ದೇವದುರ್ಗ ತಾಲೂಕು ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ

| Published : Feb 09 2024, 01:47 AM IST

ದೇವದುರ್ಗ ತಾಲೂಕು ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ
Share this Article
  • FB
  • TW
  • Linkdin
  • Email

ಸಾರಾಂಶ

ದೇವದುರ್ಗ ತಾಲೂಕಿನ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಗೊಂಡ ಶಂಕರರಾವ್ ಉಭಾಳೆಗೆ ಪರಿಷತ್ತು ಹಾಗೂ ಸ್ವಾಗತ ಸಮಿತಿಯಿಂದ ಸನ್ಮಾನಿಸಿ ಆಹ್ವಾನ ಕೋರಲಾಯಿತು.

ದೇವದುರ್ಗ: ತಾಲೂಕಿನ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಗೊಂಡ ಶಂಕರರಾವ್ ಉಭಾಳೆಯವರನ್ನು ಪರಿಷತ್ತು ಹಾಗೂ ಸ್ವಾಗತ ಸಮಿತಿಯಿಂದ ಸನ್ಮಾನಿಸಿ ಆಹ್ವಾನ ಕೋರಲಾಯಿತು.

ಪಟ್ಟಣದ ಅಂಭಾಭವಾನಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಫೆ.25ರಂದು ಖೇಣೇದ ಮುರಿಗೆಪ್ಪ ಕಲ್ಯಾಣ ಮಂಟಪದಲ್ಲಿ ಜರುಗಲಿರುವ ದೇವದುರ್ಗ ತಾಲೂಕು ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಗೊಂಡ ಶಂಕರರಾವ ಉಭಾಳೆಗೆ ಅಧಿಕೃತವಾಗಿ ಆಹ್ವಾನ ನೀಡಲಾಯಿತು.

ನಿಯೋಜಿತ ಅಧ್ಯಕ್ಷ ಶಂಕರರಾವ್ ಉಭಾಳೆ ಮಾತನಾಡಿ, ಈ ಗೌರವ ನನ್ನ ಸಾಹಿತ್ಯ ಕೃಷಿಗೆ ಸಲ್ಲುತ್ತದೆ. ಕನ್ನಡಾಂಬೆಯ ಸೇವೆಯನ್ನು ಗುರುತಿಸಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿರುವದಕ್ಕೆ ಅಭಿನಂದಿಸಿದರು. ಸಾಹಿತ್ಯ ಪ್ರಕಾರಗಳಲ್ಲಿ ಚುಟುಕು ಸಾಹಿತ್ಯ ಕೂಡ ಸಾಹಿತ್ಯಲೋಕಕ್ಕೆ ತನ್ನ ಅಮೂಲ್ಯ ಕೊಡುಗೆ ನೀಡಿದೆ. ಕಿರು ಸಾಲುಗಳ ಕವಿತೆ ಪರಿಣಾಮ ಬೀರುವ ಸಾಹಿತ್ಯವಾಗಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಚುಟುಕು ಸಾಹಿತ್ಯ ಸಮ್ಮೇಳನ ಜರುಗುತ್ತಿರುವುದು ಗಮನಾರ್ಹ ಸಂಗತಿಯಾಗಿದೆ ಎಂದರು.

ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ ಮಾತನಾಡಿದರು. ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ನರಸಿಂಗರಾವ್ ಸರಕೀಲ್, ಅಧ್ಯಕ್ಷ ಮೈನುದ್ದೀನ್ ಕಾಟಮಳ್ಳಿ, ಕೋಶಾಧ್ಯಕ್ಷ ಬಸವರಾಜ ನಾಯಕ ಮಸ್ಕಿ, ಪದಾಧಿಕಾರಿಗಳು, ಸದಸ್ಯರು ಇದ್ದರು.