ಸಾರಾಂಶ
ಪ್ರಚಲಿತ ವಿಷಯಗಳನ್ನೊಳಗೊಂಡ ಸಂವಾದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಗೆಜ್ಜೆನಾದ ಕೃತಿಯಲ್ಲಿರುವ ಸಾಹಿತ್ಯ ಹಾಗೂ ಜಾನಪದ ಸಂಸ್ಕೃತಿಯನ್ನು ಇತರರಿಗೂ ಪರಿಚಯಿಸಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಹೇಳಿದ್ದಾರೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ತರೀಕೆರೆ ಪ್ರಕೃತಿಶ್ರೀ ಕಲಾ ಕುಟೀರದಿಂದ ಸಂಗೊಳ್ಳಿ ರಾಯಣ್ಣ ಬಡವಾಣೆಯ ಉಮಾಪ್ರಕಾಶ್ ಅವರ ನಿವಾಸದಲ್ಲಿ ಮೈಸೂರು ನಿವೃತ್ತ ಕನ್ನಡ ಉಪನ್ಯಾಸಕ ಹಾಗೂ ವಿದ್ಯಾಂಸ ಎ.ವಿ.ಸೂರ್ಯನಾರಾಯಣ ಸ್ವಾಮಿ ಅವರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಮ್ಮ ತರೀಕೆರೆ ಪ್ರತಿಭೆ, ಹಿರಿಯ ಕನ್ನಡ ವಿದ್ವಾಂಸ ಎ.ವಿ ಸೂರ್ಯನಾರಾಯಣ ಸ್ವಾಮಿ ಮೈಸೂರಿನಲ್ಲಿ ನೆಲೆಸಿದ್ದು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ನಮ್ಮ ನಾಡಿಗೆ ಹಲವರು ಕೊಡುಗೆ ನೀಡಿ, ಈ ನೆಲದ ಸೊಗಡನ್ನು ಪಸರಿಸುತ್ತಿದ್ದಾರೆ. ಸಾಹಿತ್ಯ, ಕಲೆ, ಸಾಂಸ್ಕೃತಿಕವಾಗಿ ಬೆಳಗುತ್ತಿದ್ದಾರೆ. ಇಂತಹ ಇಳಿ ವಯಸ್ಸಿನಲ್ಲಿ ಸಾಹಿತ್ಯ ಸಂವಾದದ ಮುಖಾಂತರ ಇತರರ ಪ್ರತಿಭೆ ಹೊರತರುವ ಕೆಲಸ ಮಾಡುತ್ತಿದ್ದಾರೆ. ಹಳ್ಳಿಯ ಸೊಗಡನ್ನು ದಾಖಲೆ ಸಹಿತ ಸಂಗ್ರಹಿಸಿದ್ದಾರೆ ಎಂದು ಹೇಳಿದರು.
ಗೆಜ್ಜೆನಾದ ಕೃತಿ ಎಲ್ಲರಿಗೂ ಪರಿಚಯಿಸಿ ಅದರ ಸಾಹಿತ್ಯ, ಜಾನಪದ ಸಂಸ್ಕೃತಿಯನ್ನು ಇತರರಿಗೆ ತಿಳಿಸಬೇಕು. ತರೀಕೆರೆಯಲ್ಲಿ ರಾಜ್ಯಮಟ್ಟದ ಪ್ರಪ್ರಥಮ ಜಾನಪದ ಸಮ್ಮೇಳನ ನಡೆದು ಹಲವು ವರ್ಷಗಳೇ ಕಳೆದಿವೆ. ಆ ಸಂರ್ಭದಲ್ಲಿ ಹೊನ್ನು ಬಿತ್ತೇವು ಹೊಲಕೆಲ್ಲ ಎಂಬ ಜಾನಪದ ಸಮಗ್ರ ಗ್ರಂಥ ಬಿಡುಗಡೆ ಮಾಡಲಾಗಿತ್ತು. ಆದೇ ರೀತಿ ಜಾನಪದ ಜಾತ್ರೆಯನ್ನ ತರೀಕೆರೆಯಲ್ಲಿ ನಿರ್ವಹಿಸಬೇಕು ಎಂಬ ತಮ್ಮ ಆಶಯ ವ್ಯಕ್ತ ಪಡಿಸಿದರು.ಕನ್ನಡಶ್ರೀ ಬಿ.ಎಸ್. ಭಗವಾನ್ ಮಾತನಾಡಿ ಕನ್ನಡ ಕಾವ್ಯಗಳ ಗೆಜ್ಜೆನಾದ ಎಂಬುದು ಅವಿಸ್ಮರಣೀಯ ಗ್ರಂಥ, ಆದರಲ್ಲಿ ಎಲ್ಲಾ ತರಹದ ವಿಶೇಷ ಅಂಶವಿದೆ. ನಮ್ಮ ಸೌಭಾಗ್ಯ ಗೆಜ್ಜೆನಾದ ಕೃತಿಯ ಕೃರ್ತ ನಮ್ಮೊಂದಿಗೆ ಇಂದು ಸಂವಾದದಲ್ಲಿ ಬೆರೆತುಹೋಗಿದ್ದಾರೆ. ಹೊಸ ಹೊಸ ಪದಗಳ ಪ್ರಯೋಗ ಆ ಗ್ರಂಥದಲ್ಲಿದೆ ಎಂದು ಹೇಳಿದರು.
ಕಸಾಪ ತರೀಕೆರೆ ತಾಲೂಕು ಘಟಕ ಕಳೆದ ತಿಂಗಳೆಲ್ಲಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಮಾಡಿದ್ದು, ಉಮಾ ಪ್ರಕಾಶ್ ಅವರ ಮನೆಂಗಳದ ಈ ಕಾರ್ಯಕ್ರಮ ವಿಶೇಷವಾಗಿದೆ.ಚಿಕ್ಕಮಗಳೂರು ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಗೆಜ್ಜೆನಾದ ಕೃತಿ ಬಿಡುಗಡೆ ಮಾಟ ಮಾತನಾಡಿ ಈ ನೆಲದ ವಿದ್ವಾಂಸರು ಸಾಹಿತ್ಯ, ಕಲೆಗೆ ವಿಶೇಷ ಕೊಡುಗೆ ನೀಡಿದ್ದಾರೆ. ಅನರ್ಘ್ಯರತ್ನ ಎ.ವಿ. ಸೂರ್ಯನಾರಾಯಣ ಸ್ವಾಮಿ ಈ ಇಳಿ ವಯಸ್ಸಿನಲ್ಲೂ ಇಂತಹ ಸಾಹಿತ್ಯ ಸಂವಾದ, ಚರ್ಚೆ, ವಿಷಯಾಧಾರಿತ ಚರ್ಚಾ ಕೂಟದಲ್ಲಿ ಭಾಗವಹಿ ಯುವ ಮನಸುಗಳಿಗೆ ಸಾಹಿತ್ಯದ ಔತಣ ಬಡಿಸುತ್ತಿರುವುದು ಒಂದು ವಿಶೇಷ. ಇವರು ತರೀಕೆರೆ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. ಸುಮಾರು 18 ಸಾಹಿತ್ಯ ಸಮ್ಮೇಳನಗಳು ತರೀಕೆರೆಯಲ್ಲಿ ನಡೆದಿದೆ ಎಂದು ಹೇಳಿದರು.ಮೈಸೂರು ನಿವೃತ್ತ ಕನ್ನಡ ಉಪನ್ಯಾಸಕ ಎ.ವಿ.ಸೂರ್ಯನಾರಾಯಣಸ್ವಾಮಿ ಮಾತನಾಡಿ ಕನ್ನಡ, ಭಾರತ ಮತ್ತು ವಿಶ್ವಮಾತೆ ಒಟ್ಟಿಗೆ ಪ್ರದರ್ಶನವಾಗುತ್ತಿದೆ. ಕಲ್ಲಿನ ಮೇಲೆ ಕುಳಿತು ಸರಸ್ಪತಿ ವೀಣೆ ನುಡಿಸುತ್ತಿದ್ದು, ಮಳೆ ಜಪ ಮಾಡುತ್ತಿದ್ದಾಳೆ. ಸಮೃದ್ಧಿ ಕರೆಗಾಗಿ ಜಪ ಮಾಡುತ್ತಿ ದ್ದಾಳೆ. ಈ ಭಾಗ್ಯ ಎಂದೆಂದಿಗೂ ನೆಲೆಸಲಿ ಎಂಬ ಹಾರೈಕೆ ನಮ್ಮದು, ಎಲ್ಲಾ ಕಾಲದಲ್ಲೂ ಒಳ್ಳೆಯದೂ, ಕೆಟ್ಟದ್ದೂ ಇದೆ, ನಾವು ಹೇಗಿರುತ್ತೇವೆ ಎಂಬುದು ಮುಖ್ಯ. ಎಲ್ಲಾ ಕವಿಗಳು ಎಲ್ಲಾ ತರಹದ ಕವಿತೆಗಳನ್ನು ರಚಿಸಿದ್ದಾರೆ. ನುಡಿಗಳಿಂದಲೇ ಎಲ್ಲಾ ಮಾಡಿದ್ದಾರೆ ಎಂದು ಹೇಳಿದರು.
ಸಂತೋಷ ಎಂಬುದು ಮನಸ್ಸಿಗೆ ಸಂಬಂಧಿಸಿದ್ದು, ಅತಿಶಯವಾದ ಆನಂದ ಮನಸ್ಸಿಗೆ ಸಂತೋಷ ಉಂಟುಮಾಡುತ್ತದೆ, ಪೂರ್ವಕಾಲದ ಜನರು ಇದನ್ನೆ ಹೇಳಿದರು, ನಾದ, ವೇದ, ಆನಂದ ಉಂಟುಮಾಡುತ್ತದೆ. ಎಲ್ಲಾ ಒಂದೇ ಭಾವನೆ ಬಂದರೆ ಜೀವನ ಸಾರ್ಥಕ ಆಗುತ್ತದೆ. ಕೀರ್ತನೆ ಎಂಬುದು ಕಿವಿಗೆ ಇಂಪು ಎಂದರು. 8-10 ವರ್ಷದ ಹುಡುಗ ಶ್ರೀ ಸ್ವಾಮಿ ವಿವೇಕಾನಂದರಿಗೆ ಹಣ್ಣು ನೀಡಿ ಸತ್ಕರಿಸಿದಾಗ ಅವರು ಇನಾಮು ನೀಡಲು ಮುಂದಾದಾಗ ಆ ಹುಡುಗ ತಿರಸ್ಕರಿಸಿ, ನೀವು ನಿಮ್ಮ ದೇಶಕ್ಕೆ ಹೋದಾಗ ಅಮೇರಿಕಾದಲ್ಲಿ ನಾನು ಉಪವಾಸ ಇರಲಿಲ್ಲ ಎಂದು ಹೇಳಿದರೆ ಸಾಕು ಎಂದಾಗ ಆ ಹುಡುಗನಲ್ಲಿ ಎಂಥಹ ಅದ್ಭುತವಾದ ದೇಶಪ್ರೇಮ ಇದೆ. ಶ್ರೀ ಸ್ವಾಮಿ ವಿವೇಕಾನಂದರು ಆ ಹುಡುಗನ ದೇಶಪ್ರೇಮ ಪ್ರಶಂಸಿಸುತ್ತಾರೆ. ಯುದ್ಧ ಭೂಮಿಯಲ್ಲಿ ದೇಶಪ್ರೇಮ ಇಮ್ಮಡಿಯಾಗುತ್ತದೆ. ಜ್ಞಾನವೆಂಬ ಸೂರ್ಯ ಊದಯವಾದಾಗ ಅಜ್ಞಾನ ಕಳೆಯುತ್ತದೆ ಎಂದರು. ಪ್ರಕೃತಿ ಶ್ರೀ ಕಲಾ ಕುಟೀರ ಅಧ್ಯಕ್ಷೆ ಉಮಾಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂತಹ ಪ್ರಾಜ್ಞರಿಂದ ನುಡಿಮುತ್ತುಗಳನ್ನು ಕೇಳುವ ಸೌಭಾಗ್ಯ ಒದಗಿಸಿದ ಸಾಹಿತ್ಯ ಪರಿಷತ್ತಿಗೆ ಧನ್ಯವಾದ ತಿಳಿಸಿದರು. ಸಮಾರಂಭದಲ್ಲಿ ಸುನೀತಾ ಕೀರಣ್, ಲತಾಗೋಪಾಲಕೃಷ್ಣ, ಲಕ್ಷ್ಮೀಭಗವಾನ್, ಗಾಯತ್ರಿರವಿ, ತ.ಮ. ದೇವಾನಂದ, ಟಿ.ಆರ್. ಪ್ರಕಾಶ್, ಸಿ.ಯೋಗೀಶ್, ರುದ್ರಮ್ಮ, ಶೃತಿರವಿಕುಮಾರ್, ಹಾಗೂ ಸ್ಥಳಿಯರು ಭಾಗವಹಿಸಿದ್ದು ನನಗೆ ಸಂತೋಷ ತಂದಿದೆ ಎಂದರು.ಜಿಲ್ಲಾ ಕಸಾಪ ಸಂಚಾಲಕ ಇಮ್ರಾನ್ ಅಹಮದ್ ಬೇಗ್, ನವೀನ್ ಪೆನ್ನಯ್ಯ, ಮರುಳಸಿದ್ದಯ್ಯ ಪಟೇಲ್, ಕೆ.ಎಸ್.ಶಿವಣ್ಣ ಮತ್ತಿತರರು ಭಾಗವಹಿಸಿದ್ದರು.20ಕೆಟಿಆರ್.ಕೆ.5ಃ
ತರೀಕೆರೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪ್ರಕೃತಿಶ್ರೀ ಕಲಾ ಕುಟೀರ ತರೀಕೆರೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸಂವಾದವನ್ನು ಕಸಾಪ ಅಧ್ಯಕ್ಷ ರವಿ ದಳವಾಯಿ ಉದ್ಘಾಟಿಸಿದರು. ಪ್ರಕೃತಿಶ್ರೀ ಕಲಾ ಕುಟೀರದ ಅಧ್ಯಕ್ಷೆ ಉಮಾ ಪ್ರಕಾಶ್, ಮೈಸೂರು ನಿವೃತ್ತ ಕನ್ನಡ ಉಪನ್ಯಾಸಕ, ವಿದ್ಯಾಂಸ ಎ.ವಿ.ಸೂರ್ಯನಾರಾಯಣಸ್ವಾಮಿ, ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಕನ್ನಡಶ್ರೀ ಬಿ.ಎಸ್.ಭಗವಾನ್ ಮತ್ತಿತರರು ಇದ್ದರು.