ಸಾರಾಂಶ
Invited for direct interview on 30th
ಯಾದಗಿರಿ: ಅಕ್ಟೋಬರ್ 30 ರಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್ ಪ್ರೈ. ಲಿ., ಯಾದಗಿರಿ ಬ್ರಾಂಚಿನಲ್ಲಿ ನೇರ ಸಂದರ್ಶನ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಆಯೋಜಿಸಲಾಗಿದೆ ಎಂದು ಉದ್ಯೋಗಾಧಿಕಾರಿ ಪ್ರಭಾಕರ್ ಅವರು ತಿಳಿಸಿದ್ದಾರೆ.
ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್ ಪ್ರೈ. ಲಿ., ಯಾದಗಿರಿ ಕಸ್ಟಮರ್ ರಿಲೇಷನ್‌ಶಿಪ್ ಎಕ್ಸಿಕ್ಯೂಟಿವ್ ಹುದ್ದೆಗೆ 50 ಹುದ್ದೆಗಳು ಖಾಲಿ ಇದ್ದು, ಹುದ್ದೆಗೆ ಅರ್ಹತೆ ಪಿಯುಸಿ ಅಥವಾ ಮೇಲ್ಪಟ್ಟು. ಯಾದಗಿರಿ, ಶಹಾಪುರ, ಸುರಪುರ ಗುರಮಠಕಲ್, ಸೈದಾಪೂರ, ಕೆಂಭಾವಿ, ಜೇವರ್ಗಿ. ಯಡ್ರಾಮಿ, ಹುಣಸಿಗಿ, ದೇವದುರ್ಗ, ಉದ್ಯೋಗ ಸ್ಥಳವಾಗಿದೆ. ಪುರುಷ ಅಭ್ಯರ್ಥಿಗಳು ಮಾತ್ರ ಭಾಗಹಿಸಬಹುದಾಗಿದೆ, ಹುದ್ದೆಗಳಿಗೆ 18 ರಿಂದ 30 ವರ್ಷ ಒಳಗಿರಬೇಕು, ನೇರ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು, ನೇರ ಸಂದರ್ಶನ ನಡೆಯುವ ಸ್ಥಳ ಚೈತನ್ಯ ಇಂಡಿಯಾ ಫಿನ್ ಕ್ರೇಡಿಟ್ ಪ್ರೆವೇಟ್ ಲಿಮಿಟೆಡ್, ಗಂಜ್ ಏರಿಯಾ ಮುಖ್ಯ ರಸ್ತೆ ರಾಯಲ್ ಎನ್‌ಫೀಲ್ಡ್ ಶೋ ರೂಂ, 2ನೇ ಮಹಡಿ ಯಾದಗಿರಿ. ದೂ.ಸಂ.08473253718 ಮೊ.ನಂ.8050970267, 9448566765. ಕಚೇರಿ ಸಮಯದಲ್ಲಿ ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ ಚಿತ್ತಾಪೂರು ರೋಡ್ ಮಿನಿ ವಿಧಾನ ಸೌಧ ಜಿಲ್ಲಾಡಳಿತ ಭವನ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಬಿ ಬ್ಲಾಕ್ ರೂ.ನಂ.ಬಿ1, ಬಿ2 2ನೇ ಮಹಡಿ ಯಾದಗಿರಿ ದೂ.ಸಂ.08473253718 ಹಾಗೂ ಮೊ.ನಂ.9448566765ಗೆ ಕಛೇರಿಯ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.