ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಾಜಿ ಶಾಸಕ ಅನ್ನದಾನಿ ದಲಿತರನ್ನು ಕಟ್ಟಿ ಆಳುತ್ತಿದ್ದಾರಾ, ಹೋರಾಟಗಾರರನ್ನು ಪ್ರಶ್ನೆ ಮಾಡಲು ನೈತಿಕ ಹಕ್ಕಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಗುರುಪ್ರಸಾದ್ ಕೆರಗೋಡು ತಿಳಿಸಿದರು.ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶೋಷಿತರು, ದಲಿತರ ವಿರುದ್ಧ ನಡೆದುಕೊಳ್ಳುತ್ತಿದ್ದ ಕಾಂಗ್ರೆಸ್ ಪಕ್ಷದ ವಿರುದ್ಧವೂ ನಾವು ಮೊದಲು ಚಳವಳಿ ಆರಂಭಿಸಿದ್ದೆವು. ಆದರೆ, ಇತ್ತೀಚಿನ ರಾಜಕೀಯವನ್ನು ನೋಡಿದರೆ ಏಕಚಕ್ರಾಧಿಪತ್ಯದ ರೀತಿಯಲ್ಲಿ ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಎಲ್ಲ ದಲಿತರು ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ. ನಾವು ಸಾಕಷ್ಟು ಸಂಘನೆಗಳು ಈ ವಿಚಾರದಲ್ಲಿ ಒಗ್ಗಟ್ಟಾಗಿದ್ದೇವೆ. ಕೆಲವರು ಮಾತ್ರ ವಿರೋಧ ವ್ಯಕ್ತಪಡಿಸಿರಬಹುದು. ಆದರೆ, ಬಹುತೇಕರೆಲ್ಲರೂ ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮೇಲ್ವರ್ಗದ ಶೇ.೩ರಷ್ಟು ಮೀಸಲಾತಿ ಕಲ್ಪಿಸಿಕೊಂಡು ಶೇ.೧೦ರಷ್ಟು ಮೀಸಲಾತಿ ಗಿಟ್ಟಿಸಿಕೊಟ್ಟು ಅಸ್ಪಶ್ಯ ಉಪ ಜಾತಿಗಳಿಗೆ ಖಾಲಿ ಭರವಸೆಯನ್ನು ಮಾತ್ರ ಕೊಟ್ಟ ಬಿಜೆಪಿ ಹಿಂದೂ ಆರ್‌ಎಸ್‌ಎಸ್ ಇದೆ. ಇಷ್ಟು ಮಾತ್ರವಲ್ಲ. ಕಳೆದ ೧೦ ವರ್ಷಗಳಲ್ಲಿ ಸರ್ಕಾರಿ ಕ್ಷೇತ್ರಗಳನ್ನು ಒಳಗೊಂಡಂತೆ ಎಲ್ಲ ಕಡೆ ಗುತ್ತಿಗೆ ಪದ್ಧತಿ ಜಾರಿಗೊಳಿಸುವ ಮೂಲಕ ಹಾಗೂ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ಮೀಸಲಾತಿ ಕತ್ತು ಹಿಸುಕಲಾಗಿದೆ. ಈಗ ಅವರ ಕಣ್ಣು ರಾಜಕೀಯ ಮೀಸಲಾತಿಯ ಮೇಲಿದ್ದು, ಎಲ್ಲ ರೀತಿಯ ಮೀಸಲಾತಿಯನ್ನು ರದ್ದುಗೊಳಿಸುವುದು ಅವರ ರಾಜಕೀಯ ಅಜೆಂಡಾವಾಗಿದೆ ಇದನ್ನು ತಿರಸ್ಕರಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಮುಖಂಡರಾದ ಇಂಧೂದರ ಹೊನ್ನಾಪುರ, ನಾಗರಾಜ್, ವೆಂಕಟೇಶ್, ಸೋಮಶೇಖರ್, ಮಾವಳ್ಳಿ ಶಂಕರ್ ಇತರರಿದ್ದರು.