ಸಾರಾಂಶ
ಕಳೆದ 5 ವರ್ಷಗಳಲ್ಲಿ 13.5ಕೋಟಿ ಜನರನ್ನು ಬಡತನದಿಂದ ಮೇಲೆತ್ತುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ.
ಕನ್ನಡಪ್ರಭ ವಾರ್ತೆ ಸವದತ್ತಿ
ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರತಿ ಯೋಜನೆಗಳು ಜನರ ಮನೆಬಾಗಿಲಿಗೆ ತಲುಪುವಂತೆ ಮಾಡಲಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ತಾಲೂಕಿನ ಶಿರಸಂಗಿ ಗ್ರಾಮದ ಕಲ್ಮೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಕಳೆದ 5 ವರ್ಷಗಳಲ್ಲಿ 13.5ಕೋಟಿ ಜನರನ್ನು ಬಡತನದಿಂದ ಮೇಲೆತ್ತುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ. ಸರ್ಕಾರ ನೀಡುವ ಕಲ್ಯಾಣ ಯೋಜನೆಗಳು ಹಾಗೂ ಅವುಗಳು ಸವಲತ್ತುಗಳು ಮತ್ತು ಅವುಗಳಿಗೆ ಯಾರು ಅರ್ಹರು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಒದಗಿಸಲು ವಿಕಸಿತ ಭಾರತ ಸಂಕಲ್ಪ ಯಾತ್ರೆ ಯೋಜನೆಯನ್ನು ರೂಪಿಸಲಾಗಿದೆ ಎಂದರು. ಫಲಾನುಭವಿಗಳಿಗೆ ಉಜ್ವಲ ಯೋಜನೆಯಡಿ ಉಚಿತ ಎಲ್‌ಪಿಜಿ ಸಂಪರ್ಕ, ಗ್ಯಾಸ್ ಸ್ಟೋವ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಡ್ರೋನ್ ಪ್ರಾತ್ಯಕ್ಷಿತೆ ನಡೆಸಿ ಇದರ ಬಳಕೆಯಿಂದ ಕೃಷಿ ಬೆಳೆಗಳಿಗೆ ಔಷಧ ಸಿಂಪರಣೆ ಕುರಿತು ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರು. ಶಿವಾಜಿರಾವ್ ಶಿಂಧೆ, ಮಹಾಂತೇಶ ಪಂಚೆನ್ನವರ, ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಕಪಲನ್ನವರ, ಫಕಿರಪ್ಪಾ ಓಬಳಾಪೂರ, ಬಸವರಾಜ ಸೊಮಗೊಂಡ, ಪ್ರವೀಣ ಯಡಹಳ್ಳಿ, ಮನೋಹರ ಚಿಂತಾಮಣಿ, ವಿಶಾಲ ಶ್ರೀವಾಸ್ತವ, ಡಾ.ವಿಜಯಲಕ್ಷ್ಮೀ ಕೊಳಿ, ಎಲ್‌ಪಿಜಿ ಗ್ಯಾಸ ವಿತರಕ ಸುನೀತಾ ದ್ಯಾಮನಗೌಡರ, ನ್ಯಾಯವಾದಿ ಮಲ್ಲನಗೌಡ ದ್ಯಾಮನಗೌಡರ ಹಾಗೂ ಗ್ರಾಮದ ಪ್ರಮುಖರು, ರೈತ ಮಹಿಳೆಯರು ಇದ್ದರು.