ಉಡುಪಿ ಯುಪಿಎಂಸಿ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ

| Published : Apr 08 2025, 12:32 AM IST

ಉಡುಪಿ ಯುಪಿಎಂಸಿ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ವಿಭಾಗದ ವತಿಯಿಂದ ಪದವಿ ವಿದ್ಯಾರ್ಥಿಗಳಿಗಾಗಿ ಮಂಗಳೂರಿನ ಫ್ರಾಂಕ್ಲಿನ್ ಟೆಂಪಲ್ಟೆನ್ ಅಸೆಟ್ ಮ್ಯಾನೇಜ್ಮೆಂಟ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ವತಿಯಿಂದ ಹೂಡಿಕೆ ದಾರರ ಜಾಗೃತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ವಿಭಾಗದ ವತಿಯಿಂದ ಪದವಿ ವಿದ್ಯಾರ್ಥಿಗಳಿಗಾಗಿ ಮಂಗಳೂರಿನ ಫ್ರಾಂಕ್ಲಿನ್ ಟೆಂಪಲ್ಟೆನ್ ಅಸೆಟ್ ಮ್ಯಾನೇಜ್ಮೆಂಟ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ವತಿಯಿಂದ ಹೂಡಿಕೆ ದಾರರ ಜಾಗೃತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.ಫ್ರಾಂಕ್ಲಿನ್ ಟೆಂಪೆಲ್ಟನ್ ಅಸೆಟ್ ಮ್ಯಾನೇಜ್ಮೆಂಟ್ ಕಂಪೆನಿಯ ಹಿರಿಯ ಶಾಖಾ ಪ್ರಬಂಧಕ ಲಿಯೋ ಅಮಲ್ ಎ. ಅವರು ವಿದ್ಯಾರ್ಥಿಗಳಿಗೆ ಹೂಡಿಕೆ ಮಾಡುವ ವಿಧಾನ ಮತ್ತು ಹೂಡಿಕೆಯ ಅಗತ್ಯಗಳನ್ನು ತಿಳಿ ಹೇಳಿದರು. ಇಂದಿನ ಯುವ ಜನತೆ ಗಳಿಕೆಯ ಹಣವನ್ನು ವ್ಯಯಿಸುತ್ತಿದ್ದಾರೆ. ಹಣ ಉಳಿತಾಯದ ಬಗ್ಗೆ ಯೋಚಿಸುತ್ತಿಲ್ಲ ಇದರಿಂದ ಭವಿಷ್ಯದ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗುತ್ತದೆ ಎಂದ ಅವರು ಉಳಿತಾಯ, ಹೂಡಿಕೆ ಅದರ ಸರಿಯಾದ ಕ್ರಮಗಳ ಬಗ್ಗೆ ವಿವರಗಳನ್ನು ನೀಡಿದರು.

ಕಾಲೇಜಿನ ಪ್ರಾಚಾರ್ಯರಾದ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರಭಾ ಕಾಮತ್, ಐಕ್ಯೂಏಸಿ ಸಂಚಾಲಕ ಜಾವೇದ್, ಕಾರ್ಯಕ್ರಮದ ಸಂಯೋಜಕ ರಾಘವೇಂದ್ರ ಜಿ. ಜಿ. ಉಪಸ್ಥಿತರಿದ್ದರು. ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಶ್ರಾವ್ಯ ರಾವ್ ಕಾರ್ಯಕ್ರಮ ನಿರೂಪಿಸಿದರು.