ದೇವಿಯ ಉಪಾಸನೆಯಿಂದ ಇಷ್ಟಾರ್ಥ ಸಿದ್ಧಿ: ಭಾಂಡಗೆ

| Published : Oct 07 2024, 01:42 AM IST

ಸಾರಾಂಶ

ಹಿಂದೂ ಧರ್ಮದ ಆಚರಣೆಯಲ್ಲಿ ದೇವಿಯ ಆರಾಧನೆಗೆ ವಿಶೇಷ ಮಹತ್ವ

ಲಕ್ಷ್ಮೇಶ್ವರ: ದಸರಾ ಹಬ್ಬದಲ್ಲಿ ದೇವಿಯ ಆರಾಧನೆ ಮಾಡುವ ಮೂಲಕ ನಮ್ಮ ಪರಂಪರೆ ಸಂಸ್ಕೃತಿ ಆಚರಣೆ ಉಳಿಸುವ ಕಾರ್ಯ ಅಗತ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ಪಟ್ಟಣದ ಅಂಬಾಭವಾನಿ ದೇವಾಲಯದಲ್ಲಿ ನಡೆದ ದಸರಾ ಹಬ್ಬದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹಿಂದೂ ಧರ್ಮದ ಆಚರಣೆಯಲ್ಲಿ ದೇವಿಯ ಆರಾಧನೆಗೆ ವಿಶೇಷ ಮಹತ್ವವಿದೆ. ದೇವಿಯ ನವಶಕ್ತಿ ಅವತಾರಗಳು ನಮ್ಮಲ್ಲಿನ ಆದಿ ಅನಂತ ಬಿಂಬಿಸುತ್ತದೆ. ದೇವಿಯ ಆರಾಧನೆಯಿಂದ ಜೀವನದಲ್ಲಿ ಸಮೃದ್ಧಿ ಹಾಗೂ ಶಾಂತಿ ಪಡೆಯಬಹುದು. ನಮ್ಮ ಮಕ್ಕಳಿಗೆ ಹಿರಿಯರಿಗೆ ಗೌರವ ಕೊಡುವುದು, ಪರಂಪರೆಯ ಮಹತ್ವ ತಿಳಿಸಿ ಅವರಲ್ಲಿ ಮಾನವೀಯ ಮೌಲ್ಯ ಬೆಳೆಸಬೇಕು ಎಂದರು.

ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಪಟ್ಟಣದ ಎಸ್ಎಸ್ ಕೆ ಸಮಾಜ ಬಾಂಧವರು ದೈವಿಕ ಆರಾಧನೆಯನ್ನು ಪ್ರತಿವರ್ಷ ಅದ್ಧೂರಿಯಾಗಿ ಆಚರಿಸುತ್ತಾರೆ. ದುರ್ಗಾ ದೇವಿಯ ಆರಾಧನೆಯಿಂದ ಜೀವನದಲ್ಲಿ ಶಾಂತಿ ನೆಮ್ಮದಿ ಸಿಗುತ್ತದೆ ಎಂದರು.

ಈ ವೇಳೆ ಕರ್ನಾಟಕ ಪ್ರಾಂತೀಯ ಎಸ್ ಎಸ್ ಕೆ ಸಮಾಜದ ಅಧ್ಯಕ್ಷ ಡಾ. ಶಶಿಕುಮಾರ ಮೆಹರವಾಡೆ, ಲಕ್ಷ್ಮೇಶ್ವರ ತಾಲೂಕಿನ ಅಧ್ಯಕ್ಷ ಪರಶುರಾಮ ಬೀದಿ, ನಾರಾಯಣಸಾ ಪವಾರ್, ಲಕ್ಷ್ಮಣಸಾ ರಾಜೋಳಿ, ತುಕಾರಾಮ ಬದ್ದಿ, ವಿಠ್ಠಲಸಾ ಶಿದ್ಲಿಂಗ್, ಯಲ್ಲೂಸಾ ಬದ್ದಿ, ಛಾಯಾಸಾ ಬದ್ದಿ, ತಿಪ್ಪಣ್ಣಸಾ ಬಾಕಳೆ, ಗಣಪತಸಾ ಪೂಜಾರಿ, ಭಾರತ್ ಬಾಕಳೆ, ಮಂಜುನಾಥ ಬದಿ, ಶ್ರೀಕಾಂತ ಬದಿ, ಶ್ರೀನಿವಾಸ ಭಾಂಡಗೆ, ಸುರೇಶ ಮಿಸ್ಕಿನ್, ಹನಮಂತಸಾ ಚೌದರಿ, ರಂಗನಾಥಸಾ ಬೀದಿ, ಶಾಂತಾಬಾಯಿ ಪವಾರ, ಇಂದುಬಾಯಿ ಬದಿ, ಸರೋಜಾ ಬೀದಿ, ಅಕ್ಕಮ ಬದಿ, ಲೀನಾ ಬಾಕಳೆ ಇದ್ದರು.