ಸಾರಾಂಶ
ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿರುವ ಅಥಣಿ ಠಾಣೆ ಪೊಲೀಸರು ಅವರಿಂದ ಸುಮಾರು ₹40 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.
ಅಥಣಿ: ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿರುವ ಅಥಣಿ ಠಾಣೆ ಪೊಲೀಸರು ಅವರಿಂದ ಸುಮಾರು ₹40 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ. ಬಂಧಿತರು ಮಹಾರಾಷ್ಟ್ರ ಮೂಲದವರಾಗಿದ್ದು, ಅಥಣಿ, ಕಾಗವಾಡ, ಐಗಳಿ ಮತ್ತು ಘಟಪ್ರಭಾ ಪೊಲೀಸ್ ಠಾಣೆಗಳ ವ್ಯಾಪ್ತಿಯ 1 ದರೋಡೆ, 1 ಸುಲಿಗೆ ಮತ್ತು 8
ಮನೆಗಳ್ಳತನ ಸೇರಿದಂತೆ ಒಟ್ಟು 10 ಕಳ್ಳತನ ಪ್ರಕರಣ ಪತ್ತೆ ಮಾಡಿ, 522 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಅಥಣಿ ಸಿಪಿಐ ಸಂತೋಷ ಹಳ್ಳೂರ ನೇತೃತ್ವದಲ್ಲಿ ಐಗಳಿ ಪಿಎಸ್‌ಐ ಕುಮಾರ ಹಾಡಕರ, ಸಿ.ಬಿ. ಸಾಗನೂರ, ಕಾಗವಾಡ ಪಿಎಸ್‌ಐ ರಾಕೇಶ ಬಗಲಿ, ಅಥಣಿ ಪಿಎಸ್‌ಐ ಜಿ.ಎಸ್. ಉಪ್ಪಾರ, ಎಂ.ಬಿ. ಬಿರಾದಾರ ಮುಂಧಾಳತ್ವದಲ್ಲಿ ಅಪರಾಧ ತನಿಖಾ ತಂಡವನ್ನು ರಚಿಸಿ ಕಳ್ಳರ ಪತ್ತೆಗಾಗಿ ಜಾಲ ಬೀಸಲಾಗಿತ್ತು. ಪೊಲೀಸರ ಈ ಕಾರ್ಯಾಚರಣೆಗೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಶಂಕರ ಗುಳೇದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.