ಇರಕಲ್‌ ಕೆರೆ ಖಾಲಿ: ಕುಡಿವ ನೀರಿಗೆ ಪರಿಪಾಟಲು

| Published : Apr 13 2024, 01:02 AM IST

ಸಾರಾಂಶ

ಪಾಮನಕಲ್ಲೂರು ಪಂಚಾಯ್ತಿ ವ್ಯಾಪ್ತಿ ಗುಡಿಹಾಳ ಗ್ರಾಮದಲ್ಲಿ ನೀರಿ ಸಮಸ್ಯೆ ತೀವ್ರವಾಗಿದೆ. ಗ್ರಾಮದಲ್ಲಿ ಕೊಳವೆಬಾವಿ ಇಲ್ಲದ ಕಾರಣ ಕುಡಿಯಲು ಇರಕಲ್ ಕೆರೆ ನೀರು ಹಾಗೂ ಬಳಕೆಗೆ ಗುಡಿಹಾಳ ಹಳೇ ಕೆರೆ ನೀರು ಬಿಡಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಕವಿತಾಳ

ಮಸ್ಕಿ ತಾಲೂಕಿನ ಅಮೀನಗಡ, ಪಾಮನಕಲ್ಲೂರು, ವಟಗಲ್ ಮತ್ತು ಹಾಲಾಪುರ ಗ್ರಾಪಂ ವ್ಯಾಪ್ತಿಯ ಅಂದಾಜು 32 ಹಳ್ಳಿಗಳಿಗೆ ಕುಡಿವ ನೀರು ಸರಬರಾಜು ಮಾಡುವ ಇರಕಲ್ ಕೆರೆಯಲ್ಲಿ ನೀರು ಕಡಿಮೆಯಾಗಿದ್ದು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ.

ಕೆರೆ ನೀರು ಮಲೀನವಾಗಿದ್ದು ನೀರು ಹೊರಬಿಟ್ಟು ಹೊಸ ನೀರು ತುಂಬಿಸುವಂತೆ ಜನರು ಆಗ್ರಹಿಸಿದ ಹಿನ್ನೆಲೆ ಕೊನೆ ಕ್ಷಣದಲ್ಲಿ ನೀರು ತುಂಬುವ ಸಮಯದಲ್ಲಿ ಕಾಲುವೆ ನೀರು ಸ್ಥಗಿತವಾದ ಕಾರಣ ಕೆರೆಗೆ ನೀರು ತುಂಬಲು ಸಾಧ್ಯವಾಗಿಲ್ಲ.

ಪಾಮನಕಲ್ಲೂರು ಪಂಚಾಯ್ತಿ ವ್ಯಾಪ್ತಿ ಗುಡಿಹಾಳ ಗ್ರಾಮದಲ್ಲಿ ನೀರಿ ಸಮಸ್ಯೆ ತೀವ್ರವಾಗಿದೆ. ಗ್ರಾಮದಲ್ಲಿ ಕೊಳವೆಬಾವಿ ಇಲ್ಲದ ಕಾರಣ ಕುಡಿಯಲು ಇರಕಲ್ ಕೆರೆ ನೀರು ಹಾಗೂ ಬಳಕೆಗೆ ಗುಡಿಹಾಳ ಹಳೇ ಕೆರೆ ನೀರು ಬಿಡಲಾಗುತ್ತಿದೆ ಈಗ ಇರಕಲ್ ಕೆರೆಯಲ್ಲಿ ನೀರಿನಲ್ಲದ ಕಾರಣ ನೀರಿನ ಸಮಸ್ಯೆ ಶುರುವಾಗಿದೆ.

ಸಮೀಪದ ಅಮೀನಗಡ ಗ್ರಾಮದಲ್ಲೂ ನೀರಿನ ಸಮಸ್ಯೆ ಎದುರಾಗಿದ್ದು ಕೆಲವು ಓಣಿಗಳಲ್ಲಿ ನೀರು ಬರುತ್ತಿಲ್ಲ. ಹೀಗಾಗಿ ರಸ್ತೆ ಬದಿ ನೀರಿನ ಗುಮ್ಮಿ ಹತ್ತಿರ ಪರದಾಡುವಂತಾಗಿದೆ ಎಂದು ಸುರೇಶ, ಈರಮ್ಮ, ಲಚ್ಮಪ್ಪ ಹುಡೆದ್. ಆದಪ್ಪ ನಾಯಕ್. ರೆಡ್ಡಿ ಗೊರ್ಲಟ್ಟಿ ಆರೋಪಿಸುತ್ತಿದ್ದಾರೆ.

ಕಳೆದ ಒಂದು ವಾರದ ಹಿಂದೆ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಆಗ ಕೆರೆಯಲ್ಲಿ ನೀರು ಸಂಗ್ರಹವಿತ್ತು. ಈ ಬಗ್ಗೆ ಸಂಬಂಧಪಟ್ಟ ಪಿಡಿಒ ಗಳಿಂದ ಮಾಹಿತಿ ಪಡೆದು ಗಮನ ಹರಿಸಲಾಗುವುದು ಎಂದು ಮಸ್ಕಿ ತಾಪಂ ಇಒ ಅಮರೇಶ ತಿಳಿಸಿದ್ದಾರೆ.