ಮುಂದಿನ ಪೀಳಿಗೆಗೆ ಸಂಸ್ಕ್ರತಿಯನ್ನು ಪರಿಚಯಿಸಿ: ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ

| Published : Apr 01 2024, 12:56 AM IST / Updated: Apr 01 2024, 10:07 AM IST

ಮುಂದಿನ ಪೀಳಿಗೆಗೆ ಸಂಸ್ಕ್ರತಿಯನ್ನು ಪರಿಚಯಿಸಿ: ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‌ಪೇಟೆ: ಪುರಾತನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದ ಗುರುತರ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ದಾಬಸ್‌ಪೇಟೆ: ಪುರಾತನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದ ಗುರುತರ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹೊನ್ನಮ್ಮಗವಿ ಮಠದ ಆವರಣದಲ್ಲಿ ಏಪ್ರಿಲ್ 22ರಿಂದ 25ರವರೆಗೆ ನಡೆಯುವ ಶ್ರೀ ಹೊನ್ನಾದೇವಿ ಆರತಿ(ಮಡೆ) ಜಾತ್ರಾ ಮಹೋತ್ಸವ, ಭೃಂಗಿ ಮಠದ ಉದ್ಛಾಟನಾ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮಾತನಾಡಿದ ಅವರು,

ಶ್ರೀಮಠ ಹಲವಾರು ವರ್ಷಗಳಿಂದ ತ್ರಿವಿಧ ದಾಸೋಹದ ಜೊತೆಗೆ, ವಿದ್ಯಾರ್ಥಿಗಳ ವಸತಿ ನಿಲಯ, ಗೋಶಾಲೆ ನಡೆಸಿಕೊಂಡು ಬಂದಿದೆ. ಮುಂದಿನ ಶೈಕ್ಷಣಿಕ ಸಾಲಿಗೆ 500 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಗುರಿ ಇದೆ. ಏಪ್ರಿಲ್ 23ರಂದು ಭೃಂಗಿಮಠ ಉದ್ಘಾಟನೆ, ಪ್ರಶಸ್ತಿ ಪ್ರದಾನ ಮತ್ತು ಧಾರ್ಮಿಕ ಚಿಂತನಾ ಸಭೆ ನಡೆಯಲಿದೆ., ದಿವ್ಯಸಾನ್ನಿಧ್ಯವನ್ನು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ವಹಿಸಲಿದ್ದಾರೆ. ಕೆರೆಗೋಡು ಶ್ರೀ ರಂಗಾಪುರದ ಶ್ರೀ ಗುರು ಪರದೇಶೀ ಕೇಂದ್ರ ಮಹಾಸ್ವಾಮೀಜಿ ಭಾಗವಹಿಸಲಿದ್ದಾರೆ. ಬೇಲಿಮಠದ ಶ್ರೀಶಿವರುದ್ರ ಸ್ವಾಮೀಜಿ, ವಿವೇಕಾನಂದ ಆಶ್ರಮದ ಶ್ರೀ ಡಾ.ವಿರೇಶಾನಂದ ಸ್ವಾಮೀಜಿ, ಹಿರೇಮಠದ ಶ್ರೀ, ದೇಗುಲ ಮಠದ ಶ್ರೀ ಮೇಲಣಗವಿ ಮಠದ ಶ್ರೀ ಸೇರಿದಂತೆ 10ಕ್ಕೂ ಅಧಿಕ ಮಠಾಧೀಶರು ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮವನ್ನು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ.ಜೆ.ಪಟೇಲ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಎನ್.ಶ್ರೀನಿವಾಸ್ ವಹಿಸಲಿದ್ದಾರೆ ಎಂದರು.

ಹತ್ತಾರು ಕಾರ್ಯಕ್ರಮ:

ಮಠದಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ವಿಭಾಗವಾರು ಪ್ರಶಸ್ತಿ, ಗುರುಸೇವಾ ಸಂಪನ್ನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ, ಏಪ್ರಿಲ್ 24 ಬೆಳಗ್ಗೆ 6 ಗಂಟೆಗೆ ಲಿಂಗ ದೀಕ್ಷಾ ಸಂಸ್ಕಾರ ಮತ್ತು ಶಿವಾನುಭವ ಕಾರ್ಯಕ್ರಮ ನಡೆಯಲಿದೆ. ವೀರಭದ್ರಸ್ವಾಮಿಗೆ ಅಕ್ಕಿ ಪೂಜೆ, ಏಪ್ರಿಲ್ 25ರಂದು ಶ್ರೀ ಹೊನ್ನಾದೇವಿ ಬ್ರಹ್ಮರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ, ತೆಪ್ಪೋತ್ಸವದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ ಎಂದು ಶ್ರೀಗಳು ವಿವರಿಸಿದರು.

ಸಭೆಯಲ್ಲಿ ಭಕ್ತರಾದ ಮಹದೇವಯ್ಯ, ಶಿವಗಂಗೆ ಗ್ರಾಪಂ ಅಧ್ಯಕ್ಷ ಪ್ರಭುದೇವ್, ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ, ಭಕ್ತರಾದ ಮೃತ್ಯುಂಜಯ, ಮೋಹನ್ ಕುಮಾರ್, ಮಹೇಶ್, ಕಂಬಾಳು ಉಮೇಶ್, ನಿವೃತ್ತ ಶಿಕ್ಷಕ ವಿರೂಪಾಕ್ಷಯ್ಯ, ನಾಗಣ್ಣ, ಬಸವರಾಜು, ದಯಾನಂದ್, ರಮೇಶ್, ನವೀನ್, ವೇದಾವತಿ, ಲತಾ, ರೇಣುಕ, ಮಂಜುಳ, ವೇದಾವತಿ, ಪದಾಧಿಕಾರಿಗಳು ಹಾಜರಿದ್ದರು.

ಫೋಟೋ 2 : ಹೊನ್ನಮ್ಮಗವಿ ಮಠದ ಆವರಣದಲ್ಲಿ ಶ್ರೀ ಹೊನ್ನಾದೇವಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಶ್ರೀ ರುದ್ರಮುನಿ ಶಿವಾಚಾರ್ಯ ಸಾಮೀಜಿ ಹಾಗೂ ಭಕ್ತರು ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದರು.