ಮಹಿಳೆಯರನ್ನು ಸರ್ವರೂ ಗೌರವಿಸಿ ಪ್ರೋತ್ಸಾಹಿಸಬೇಕು: ಕಾಂತರಾಜು

| Published : Mar 26 2024, 01:26 AM IST

ಸಾರಾಂಶ

ಲಕ್ಷಾಂತರ ರೂಪಾಯಿ ಸಂಬಳ ಬರುವ ಐಟಿ ಉದ್ಯೋಗ ತೊರೆದು ಅಡಗನಹಳ್ಳಿ ಗ್ರಾಮದಲ್ಲಿ ದೇಸಿರಿ ನ್ಯಾಚುರಲ್ ಪಾರಂನಲ್ಲಿ ಆರಂಬಿಸಿ ಎತ್ತಿನ ಗಾಣದ ಮೂಲಕ ಎಣ್ಣೆ ತೆಗೆಯುವುದರ ಜತೆಗೆ ಸಾವಯವ ಕೃಷಿ ಕೈಗೊಂಡು ನೂರಾರು ಮಂದಿಗೆ ಉದ್ಯೋಗ ನೀಡಿ ಇತರರಿಗೆ ಮಾದರಿಯಾಗಿರುವುದು ಅಭಿನಂದನೀಯ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಆಧುನಿಕ ಜಗತ್ತಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನದೇ ಆದ ಛಾಪು ಮೂಡಿಸಿ ದೇಶದ ಅಭಿವೃದ್ದಿಯ ವಿಚಾರದಲ್ಲಿ ಮಹತ್ತರವಾದ ಕೊಡುಗೆ ನೀಡುತ್ತಿರುವ ಮಹಿಳೆಯರನ್ನು ಸರ್ವರೂ ಗೌರವಿಸಿ ಪ್ರೋತ್ಸಾಹಿಸಬೇಕು ಎಂದು ಮೈಸೂರು ಲಯನ್ಸ್ ಕ್ಲಬ್ ಅಂಬಾಸಿಡರ್ ಅಧ್ಯಕ್ಷ ಎಚ್.ಸಿ. ಕಾಂತರಾಜು ಹೇಳಿದರು.

ತಾಲೂಕಿನ ಅಡಗನಹಳ್ಳಿ ಗ್ರಾಮದ ಬಳಿ ಇರುವ ದೇಸಿರಿ ನ್ಯಾಚುರಲ್ ಫಾರಂನಲ್ಲಿ ಕ್ಲಬ್ ವತಿಯಿಂದ ನಡೆದ ಅಂತರ ರಾಷ್ಠ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುರುಷನಷ್ಟೆ ಸಮಾನವಾದ ದುಡಿಮೆ ಮಾಡುತ್ತಿರುವ ಮಹಿಳೆಯರು ಅಭಿನಂದನೆಗೆ ಅರ್ಹರು ಎಂದರು.

ಕೆ.ಆರ್. ನಗರದ ನವೀನ್ ಕುಮಾರ್ ಅವರು ಲಕ್ಷಾಂತರ ರೂಪಾಯಿ ಸಂಬಳ ಬರುವ ಐಟಿ ಉದ್ಯೋಗ ತೊರೆದು ಅಡಗನಹಳ್ಳಿ ಗ್ರಾಮದಲ್ಲಿ ದೇಸಿರಿ ನ್ಯಾಚುರಲ್ ಪಾರಂನಲ್ಲಿ ಆರಂಬಿಸಿ ಎತ್ತಿನ ಗಾಣದ ಮೂಲಕ ಎಣ್ಣೆ ತೆಗೆಯುವುದರ ಜತೆಗೆ ಸಾವಯವ ಕೃಷಿ ಕೈಗೊಂಡು ನೂರಾರು ಮಂದಿಗೆ ಉದ್ಯೋಗ ನೀಡಿ ಇತರರಿಗೆ ಮಾದರಿಯಾಗಿರುವುದು ಅಭಿನಂದನೀಯ ಎಂದರು.

ದೇಸಿರಿ ನ್ಯಾಚುರಲ್ ಫಾರಂನಲ್ಲಿ ಮಾಲೀಕ ನವೀನ್ ಕುಮಾರ್ ಮಾತನಾಡಿ ದೇಸಿರಿ ಮೂಲಕ ಎತ್ತಿನ ಗಾಣದಿಂದ ಎಣ್ಣೆ ತೆಗೆಯುವ ವಿಧಾನ ಮತ್ತು ಸಾವಯವ ಕೃಷಿಯಲ್ಲಿನ ತಮ್ಮ ಅನುಭವ ಹಂಚಿಕೊಂಡರು.

ದೇಸಿರಿ ನ್ಯಾಚುರಲ್ ಮಾಲೀಕರಾದ ಶಾಂತಮ್ಮ, ನವೀನ್ಕುಮಾರ್, ಕೆ.ಆರ್. ನಗರ ಪುರಸಭೆಯ ಪೌರ ಕಾರ್ಮಿಕರಾದ ಮಂಜುಳ, ಲಕ್ಷ್ಮಿ, ಅವರನ್ನು ಮೈಸೂರು ಲಯನ್ಸ್ ಕ್ಲಬ್ ಅಂಬಾಸಿಡರ್ ನಿಂದ ಸನ್ಮಾನಿಸಲಾಯಿತು.

ಮೈಸೂರು ಲಯನ್ಸ್ ಕ್ಲಬ್ ಅಂಬಾಸಿಡರ್ ಕಾರ್ಯದರ್ಶಿ ದಿನೇಶ್, ಖಜಾಂಚಿ ವಿಷ್ಣು, ಜೋನಲ್ ಜಿಲ್ಲಾ ಅಧ್ಯಕ್ಷ ಕೆ.ಆರ್. ಭಾಸ್ಕರ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಟಿ.ಎಚ್. ವೆಂಕಟೇಶ್, ಎಚ್.ಕೆ. ಪ್ರಸನ್ನಕುಮಾರ್, ಎಂ. ಶಿವಕುಮಾರ್, ಅರುಣ್ ಕುಮಾರ್, ಆರ್.ಡಿ. ಕುಮಾರ್, ಅರುಣ್ ಸಾಗರ್, ಮಲ್ಲಿಕಾರ್ಜುನ್ ಇದ್ದರು.