ಐತಿಹಾಸಿಕ ಶಿವಪಾಡಿ ವೈಭವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

| Published : Feb 06 2025, 12:19 AM IST

ಐತಿಹಾಸಿಕ ಶಿವಪಾಡಿ ವೈಭವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಫೆಬ್ರವರಿ 22 ರಿಂದ ಫೆಬ್ರವರಿ 26ರವರೆಗೆ ವೈಭವೋಪೇತವಾಗಿ ನಡೆಯಲಿರುವ ಐತಿಹಾಸಿಕ ಶಿವಪಾಡಿ ವೈಭವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮಣಿಪಾಲ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಬುಧವಾರ ಅನಾವರಣಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಫೆಬ್ರವರಿ 22 ರಿಂದ ಫೆಬ್ರವರಿ 26ರವರೆಗೆ ವೈಭವೋಪೇತವಾಗಿ ನಡೆಯಲಿರುವ ಐತಿಹಾಸಿಕ ಶಿವಪಾಡಿ ವೈಭವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮಣಿಪಾಲ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಬುಧವಾರ ಅನಾವರಣಗೊಳಿಸಲಾಯಿತು.

ಶಿವಪಾಡಿ ವೈಭವ ಆಚರಣಾ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ ರಘುಪತಿ ಭಟ್ ಹಾಗೂ ಎಸ್‌ಕೆಡಿಆರ್‌ಡಿಪಿ ಬಿಸಿ ಟ್ರಸ್ಟ್ ಉಡುಪಿ ಇದರ ನಿರ್ದೇಶಕರಾದ ನಾಗರಾಜ್ ಜೆ. ಶೆಟ್ಟಿ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೆಸರರಾದ ಮಹೇಶ್ ಠಾಕೂರ್, ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಇದರ ಅಧ್ಯಕ್ಷರಾದ ದಿನೇಶ್ ಪ್ರಭು, ಒಕ್ಕೂಟ ಕೇಂದ್ರೀಯ ಸಮಿತಿ ಜಿಲ್ಲಾ ಅಧ್ಯಕ್ಷರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಂದರ ಜೆ ಕಲ್ಮಾಡಿ, ಧರ್ಮಸ್ಥಳ ನ್ಯಾಚುರೋಪತಿ ಆಸ್ಪತ್ರೆ ಪರೀಕ ಇದರ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಭಜನಾ ಪರಿಷತ್ ಅಧ್ಯಕ್ಷರಾದ ವಿಜಯ ಕೊಂಡಾಡಿ, ಡೈರೆಕ್ಟರ್ ಆಫ್ ಸ್ಟೂಡೆಂಟ್ ಅಫೇರ್ಸ್ ಮಾಹೆ ಇದರ ಡಾ. ಗೀತಾ ಮೈಯ್ಯ, ಶಾಶ್ವತ ಟ್ರಸ್ತಿಗಳಾದ ದಿನೇಶ್ ಸಾಮಂತ್, ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು, ಕೆಕೆ ಡಿಜಿಬಿ ವಿದ್ಯಾ ಪ್ರಸಾರಕ ಮಂಡಲದ ಅಧ್ಯಕ್ಷ ಸತೀಶ್ ಪಾಟೀಲ್, ಟ್ರಸ್ಟಿಗಳಾದ ಪುರುಷೋತ್ತಮ ಪ್ರಭು, ಅಶೋಕ್ ಸಾಮಂತ್, ಶ್ರೀಕಾಂತ್ ಪ್ರಭು, ಜಿ ಕೃಷ್ಣರಾಯ ಪಾಟೀಲ್, ಪ್ರಕಾಶ್ ಪ್ರಭು, ಸಂಜಯ ಪ್ರಭು ಮತ್ತಿತರರಿದ್ದರು.ಎಸ್‌ಕೆಡಿಆರ್‌ಡಿಪಿ ತಾಲೂಕು ಯೋಜನಾಧಿಕಾರಿ ರಾಮ.ಎಂ ಸ್ವಾಗತಿಸಿದರು ಹಾಗೂ ಎಸ್‌ಕೆಡಿಆರ್‌ಡಿಪಿ ಮಣಿಪಾಲ ವಲಯ ಮೇಲ್ವಿಚಾರಕರಾದ ಬಾಲಚಂದ್ರ ಮತ್ತು ಕೃಷಿ ಮೇಲ್ವಿಚಾರಕರಾದ ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿದರು.