ಭವಿಷ್ಯಕ್ಕಾಗಿ ಅಂರ್ತಜಲವೃದ್ಧಿ ಅತ್ಯವಶ್ಯಕ

| Published : Mar 13 2025, 12:49 AM IST

ಸಾರಾಂಶ

ಚಿಂತಾಮಣಿ: ತಾತನ ಕಾಲದಲ್ಲಿ ತೆರೆದಬಾವಿ, ಅಪ್ಪನ ಕಾಲದಲ್ಲಿ ಕೊರೆದಬಾವಿ, ನಮ್ಮ ಕಾಲಕ್ಕೆ ಖಾಲಿ ಬಾವಿಯಾಗಿ ಕೊಳವೆ ಬಾವಿ ತೆರೆಯುವತ್ತಾ ಸಾಗುತ್ತಿದ್ದೇವೆ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಇಂದಿನಿಂದಲೇ ಅಂತರ್ಜಲವೃದ್ಧಿ ಮಾಡುವತ್ತ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕೆಂದು ಕೃಷಿ ಉಪ ನಿರ್ದೇಶಕಿ ಮಂಜುಳ ನುಡಿದರು.

ಚಿಂತಾಮಣಿ: ತಾತನ ಕಾಲದಲ್ಲಿ ತೆರೆದಬಾವಿ, ಅಪ್ಪನ ಕಾಲದಲ್ಲಿ ಕೊರೆದಬಾವಿ, ನಮ್ಮ ಕಾಲಕ್ಕೆ ಖಾಲಿ ಬಾವಿಯಾಗಿ ಕೊಳವೆ ಬಾವಿ ತೆರೆಯುವತ್ತಾ ಸಾಗುತ್ತಿದ್ದೇವೆ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಇಂದಿನಿಂದಲೇ ಅಂತರ್ಜಲವೃದ್ಧಿ ಮಾಡುವತ್ತ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕೆಂದು ಕೃಷಿ ಉಪ ನಿರ್ದೇಶಕಿ ಮಂಜುಳ ನುಡಿದರು. ತಾಲೂಕಿನ ಕಾಗತಿ ಕೃಷಿ ತರಬೇತಿ ಕೇಂದ್ರದಲ್ಲಿ ೨೦೨೪- ೨೫ನೇ ಸಾಲಿನ ಅಟಲ್ ಭೂ ಜಲ ಯೋಜನೆಯಡಿ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿ, ಅಂತರ್ಜಲ ವೃದ್ಧಿಯಾಗಲು ಯೋಜನೆಗಳನ್ನು ರೈತರಿಗಾಗಿ ಸರ್ಕಾರ ಈಗಾಗಲೇ ಅನುಷ್ಠಾನಗೊಳಿಸಿದೆ ಎಂದರು. ಸಾಮಾಜಿಕ ಅಭಿವೃದ್ಧಿ ತಜ್ಞ ಎಸ್. ಪ್ರವೀಣ್ ಹುಲಿಕುಂಟೆ, ಸಹಾಯಕ ಕೃಷಿ ನಿರ್ದೇಶಕಿ ಚೇತನ, ಅಟಲ್‌ ಭೂ ಜಲ ಯೋಜನೆಯ ಜಿಲ್ಲಾ ಕಾರ್ಯನಿರ್ವಹಣಾ ಘಟಕದ ಅಭಿವೃದ್ಧಿ ತಜ್ಞರಾದ ರೂಪ, ಶಶಿಕಾಂತ್ ಮತ್ತು ಗೌತಮ್, ತಾಲೂಕಿನ ಶ್ರೀರಾಮ್, ಪೇಲೋ ಸಂಸ್ಧೆಯ ನವೀನ್, ಕುರುಬೂರು ಕೆ.ವಿ.ಕೆ ವಿಜ್ಞಾನಿಗಳಾದ ಡಾ.ತನ್ವೀರ್ ಅಹಮದ್ ಮತ್ತು ಡಾ.ವಿಶ್ವನಾಥ್ ಉಪಸ್ಧಿತರಿದ್ದರು.