ಅಯೋಡಿನ್ ಮನುಷ್ಯನ ದೇಹಕ್ಕೆ ಅತಿ ಮುಖ್ಯ

| Published : Oct 26 2024, 01:03 AM IST / Updated: Oct 26 2024, 01:04 AM IST

ಸಾರಾಂಶ

ಹೊಸಕೋಟೆ: ಅಯೋಡಿನ್ ಕೊರತೆಯಿಂದ ಸ್ಥಳೀಯ ಗಾಯಿಟಾರ್ ಹಾಗೂ ಥೈರಾಯಿಡ್ ಗ್ರಂಥಿಗಳ ಸಮಸ್ಯೆ ಹೆಚ್ಚಾಗುತ್ತದೆ, ನಾವು ಪ್ರತಿ ದಿನ ಉಪ್ಪಿನಲ್ಲಿ ಅಯೋಡಿನ್ ಬಳಸಬೇಕು ಎಂದು ಜಿಲ್ಲಾ ಸಾಂಕ್ರಾಮಿಕ ಆರೋಗ್ಯಶಾಸ್ತ್ರಜ್ಞೆ ಡಾ. ಶಾಲಿನಿ ತಿಳಿಸಿದರು.

ಹೊಸಕೋಟೆ: ಅಯೋಡಿನ್ ಕೊರತೆಯಿಂದ ಸ್ಥಳೀಯ ಗಾಯಿಟಾರ್ ಹಾಗೂ ಥೈರಾಯಿಡ್ ಗ್ರಂಥಿಗಳ ಸಮಸ್ಯೆ ಹೆಚ್ಚಾಗುತ್ತದೆ, ನಾವು ಪ್ರತಿ ದಿನ ಉಪ್ಪಿನಲ್ಲಿ ಅಯೋಡಿನ್ ಬಳಸಬೇಕು ಎಂದು ಜಿಲ್ಲಾ ಸಾಂಕ್ರಾಮಿಕ ಆರೋಗ್ಯಶಾಸ್ತ್ರಜ್ಞೆ ಡಾ. ಶಾಲಿನಿ ತಿಳಿಸಿದರು.

ತಾಲೂಕಿನ ಕಲ್ಕುಂಟೆ ಅಗ್ರಹಾರದ ಶ್ರೀ ರಂಗನಾಥ ಪ್ರೌಡಶಾಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಸರ್ವೇಕ್ಷಣ ಘಟಕ ಆಯೋಜಿಸಿದ್ದ ಅಯೋಡಿನ್ ಕೊರತೆ ಅಸ್ವಸ್ಥತೆಗಳ ನಿಯಂತ್ರಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಅಯೋಡಿನ್ ಕೊರತೆ ನೀಗಿಸಲು ಸರ್ಕಾರ ಅಯೋಡಿನ್ ರಹಿತ ಉಪ್ಪಿನ ಉತ್ಪಾದನೆ ನಿಷೇಧಿಸಿದೆ. ಕೇವಲ ಅಯೋಡಿನ್ ಸಹಿತ ಉಪ್ಪನ್ನೇ ಬಳಸುವಂತೆ ನಿರ್ದೇಶಿಸಿದೆ. ಅಯೋಡಿನ್ ಕೊರತೆಯಿಂದ ಮಕ್ಕಳ ಬೆಳವಣಿಗೆ ಕುಂಟಿತವಾಗುತ್ತದೆ. ಇದರಿಂದ ಹೈಪೋಥೈರಾಯಿಡ್ ಸಮಸ್ಯೆ ಉಂಟಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಸುರಕ್ಷಣಾ ಅಧಿಕಾರಿ ಡಾ ಹೇಮಲತಾ, ತಾಲೂಕು ಆರೋಗ್ಯಾಧಿಕಾರಿ ಡಾ ವೀಣಾ, ಪ್ರಾಥಮಿಕ ಸಂರಕ್ಷಣಾದಿಕಾರಿ ವಿದ್ಯಾ, ಸಮುದಾಯ ಆರೋಗ್ಯಾಧಿಕಾರಿಗಳು ಭಾಗವಹಿಸಿದ್ದರು.

ಫೋಟೋ: 24 ಹೆಚ್‌ಎಸ್‌ಕೆ 3

ಹೊಸಕೋಟೆ ತಾಲೂಕಿನ ಕಲ್ಕುಂಟೆ ಅಗ್ರಹಾರದ ಶ್ರೀ ರಂಗನಾಥ ಪ್ರೌಡ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಯೋಡಿನ್ ಕೊರತೆ ಅಸ್ವಸ್ಥತೆ ನಿಯಂತ್ರಣ ದಿನಾಚರಣೆ ಕಾರ್ಯಕ್ರಮದಲ್ಲಿ ಕರಪತ್ರ ಬಿಡುಗಡೆಗೊಳಿಸಿ ಜಾಗೃತಿ ಮೂಡಿಸಲಾಯಿತು.