ತಾಲೂಕು ಕಚೇರಿ ಬಡವರ ಪಾಲಿಗೆ ಮುಳ್ಳಿನ ಹಾದಿಯಾಗಿ ಕಂದಾಯ, ಸರ್ವೇ ಹಾಗೂ ರಿಯಲ್ ಎಸ್ಟೇಟ್ ಉದ್ದಿಮೆಗಳಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟಿದೆ.
ಕನ್ನಡಪ್ರಭ ವಾರ್ತೆ ಮುಳಬಾಗಿಲುಕಸಬಾ ಹೋಬಳಿ ಸ.ನಂ. 63ರ ವೈ. ಕೋಗಿಲೇರಿ ಕಂದಾಯ ವ್ಯಾಪ್ತಿಯ ಭೂ ಹಗರಣ ಸೂಕ್ತ ಅಧಿಕಾರಿಗಳಿಂದ ತನಿಖೆ ನಡೆಸಿ ಅಕ್ರಮ ಸಾಗುವಳಿ ರದ್ದು ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ತಹಸೀಲ್ದಾರ್ ಗೀತಾರನ್ನು ಆಗ್ರಹಿಹಿಸಿದರು.ತಾಲೂಕು ಕಚೇರಿ ಬಡವರ ಪಾಲಿಗೆ ಮುಳ್ಳಿನ ಹಾದಿಯಾಗಿ ಕಂದಾಯ, ಸರ್ವೇ ಹಾಗೂ ರಿಯಲ್ ಎಸ್ಟೇಟ್ ಉದ್ದಿಮೆಗಳಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.ಭೂರಹಿತ ಸಣ್ಣ ರೈತರಿಗೆ ಅನುಕೂಲವಾಗಲೆಂದು ಸರ್ಕಾರ ನಮೂನೆ 53, 57, 59 ರ ಅರ್ಜಿ ಸಲ್ಲಿಸಿರುವ ಬಡ ರೈತರಿಗೆ ದರಕಾಸ್ತು ಕಮಿಟಿ ಮುಖಾಂತರ ಭೂಮಿ ಪರಿಶೀಲನೆ ಮಾಡಿ ಕಂದಾಯ ಸರ್ವೇ ಅಧಿಕಾರಿಗಳ ವರದಿ ನಂತರ ತಹಸೀಲ್ದಾರ್ ಸ್ಥಳ ಪರಿಶೀಲನೆ ಮಾಡಿ ನೀಡಬೇಕಾದ ಸಾಗುವಳಿ ಚೀಟಿಗಳು ಇಂದು ಗಲ್ಲಿಗಲ್ಲಿಯಲ್ಲಿ ಮಾರಾಟವಾಗುವ ವಸ್ತುಗಳಾಗಿ ಮಾರ್ಪಟ್ಟಿವೆ. ಬಡವರ ಹೆಸರಿನಲ್ಲಿ ಶ್ರೀಮಂತರ ಮಂಜೂರು ಮಾಡಿಸಿದ ಅಕ್ರಮವಾಗಿ ಲಕ್ಷ ಲಕ್ಷಕ್ಕೆ ಸಾಗುವಳಿ ಚೀಟಿಗಳನ್ನು ಕೊಂಡುಕೊಳ್ಳುವ ಮಟ್ಟಕ್ಕೆ ವ್ಯವಸ್ಥೆ ಹದಗೆಟ್ಟು ನಿಂತಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪತ್ರಿಕಾ ಹೇಳಿಕೆ ನೀಡುವಾಗ ರೈತ ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ನಾಸಿರ ಮಂಜುನಾಥ ಸುಧಾ ಜಿಲ್ಲಾ. ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ರಾಜೇಶ ನಾಗರಾಜ ಪಾರುಕ್‌ಪಾಷ ಜಿಲ್ಲಾ ಮುಖಂಡ ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್ ಇದ್ದರು.