ಜಗತ್ತಿಗೆ ಭಾರತದ ಶಕ್ತಿ ಸಾಮರ್ಥ್ಯದ ಪರಿಚಯ: ಡಾ.ವೀರಣ್ಣ ಚರಂತಿಮಠ

| Published : May 10 2025, 01:05 AM IST

ಜಗತ್ತಿಗೆ ಭಾರತದ ಶಕ್ತಿ ಸಾಮರ್ಥ್ಯದ ಪರಿಚಯ: ಡಾ.ವೀರಣ್ಣ ಚರಂತಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಸಮರ್ಥ ನಾಯಕ ಹಾಗೂ ಸಮರ್ಥ ಸೈನಿಕರಿಂದ ಅಪರೇಷನ್ ಸಿಂದೂರ್ ಮೂಲಕ ಜಗತ್ತಿಗೆ ಭಾರತದ ಶಕ್ತಿ ಸಾಮರ್ಥ್ಯ ಗೊತ್ತಾಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದೇಶದ ಸಮರ್ಥ ನಾಯಕ ಹಾಗೂ ಸಮರ್ಥ ಸೈನಿಕರಿಂದ ಅಪರೇಷನ್ ಸಿಂದೂರ್ ಮೂಲಕ ಜಗತ್ತಿಗೆ ಭಾರತದ ಶಕ್ತಿ ಸಾಮರ್ಥ್ಯ ಗೊತ್ತಾಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಭಾರತೀಯ ಜನತಾ ಪಕ್ಷ ನಗರ ಮಂಡಳ ವತಿಯಿಂದ ಶ್ರೀ ಕಣವಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪಾಕ್ ವಿರುದ್ಧದ ಯುದ್ದದಲ್ಲಿ ಭಾರತ ಜಯಶಾಲಿಯಾಗಲಿ, ದೇಶದ ವೀರ ಯೋಧರಿಗೆ ಶಕ್ತಿ ತುಂಬಿ ಆತ್ಮಸ್ಥೈರ್ಯ ಬಲಗೊಳ್ಳಲಿ, ಯೋಧರಿಗೆ ಹಾಗೂ ಅವರ ಕುಟುಂಬಕ್ಕೂ ದೇವರ ಅನುಗ್ರಹ ಇರಲೆಂದು ಪ್ರಾರ್ಥಿಸಿ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಸುಮಾರು 75 ವರ್ಷಗಳಿಂದ ಮಗ್ಗಲುಮುಳ್ಳು ಪಾಕಿಸ್ತಾನ ಒಂದಿಲ್ಲೊಂದು ಕಾರಣದಿಂದ ಭಾರತ ತಂಟೆಗೆ ಬರುತ್ತಿತ್ತು, ಆದರೆ ಈಗ ಸತ್ತ ಹಾವು ಆಗಿದೆ, ಅದು ಒಂದು ದೇಶ ಎಂಬ ಭಾವನೆ ಇಲ್ಲದಾಗಿದೆ, ಭಾರತದ ನೇತೃತ್ವ ಬಹಳ ಸದೃಢವಾಗಿದೆ, ಪ್ರಧಾನಮಂತ್ರಿಗಳು ಅತಿ ಸೂಕ್ಷ್ಮಾತಿ ಸೂಕ್ಷ್ಮ ವಿಚಾರ ತೆಗೆದುಕೊಂಡು, ಎಲ್ಲ ರೀತಿಯಲ್ಲಿ ಭಾರತ ದಾಳಿ ಸಂಘಟಿಸಿದೆ ಎಂದರು.

ಪಾಕಿಸ್ತಾನದ 15 ಪ್ರಮುಖ ನಗರಗಳ ಮೇಲೆ ದಾಳಿ ಮಾಡಿ ತಕ್ಕ ಪತ್ಯುತ್ತರ ಕೊಡುವಲ್ಲಿ ಭಾರತ ಯಶಸ್ವಿಯಾಗಿದೆ, ಈ ಬಾರಿ ಪಾಕಿಸ್ತಾನ ಛಿದ್ರ ಛಿದ್ರವಾಗುವುದರಲ್ಲಿ ಎರಡು ಮಾತಿಲ್ಲ, ಪಾಕಿಸ್ತಾನ ಹುಟ್ಟಡಗಿಸುವಲ್ಲಿ ಸಂಶಯವಿಲ್ಲ, ಶತ್ರು ದೇಶದ ಮಿಸೈಲ್‌ಗಳನ್ನು ಆಕಾಶದಲ್ಲಿಯೇ ಹೊಡೆದಾಕಿದರು, ಯಾರಿಗೂ ಹಾನಿಯಾಗದಂತೆ ಜಾಗೃತಿ ವಹಿಸಿದ್ದರು, ನಮ್ಮ ಸೈನಿಕರು ಅತ್ಯಾಧುನಿಕ ತರಬೇತಿ ಹೊಂದಿದ್ದಾರೆ, ವಿಶ್ವಕ್ಕೆ ಭಾರತದ ತಾಕತ್ತು ಗೊತ್ತಾಗಿದೆ, ಒಬ್ಬ ಸದೃಢ ಪ್ರಧಾನಿಯಿದ್ದರೆ ದೇಶ ಯಶಸ್ವಿಯಾಗಿ ನಡೆಯುತ್ತದೆ ಎಂಬುವುದಕ್ಕೆ ಇದು ಉದಾರಣೆಯಾಗಿದೆ ಎಂದು ಹೇಳಿದರು.

ಮುಖಂಡರಾದ ಜಿ.ಎನ್. ಪಾಟೀಲ. ಡಾ.ಎಂ.ಎಸ್. ದಡ್ಡೆನವರ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೇಟ್ಟ, ರಾಜು ನಾಯ್ಕರ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ಯಲಪ್ಪ ನಾರಾಯಣಿ, ಭಾಗೀರತಿ ಪಾಟೀಲ, ಭುವನೇಶ್ವರಿ ಕುಪ್ಪಸ್ತ, ಲಕ್ಷ್ಮೀ ನಾರಯಣ ಕಾಸಟ, ಬಸವರಾಜ ಯಂಕಂಚಿ, ಸಂಗಣ್ಣ ಶಿರೂರ, ಮಲ್ಲಿಕಾರ್ಜುನ ಮಠ, ಸಂಗಪ್ಪ ಕುಪ್ಪಸ್ತ, ಪರಮೇಶ್ವರ ಮದೂರ, ಕಲ್ಲಪ್ಪ ಭಗವತಿ, ಕ್ಯಾಪ್ಟನ್ ಅರ್ಜುನ ಕೋರಿ, ರಾಜು ದಂಡಿಗಿ, ಮಾನೇಶ ಅಂಬಿಗೇರ, ನೀಲಪ್ಪ ಬೇವೂರ, ಶಂಕರ ತೇಲಕರ, ಶಂಕರ ಅರಷಿಣಗುಡಿ, ಶ್ರೀಶೈಲ ಗಾಣಿಗೇರ, ಅಂಬಾಜಿ ಜೋಷಿ, ಚೆನ್ನಯ್ಯ ಹಿರೇಮಠ, ದ್ಯಾವಪ್ಪ ರಾಕುಂಪಿ, ರೇಖಾ ಕಲಬುರಗಿ, ಸುಜಾರ ಮಜ್ಜಗಿ, ಪ್ರೇಮಾ ಅಂಬಿಗೇರ, ಅನಿತಾ ಸರೋಧೆ, ಮುತ್ತಣ್ಣ ಕುರಬರ, ಚಂದ್ರಕಾಂತ ಖಾತೆದಾರ, ಚಂದ್ರು ರಾಮವಡಗಿ, ಅಶೋಕ ಪವಾರ, ನಾಗರಾಜ ನಾರಾಯಣಕರ, ರವಿ ನಾಯಕ್, ದೂಳಪ್ಪ ಕೊಪ್ಪದ, ಆನಂದ ಕೋಟಗಿ ಸೇರಿದಂತೆ ಅನೇಕರು ಇದ್ದರು. ಪಾಕಿಸ್ತಾನ ಜೊತೆಗೆ ಇದು ಭಾರತದ ಕೊನೆಯ ಯುದ್ಧವಾಗಲಿದೆ. ಜಗತ್ತಿನ ನಕಾಶೆಯಿಂದಲೇ ಪಾಕಿಸ್ತಾನವನ್ನು ಅಳಿಸಿಹಾಕುವ ಸಂಕಲ್ಪವನ್ನು ನಮ್ಮ ಸೇನೆ ಮಾಡಿದೆ. ನಾಗರಿಕರನ್ನು ಟಾರ್ಗೆಟ್‌ ಮಾಡದೇ ಉಗ್ರ ಹಾಗೂ ಉಗ್ರರ ಕ್ಯಾಂಪ್‌ಗಳ ಮೇಲೆ ದಾಳಿ ಮಾಡಿರುವುದು ಜಗತ್ತೇ ಮೆಚ್ಚಿಕೊಳ್ಳುತ್ತಿದೆ, ಜಗತ್ತು ಭಾರತದ ಜೊತೆಗಿದೆ. ರಾಷ್ಟ್ರದೊಳಗಿನ ಅನೇಕ ದೇಶದ್ರೋಹಿಗಳ ವಿರುದ್ಧವೂ ಹೋರಾಡಬೇಕಿದೆ. ಬರವ ದಿನಗಲ್ಲಿ ಉಗ್ರಗಾಮಿ ಎಂಬ ಪದವೇ ನಿರ್ನಾಮವಾಗಲಿದೆ. - ನಾರಾಯಣಸಾ ಭಾಂಡಗೆ ರಾಜ್ಯಸಭಾ ಸದಸ್ಯ