ಸಾರಾಂಶ
ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ, ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿ ನೇತೃತ್ವದಲ್ಲಿ, ಕ್ಷೇತ್ರದ ಪ್ರಧಾನ ಅರ್ಚಕ ಐ. ರಾಘವೇಂದ್ರ ಭಟ್ ಉಪಸ್ಥಿತಿಯಲ್ಲಿ ಶುಕ್ರವಾರ ಪೂರ್ವಾಹ್ನ 12.05ಕ್ಕೆ ಧ್ವಜಾರೋಹಣ ನೆರವೇರಿತು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ, ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿ ನೇತೃತ್ವದಲ್ಲಿ, ಕ್ಷೇತ್ರದ ಪ್ರಧಾನ ಅರ್ಚಕ ಐ. ರಾಘವೇಂದ್ರ ಭಟ್ ಉಪಸ್ಥಿತಿಯಲ್ಲಿ ಶುಕ್ರವಾರ ಪೂರ್ವಾಹ್ನ 12.05ಕ್ಕೆ ಧ್ವಜಾರೋಹಣ ನೆರವೇರಿತು.ಮಧ್ಯಾಹ್ನ ಅನ್ನ ಸಂತರ್ಪಣೆ, ಉತ್ಸವ ಬಲಿ, ಕಂಚಿಲಾಲೆ. ರಾತ್ರಿ 9.30 ರಿಂದ ಇರುವೈಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ ಜರಗಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಸುಜಾತ ಜೆ. ಶೆಟ್ಟಿ, ಸದಸ್ಯರಾದ ಶಿವಾನಂದ ನಾಯ್ಕ್, ಪ್ರದೀಪ್ ಶೆಟ್ಟಿ, ಪೂವಪ್ಪ ಸಾಲ್ಯಾನ್, ಶುಭಕರ ಕಾಜವ, ಪದ್ಮನಾಭ ಪೂಜಾರಿ, ಮೋಹನ್ ನಾಯಕ್ ಪಂಜ, ದೀಪಾ , ಗುತ್ತು ಬಾಳಿಕೆ ಮನೆತನಗಳ ಪ್ರಮುಖರು, ಗಣ್ಯರು, ಸ್ಥಳೀಯ ಸಂಘ-ಸಂಸ್ಥೆಗಳ ಪ್ರಮುಖರು ಮತ್ತು ಭಕ್ತಾದಿಗಳು ಹಾಗೂ ದೇವಸ್ಥಾನದ ಸಿಬ್ಬಂದಿ ಭಾಗವಹಿಸಿದ್ದರು.ಶನಿವಾರ ಬೆಳಗ್ಗೆ 8 ಗಂಟೆಯಿಂದ ನವಕಕಲಶಾಭಿಷೇಕ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ, ಸಂಜೆ 6.30ರಿಂದ ಉತ್ಸವ ಬಲಿ, ಕಟ್ಟೆ ಪೂಜೆ, ದೇವರ ಆದಿಸ್ಥಳದಲ್ಲಿ ಕಟ್ಟೆ ಪೂಜೆ,ಕೆರೆ ದೀಪೋತ್ಸವ ರಾತ್ರಿ ನಮ್ಮ ಜವನೆರ್ ಇರುವೈಲು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ.ಭಾನುವಾರ ಬೆಳಗ್ಗೆ ಕಲಶ ಪ್ರದಾನ, ಮಹಾಪೂಜೆ, ಅನ್ನ ಸಂತರ್ಪಣೆ, ರಾತ್ರಿ 8 ಗಂಟೆಗೆ ಧಾರ್ಮಿಕ ಸಭೆ, 8.30ಕ್ಕೆ ಭೇರಿ ತಾಡನೆ, ನಡುಬಲಿ ಉತ್ಸವ, ಚಂದ್ರಮಂಡಲ ಸೇವೆ, ಬಾಕಿಮಾರು ದೀಪೋತ್ಸವ, ಕಟ್ಟೆ ಪೂಜೆ ನಡೆಯಲಿದೆ.