ಸಾರಾಂಶ
ಧ್ಯಾನ, ಧನಾತ್ಮಕ ಚಿಂತನೆ ಹಾಗೂ ಸ್ವಯಂ ಅರಿವು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಾವಶ್ಯಕ
ಕನ್ನಡಪ್ರಭ ವಾರ್ತೆ ಮೈಸೂರು
ಧ್ಯಾನ, ಧನಾತ್ಮಕ ಚಿಂತನೆ ಹಾಗೂ ಸ್ವಯಂ ಅರಿವು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಾವಶ್ಯಕ ಎಂದು ಸ್ವರ್ಣಗೌರಿ ಗೋವಿಂದರಾಜ್ ತಿಳಿಸಿದರು. ನಗರದ ಎಂಎಂಕೆ ಮತ್ತು ಎಸ್ ಡಿಎಂ ಮಹಿಳಾ ಕಾಲೇಜಿನ ಸ್ಟಾಫ್ ವೆಲ್ಫೇರ್ ಕ್ಲಬ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಬಾಚ್ ಫ್ಲವರ್ ಥೆರಪಿ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.ಇದೇ ವೇಳೆ ಅವರನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎನ್. ಭಾರತಿ, ಸ್ಟಾಫ್ ಕ್ಲಬ್ ಸಂಯೋಜಕಿ ಡಾ.ಕೆ.ಕೆ. ದೇವಕಿ ಸನ್ಮಾನಿಸಿದರು. ಸ್ಟಾಫ್ ಕ್ಲಬ್ ಸದಸ್ಯರಾದ ಯೋಗೀಶ್ ರಾವ್, ಮಾಲತಿ, ಅಮೃತಾ ಪಿ. ನಾಯಕ್ ಇದ್ದರು.