ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ
ಮಗುವನ್ನು ಹೆತ್ತವರು ಜಗತ್ತಿನ ಪರಿಚಯ ಮಾಡಿಕೊಡುತ್ತಾರೆ. ಶಿಕ್ಷಣ, ಸಂಸ್ಕಾರ ನೀಡಿದ ಶಿಕ್ಷಕರು ಆ ಮಗುವನ್ನು ಇಡೀ ಜಗತ್ತಿಗೆ ಪರಿಚಯ ಮಾಡುತ್ತಾರೆ ಎಂದು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.ತಾಲೂಕಿನ ಚಿಕ್ಕಮುಚ್ಚಳಗುಡ್ಡದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಗುವಿಗೆ ಜಗತ್ತಿನ ಆದರ್ಶಗಳನ್ನು ಪರಿಚಯ ಮಾಡಿಕೊಡಬೇಕು. ಶಿಕ್ಷಕರು ಆದರ್ಶ ವ್ಯಕ್ತಿಯ ನಡೆ ನುಡಿ ಹೊಂದಿರಬೇಕು. ನುಡಿದಂತೆ ನಡೆಯಬೇಕು. ಅಂದಾಗ ಮಗುವಿಗೆ ಆದರ್ಶ ವ್ಯಕ್ತಿಯಾಗಲು ಸಾಧ್ಯ ಎಂದರು.
ಮಾಡುವ ಕಾಯಕದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ, ಶ್ರದ್ಧೆ ಇರಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವುದೇ ಕಾಯಕ. ನಾನು ಏನು ಮಾಡುತ್ತಿದ್ದೇನೆ ಎಂಬ ಪ್ರಜ್ಞೆ ಮಕ್ಕಳಲ್ಲಿ ಬರಬೇಕು. ಜೊತೆಗೆ ಕಾಯಕ ಏನಾದರೂ ಇರಲಿ ಅದು ದೇಶದ ಹಿತಕ್ಕೆ ಪೂರಕವಾಗಿರಬೇಕು. ದೇಶ ಉಳಿದರೆ ಪ್ರದೇಶ ಉಳಿಯುತ್ತದೆ. ಇಂತಹ ಉತ್ತಮ ಗುಣಗಳನ್ನು ಹೊಂದಬೇಕು. ಜತೆಗೆ ಎಲ್ಲ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಈ ವೇಳೆ ಆದರ್ಶ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಸನ್ಮಾನಿಸಲಾಯಿತು. ಪ್ರೊ. ಚಂದ್ರಶೇಖರ ಹೆಗಡೆ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಶಿವಯ್ಯ ಹಿರೇಮಠ, ಪ್ರಭಾರಿ ಪ್ರಾಚಾರ್ಯ ಶಂಕರರಾವ್ ಕುಲಕರ್ಣಿ, ಎಸ್‌ಡಿಎಂಸಿ ಉಪಾಧ್ಯಕ್ಷ ಬೋರಮ್ಮ ಕಟ್ಟಿ, ಬಸವರಾಜ ಅಂಗಡಿ, ಬಸವರಾಜ ಓಗೆನ್ನವರ, ಅಮೀನಸಾಬ ನದಾಫ್, ಭರಮಪ್ಪ ಕಾಟನ್ನವರ, ವೈ.ವೈ.ದಳವಾಯಿ, ಶಿಕ್ಷಕರಾದ ರಮೇಶ ಕತ್ತಿಕೈ, ರಮೇಶ ಹಂಜಿ, ಕೀರ್ತಿ ಬಡಿಗೇರ, ಎಸ್.ಎನ್.ಸಂಕನೂರ, ಭಾಗ್ಯಲಕ್ಷ್ಮಿ ಟಿ.ಎಚ್.ಬಸವರಾಜ ಸಿಂದಗಿಮಠ, ಸಂಗಮೇಶ ಉಳ್ಳಾಗಡ್ಡಿ, ಶ್ರೀನಿವಾಸ ಈಳಗೇರ, ಕಾವ್ಯಾ ಪಾಟೀಲ, ಬಸವರಾಜ ಚಿಕ್ಕಣ್ಣವರ, ಕೇಶವ ರಘುವೀರ ಅಶೋಕ ಪೂಜಾರಿ, ದುರ್ಗಾ ಮುಂಡರಗಿ, ದಾನಮ್ಮ ಬಂಡಿಗಣಿ, ಹನಮಂತ ಬಿ, ಸೃಷ್ಟಿ ರಜಪೂತ, ಅಜಯ ಸಿಂಗ್ ಇದ್ದರು.