ಸಾರಾಂಶ
ಕಲಾದಗಿ ಆನದಿನ್ನಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಶಾಸಕ ಜೆ.ಟಿ.ಪಾಟೀಲ ಭೂಮಿಪೂಜೆ ನೆರವೇರಿಸಿದರು.
ಕಲಾದಗಿ: ಬಾಗಲಕೋಟೆ ತಾಲೂಕಿನ ಆನದಿನ್ನಿ ಏತ ನೀರಾವರಿ ಯೋಜನೆ 2ನೇ ಹಂತದ ಕಾಮಗಾರಿಯನ್ನು ಗುತ್ತಿಗೆದಾರರು ಜೂನ್ ತಿಂಗಳೊಳಗಾಗಿ ಪೂರ್ಣಗೊಳಿಸಬೇಕು ಎಂದು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಶಾಸಕ ಜೆ.ಟಿ.ಪಾಟೀಲ ಹೇಳಿದರು.
22.56 ಕೋಟಿ ರು. ಕಾಮಗಾರಿ ಆನದಿನ್ನಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿ ಅನುದಾನ ನೀಡದೆ ನೆನೆಗುದಿಗೆ ಬಿದ್ದಿದ್ದ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ರೈತರ ಕಾಳಜಿ ಹೊಂದಿ, ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ₹28 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ. ಯೋಜನೆ ವಿಸ್ತರಣೆ ಮಾಡಿ ಯಡಹಳ್ಳಿ, ಆನದಿನ್ನಿ, ಬನ್ನಿದಿನ್ನಿ, ಗದ್ದನಕೇರಿ, ಕೆಸನೂರು ರೈತರ ಜಮೀನುಗಳಿಗೆ ನಿರಾವರಿ ಒದಗಿಸುವ ಯೋಜನೆಯಾಗಿದೆ. ಒಟ್ಟು 840 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ ಜೊತೆಗೆ ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದರು.ಯಡಹಳ್ಳಿ ಗ್ರಾಪಂ ಅಧ್ಯಕ್ಷೆ ಮಾಲಾ ನಲವತವಾಡ, ಜಿಪಂ ಮಾಜಿ ಅಧ್ಯಕ್ಷ ರಂಗಪ್ಪ ತುಂಬರಮಟ್ಟಿ, ಮಲ್ಲಪ್ಪ ದೊರೆಗೊಳ, ಗ್ರಾಪಂ ಮಾಜಿ ಸದಸ್ಯ ಅಡಿಯಪ್ಪ ಬಾಲಪ್ಪ ಸಾವಡಗಿ ಪ್ರಭುನಾಯಕ್ ತಿಮ್ಮನಾಯ್ಕರ್, ಪರಸಪ್ಪ ವಾಲಿಕಾರ, ಸಿದ್ದಣ್ಣ ಛಬ್ಬಿ, ರಾಯಪ್ಪ ಗೌರಿ, ಕರಿಯಪ್ಪ ಕಾರಜೋಳ, ದುರ್ಗಪ್ಪ ಗಾಡದ, ಗ್ರಾಪಂ ಮಾಜಿ ಸದಸ್ಯ ಭರಮಪ್ಪ ಕೋಟಿ ಇನ್ನಿತರರು ಇದ್ದರು.