ಬೈಲೂರು ಮಹಿಷಮರ್ದಿನಿ ದೇವಳದಲ್ಲಿ ಶತಚಂಡಿಕಾಯಾಗ ಆಹ್ವಾನ ಪತ್ರ ಬಿಡುಗಡೆ

| Published : Nov 17 2024, 01:19 AM IST

ಸಾರಾಂಶ

ದೇವಿಯ ಸನ್ನಿಧಿಯಲ್ಲಿ ಮೊದಲ ಬಾರಿಗೆ ಏಕ ಕಾಲದಲ್ಲಿ 1 ಸಾವಿರ ಮಹಿಳೆಯರಿಂದ ಮಹಿಷಮರ್ದಿನಿ ಶ್ರೀದೇವಿಗೆ ದುರ್ಗಾರತಿ, ನೂರಾರು ಭಕ್ತರೂ ನೇರವಾಗಿ ಶತ ಚಂಡಿಕಾಯಾಗ ಸಂಕಲ್ಪ ಪೂಜೆ, ಪೂರ್ಣಾಹುತಿಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಡಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ.9ರಿಂದ 15ರ ವರೆಗೆ ನಡೆಯುವ ಶತಚಂಡಿಕಾ ಯಾಗ ಮತ್ತು ಬ್ರಹ್ಮಮಂಡಲ ಸೇವೆಯ ಆಹ್ವಾನ ಪತ್ರಿಕೆಯನ್ನು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ದೇವಸ್ಥಾನದ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಶತಚಂಡಿಕಾ ಯಾಗ ಸಮಿತಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಮಾತನಾಡಿ, ನಾಗದೇವರ ಸನ್ನಿಧಿಯಲ್ಲಿ ಬ್ರಹ್ಮಮಂಡಲ ಪೂಜೆ ಹಾಗೂ ದೇವಿಯ ಸನ್ನಿಧಿಯಲ್ಲಿ ಮೊದಲ ಬಾರಿಗೆ ಏಕ ಕಾಲದಲ್ಲಿ 1 ಸಾವಿರ ಮಹಿಳೆಯರಿಂದ ಮಹಿಷಮರ್ದಿನಿ ಶ್ರೀದೇವಿಗೆ ದುರ್ಗಾರತಿ, ನೂರಾರು ಭಕ್ತರೂ ನೇರವಾಗಿ ಶತ ಚಂಡಿಕಾಯಾಗ ಸಂಕಲ್ಪ ಪೂಜೆ, ಪೂರ್ಣಾಹುತಿಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಡಲಾಗಿದೆ ಎಂದರು.ಈ ಸಂದರ್ಭದಲ್ಲಿ ಯಕ್ಷ ಧ್ರುವ ಫೌಂಡೇಷನ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಕೊಡಂಕೂರು ಶಿರ್ಡಿ ಸಾಯಿಬಾಬ ಮಂದಿರದ ಮುಖ್ಯಸ್ಥ ದಿವಾಕರ್ ಶೆಟ್ಟಿ, ಉದ್ಯಮಿ ಪುರೋಷತ್ತಮ ಶೆಟ್ಟಿ, ದೇವಳದ ತಂತ್ರಿ ಕೆ.ಎಸ್. ಕೃಷ್ಣಮೂರ್ತಿ, ಕಾರ್ಯದರ್ಶಿ ನಾರಾಯಣದಾಸ್ ಉಡುಪ, ಕೋಶಾಧಿಕಾರಿ ಸುದರ್ಶನ್ ಶೇರಿಗಾರ್, ಪವಿತ್ರಪಾಣಿ ಶ್ರೀನಿವಾಸ್ ಆಚಾರ್ಯ, ಅರ್ಚಕ ವರದರಾಜ್ ಭಟ್, ಆರ್ಥಿಕ ಸಮಿತಿ ಸಂಚಾಲಕ ರಮೇಶ್ ಶೆಟ್ಟಿ ಕಳ್ಳತ್ತೂರು, ಪ್ರಸಂಗಕರ್ತ ಪವನ್ ಕಿರಣ್‌ಕೆರೆ, ವಿದ್ವಾಂಸ ಎಂ.ಎಲ್.ಸಾಮಗ, ದೇವಸ್ಥಾನದ ಮೊಕ್ತೇಸರ ರಾಜಶೇಖರ್ ಭಟ್, ಪ್ರಮುಖರಾಗ ನಿರುಪಮಾ ಪ್ರಸಾದ್ ಶೆಟ್ಟಿ, ಮೋಹನ್ ಆಚಾರ್ಯ, ದುರ್ಗಾಪ್ರಸಾದ್, ಭಾರತಿ ಜಯರಾಮ ಆಚಾರ್, ರಮೇಶ್ ಶೆಟ್ಟಿ ಕಳತ್ತೂರು, ಪ್ರೇಮನಾಥ್, ಸುರೇಶ ಶೆಟ್ಟಿ, ಸುಭಾಸ್ ಭಂಡಾರಿ, ಅರುಣ್ ಶೆಟ್ಟಿಗಾರ್, ಪ್ರವೀಣ್ ಕುಮಾರ್, ಶಾಂತ ಶೇರಿಗಾರ್ ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಿ. ಜಯಕರ್ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ದಾಮೋದರ್ ಶರ್ಮ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.