದ್ರದ (JNCASR) ಅಧ್ಯಕ್ಷ, ಹಿರಿಯ ವಿಜ್ಞಾನಿ ಪ್ರೊ. ಜಿ.ಯು. ಕುಲಕರ್ಣಿ ಉದ್ಘಾಟಿಸುವರು. ಹಿರಿಯ ವಿಜ್ಞಾನಿ ಪ್ರೊ. ಎಸ್.ಎಂ. ಶಿವಪ್ರಸಾದ ಆಶಯ ನುಡಿಗಳನ್ನಾಡಲಿದ್ದಾರೆ.
ವಿಶ್ವದ ಬೇರೆ-ಬೇರೆ ದೇಶಗಳಿಂದ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ಈ 3 ದಿನಗಳ ವಿಜ್ಞಾನ ವಿಸ್ತ್ರತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ 90 ವರ್ಷಕ್ಕೆ ಕಾಲಿಡುರುತ್ತಿರುವ ಪ್ರೊ. ರಾವ್ ಅವರಿಗೆ ಚಂದನ ಚಿಣ್ಣರು ''''ಚಂದನ ರತ್ನ'''' ಪ್ರಶಸ್ತಿ ನೀಡುತ್ತಿದ್ದಾರೆ.ಈ ಕಾರ್ಯಕ್ರಮದಲ್ಲಿ ಚಂದನ ಶಾಲೆಯ ವಿದ್ಯಾರ್ಥಿಗಳೊಂದಿಗೆ ರಾಜ್ಯದ ಬೇರೆ-ಬೇರೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ವಿಜ್ಞಾನ ಶಿಕ್ಷಕರಿಗೆ ಪಾಲ್ಗೊಳಲು ಮುಕ್ತ ಅವಕಾಶವಿದ್ದು ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, 3 ದಿನ ಬೆಳಗಿನ ಉಪಹಾರ, ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.
3 ದಿನ ನಿರಂತರ ಭಾಗವಹಿಸಿದವರಿಗೆ ಕೊನೆಯ ದಿನ ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ ಎಜ್ಯುಕೇಶನ್ ಫೌಂಡೇಶನ್ ಹಾಗೂ ಸ್ಕೂಲ್ ಚಂದನ ಸಂಯುಕ್ತವಾಗಿ ನೀಡುವ ಸರ್ಟಿಫಿಕೇಟ್ ನೀಡಲಾಗುವುದು. ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು, ಶಿಕ್ಷಕರು, ಆಸಕ್ತರು ಡಿ. 9ರೊಳಗೆ ತಮ್ಮ ಹೆಸರನ್ನು ತಮ್ಮ ಸ್ಟಾಂಪ್ ಸೈಜ್ ಫೋಟೋ ಸಮೇತ, ಪೋನ್, ಮೇಲ್ ಮುಖಾಂತರ ಅಥವಾ ಖುದ್ದಾಗಿ ಬಂದು ನೋಂದಾಯಿಸಿಕೊಂಡು ಗುರುತಿನ ಚೀಟಿ ಪಡೆಯಬೇಕು ಅಥವಾ ನೇರವಾಗಿ ಮೊದಲನೆಯ ದಿನ ಕಾರ್ಯಕ್ರಮಕ್ಕೆ ಬಂದಾಗ ನೋಂದಣಿ ಮಾಡಿಸಿ ಗುರುತಿನ ಚೀಟಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಇಮೇಲ್ schoolchandanlxr@gmail.com, ಮೊ: 9945163848, 9448432414 ಈ ಸಂಖ್ಯೆಗಳಿಗೆ ಸಂಪರ್ಕಿಸುವಂತೆ ತಿಳಿಸಿದರು.