ಸಾರಾಂಶ
ನಿತ್ಯವೂ ನಡೆಸುವ ಇಷ್ಟಲಿಂಗ ಪೂಜೆ ಮತ್ತು ಅನುಸಂಧಾನದ ಮೂಲಕ ಸಾಕ್ಷಾತ್ಕಾರದ ಬೆಳಕನ್ನು ಕಾಣಲು ಸಾಧ್ಯ
ಧಾರವಾಡ: ದೀಕ್ಷೆ ನೀಡಿದ ಗುರು ಕರುಣಿಸಿದ ಇಷ್ಟಲಿಂಗವು ಅನಿಷ್ಟ ಪರಿಹಾರಕ. ಸದಾಕಾಲವೂ ಅದನ್ನು ದೇಹದ ಮೇಲೆಯೇ ಧಾರಣೆ ಮಾಡಿರಬೇಕೆಂದು ಕಲಬುರ್ಗಿ ಜಿಲ್ಲೆ ಬೆಳಗುಂಪಾ ಬೃಹನ್ಮಠದ ಪರ್ವತೇಶ್ವರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಗುರುಶಾಂತಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ದೀಕ್ಷಾದಲ್ಲಿ 33 ಜಂಗಮ ವಟುಗಳಿಗೆ ಇಷ್ಟಲಿಂಗ ಕರುಣಿಸಿ ಮಂತ್ರೋಪದೇಶ ಮಾಡಿದ ಅವರು, ನಿತ್ಯವೂ ನಡೆಸುವ ಇಷ್ಟಲಿಂಗ ಪೂಜೆ ಮತ್ತು ಅನುಸಂಧಾನದ ಮೂಲಕ ಸಾಕ್ಷಾತ್ಕಾರದ ಬೆಳಕನ್ನು ಕಾಣಲು ಸಾಧ್ಯ ಎಂದರು.ಶ್ರೀಮಠದ ಹಿರಿಯ ಹಾಗೂ ಕಿರಿಯ ಸ್ವಾಮೀಜಿ ಹಾಗೂ ಬೆಳಗಾವಿ ಜಿಲ್ಲೆ ಸತ್ತಿಗೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯರು ದೀಕ್ಷೆ ಪಡೆದ ವಟುಗಳನ್ನು ಆಶೀರ್ವದಿಸಿದರು. ಗುರುಮೂರ್ತಿ ಯರಗಂಬಳಿಮಠ, ಸೋಮಲಿಂಗಶಾಸ್ತ್ರಿ ಗುಡ್ಡದಮಠ, ರಾಣಿಬೆನ್ನೂರಿನ ಕುಮಾರಶಾಸ್ತ್ರಿ ಹಿರೇಮಠ, ಪ್ರಶಾಂತ ರಾಜಗುರು ಇದ್ದರು.