ನಂದಿಹಳ್ಳಿ ಕೆರೆ ಪುನಶ್ಚೇತನ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ

| Published : Sep 23 2024, 01:19 AM IST

ನಂದಿಹಳ್ಳಿ ಕೆರೆ ಪುನಶ್ಚೇತನ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಗತ್ಯವಿರುವ ಹಣವನ್ನು ಬಿಡಗಡೆಗೊಳಿಸಲು ಸಿದ್ಧನಿದ್ದೇನೆ, ತಡೆಗೋಡೆ (ಒಡ್ಡು) ಬಿರುಕು ಬಟ್ಟು ರೈತರ ಆತಂಕಕ್ಕೆ ಕಾರಣವಾಗಿರುವ ನಂದಿಹಳ್ಳಿ ಕೆರೆ ಪುನಶ್ಚೇತನ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ಬಸವರಾಜ ಶಿವಣ್ಣನವರ ಅಧಿಕಾರಿಗಳಿಗೆ ಸೂಚಿಸಿದರು.

ಬ್ಯಾಡಗಿ: ಅಗತ್ಯವಿರುವ ಹಣವನ್ನು ಬಿಡಗಡೆಗೊಳಿಸಲು ಸಿದ್ಧನಿದ್ದೇನೆ, ತಡೆಗೋಡೆ (ಒಡ್ಡು) ಬಿರುಕು ಬಟ್ಟು ರೈತರ ಆತಂಕಕ್ಕೆ ಕಾರಣವಾಗಿರುವ ನಂದಿಹಳ್ಳಿ ಕೆರೆ ಪುನಶ್ಚೇತನ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ಬಸವರಾಜ ಶಿವಣ್ಣನವರ ಅಧಿಕಾರಿಗಳಿಗೆ ಸೂಚಿಸಿದರು.

ಕೆರೆಗೆ ತೆರಳಿ ಸ್ಥಳ ಪರಿಶೀಲನೆ ಬಳಿಕ ಮಾತನಾಡಿದ ಅವರು, ಬಿರುಕು ಒಂದು ಅಡಿಗಿಂತ ಒಳಗಿದೆ ಯಾರೂ ಭಯಪಡುವ ಅಗತ್ಯವಿಲ್ಲ, ಆದರೆ ಮುಂಜಾಗ್ರತಾ ಕ್ರಮವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಮ್ಮ ಪೂರ್ವಿಕರ ಮುಂದಾಲೋಚನೆ ಪರಿಣಾಮ ಇಂದಿಗೂ ಕೆರೆಗಳು ನಮ್ಮನ್ನು ರಕ್ಷಿಸುತ್ತಿವೆ, ಹೀಗಾಗಿ ಕೆರೆಗಳು ನಮ್ಮ ಜೀವಾಳವಾಗಿದ್ದು ರೈತರೂ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಕಾಪಾಡುವುದರ ಜೊತೆಗೆ ಸುತ್ತಲಿನ ಪ್ರಾಣಿ ಪಕ್ಷಿ ಸಂಕುಲಗಳಿಗೆ ಕುಡಿಯುವ ನೀರು ಒದಗಿಸಲಿದೆ ಇವುಗಳನ್ನು ಕಾಪಾಡಿಕೊಳ್ಳುವುದು ಸರ್ಕಾರ ಸೇರಿದಂತೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಅಪಾಯವಿಲ್ಲ: ಸಣ್ಣ ನೀರಾವರಿ ನಿಗಮದ ತಾಂತ್ರಿಕ ಅಧಿಕಾರಿ ಮಣಿಕಂಠ ಅವರು, ಸದರಿ ಒಡ್ಡು ಈ ಹಿಂದೆಯೂ ಬಿರುಕು ಬಿಟ್ಟಿತ್ತು ಇದೊಂದು ಭೂಮಿಯಲ್ಲಿನ ನೈಜಗುಣವಾಗಿದ್ದು ಕರೆಯಲ್ಲಿನ ನೀರು ಎಲ್ಲಿಯೂ ಲೀಕ ಆಗಿರುವುದಿಲ್ಲ. ಬಿರುಕು ಬಿಟ್ಟಿರುವ ಸ್ಥಳಗಳನ್ನು ಮಣ್ಣಿನಿಂದ ತುಂಬಿಸಿ ಸರಿಪಡಿಸುವ ಭರವಸೆ ನೀಡಿದರು.

ಕೆರೆಕೋಡಿ ಸರಿಪಡಿಸಿ: ಗ್ರಾಪಂ ಸದಸ್ಯ ಬಸವರಾಜ ಬನ್ನಿಹಟ್ಟಿ ಮಾತನಾಡಿ, ಕೆರೆಕೋಡಿ ಲೀಕ್ ಆಗುತ್ತಿದ್ದು ಅನಗತ್ಯವಾಗಿ ನೀರು ಹರಿದು ಹೋಗುತ್ತಿದೆ. ಇದರಿಂದ ಕೆರೆಯಲ್ಲಿನ ನೀರು ಬಹುಬೇಗನೆ ಖಾಲಿಯಾಗುತ್ತಿದೆ. ಕೂಡಲೇ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ದಾನಪ್ಪ ಚೂರಿ, ಶಂಭನಗೌಡ ಪಾಟೀಲ, ಚನ್ನಬಸಪ್ಪ ಹುಲ್ಲತ್ತಿ, ನಿಂಗಪ್ಪ ಹೆಗ್ಗಣ್ಣನವರ, ಯುವರಾಜ ದೊಡ್ಮನಿ ಸೇರಿದಂತೆ ಇನ್ನಿತರರಿದ್ದರು.