ಅಂತಾರಾಷ್ಟ್ರೀಯ ಕ್ರೀಡಾಪಟು ದಿನೇಶ್ ಗಾಣಿಗಗೆ ಹುಟ್ಟೂರ ಸ್ವಾಗತ

| Published : Mar 05 2024, 01:37 AM IST

ಸಾರಾಂಶ

ಹುಟ್ಟೂರು ಕೋಟಕ್ಕೆ ಆಗಮಿಸಿ ಶ್ರೀ ಕ್ಷೇತ್ರ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲಕ್ಕೆ ಆಗಮಿಸಿದ ಅವರನ್ನು ಊರವರು ಸ್ವಾಗತ ಕೋರಿ ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಅವರನ್ನು ದೇವಳ ವತಿಯಿಂದ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಕೋಟಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಪಟು ಕೋಟದ ದಿನೇಶ್ ಗಾಣಿಗ ಸೋಮವಾರ ಹುಟ್ಟೂರಿಗೆ ಆಗಮಿಸಿದಾಗ ಅವರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಅವರು ಇತ್ತೀಚಿಗೆ ಥಾಯ್ಲೆಂಡ್‌ನ ರಾಜಬುಟದಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ಸ್‌ನಲ್ಲಿ ಮೂರು ಪದಕಗಳನ್ನು ಜಯಿಸಿದ್ದರು.ಹುಟ್ಟೂರು ಕೋಟಕ್ಕೆ ಆಗಮಿಸಿ ಶ್ರೀ ಕ್ಷೇತ್ರ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲಕ್ಕೆ ಆಗಮಿಸಿದ ಅವರನ್ನು ಊರವರು ಸ್ವಾಗತ ಕೋರಿ ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಪರವಾಗಿ ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ ಅವರು ದಿನೇಶ್ ಅವರಿಗೆ ಶಾಲು ಹೊದಿಸಿ ಗೌರವಿಸಿದರು.

ಕೋಟ ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕೋಟ ಆಟೋ ಚಾಲಕ ಮಾಲಕ ಸಂಘ ಅಧ್ಯಕ್ಷ ಅಣ್ಣಪ್ಪ ಪೂಜಾರಿ, ತಾರಾನಾಥ್ ಪೂಜಾರಿ, ಸಂದೀಪ್ ಕದ್ರಿಕಟ್ಟು, ಪಂಚವರ್ಣದ ಪದಾದಿಕಾರಿಗಳಾದ ಗಿರೀಶ್ ಆಚಾರ್, ನರಸಿಂಹ ಗಾಣಿಗ, ಕೇಶವ ಆಚಾರ್, ಸಂತೋಷ್ ಸಾಲಿಯಾನ್, ಕಾರು ಚಾಲಕ ಸಂಘದ ಹಿರಿಯ ಸದಸ್ಯರಾದ ಶಿವರಾಮ್ ಗಾಣಿಗ, ಕೋಟ ಶನೀಶ್ವರ ದೇಗುಲದ ಸಂತೋಷ್ ಕೋಟ, ಕೋಟ ಅಮೃತೇಶ್ವರಿ ದೇಗುಲದ ಅರ್ಚಕರಾದ ಸುಧಾಕರ್ ಜೋಗಿ, ಸಿಬ್ಬಂದಿ ಬಾಬಣ್ಣ ಮತ್ತಿತರರು ಉಪಸ್ಥಿತರಿದ್ದರು.