ರೈತರ ಇಸ್ರೇಲ್ ಅಧ್ಯಯನ ಪ್ರವಾಸ ರದ್ದು
KannadaprabhaNewsNetwork | Published : Oct 11 2023, 12:45 AM IST
ರೈತರ ಇಸ್ರೇಲ್ ಅಧ್ಯಯನ ಪ್ರವಾಸ ರದ್ದು
ಸಾರಾಂಶ
ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ ಹಿನ್ನೆಲೆಯಲ್ಲಿ 29ರಂದು ರಾಜ್ಯದ 30 ಜನರ ರೈತರ ತಂಡ 7 ದಿವಸಗಳ ಕಾಲ ಕೈಗೊಂಡಿದ್ದ ಇಸ್ರೇಲ್ ಅಧ್ಯಯನ ಪ್ರವಾಸ ರದ್ದುಪಡಿಸಲಾಗಿದೆ.
ಕನ್ನಡಪ್ರಭ ವಾರ್ತೆ, ತುಮಕೂರು ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ ಹಿನ್ನೆಲೆಯಲ್ಲಿ 29ರಂದು ರಾಜ್ಯದ 30 ಜನರ ರೈತರ ತಂಡ 7 ದಿವಸಗಳ ಕಾಲ ಕೈಗೊಂಡಿದ್ದ ಇಸ್ರೇಲ್ ಅಧ್ಯಯನ ಪ್ರವಾಸ ರದ್ದುಪಡಿಸಲಾಗಿದೆ. ತುಮಕೂರಿನ ಪ್ರಗತಿಪರ ರೈತ ಅಶೋಕ ನೇತೃತ್ವದಲ್ಲಿ 30 ಮಂದಿ ರೈತರ ತಂಡ ಇದೇ ತಿಂಗಳ 29ರಂದು 7 ದಿವಸಗಳ ಇಸ್ರೇಲ್ ಅಧ್ಯಯನ ಪ್ರವಾಸ ಹೊರಟಿತ್ತು. ಇಸ್ರೇಲ್ ನ ಕೃಷಿ ತಂತ್ರಜ್ಞಾನ, ಹೈನುಗಾರಿಕೆ ಅಧ್ಯಯನಕ್ಕೆ ಪ್ರವಾಸ ತೆರಳಲು ರೈತರು ಸಜ್ಜಾಗಿದ್ದರು. ಇಸ್ರೇಲ್ ಮಾದರಿ ಕೃಷಿಯನ್ನು ಕರ್ನಾಟಕ ರೈತರಿಗೆ ಪರಿಚಯಿಸಲು ಅಶೋಕ್ ಮುಂದಾಗಿದ್ದರು. ಅಲ್ಲದೇ ಇಸ್ರೇಲ್ ನಿಂದ 100 ಹಸುಗಳನ್ನು ಕರ್ನಾಟಕಕ್ಕೆ ತರಲು ಸಿದ್ಧತೆ ನಡೆಸಿದ್ದರು. ಇಸ್ರೇಲ್ ನ ಹಲವು ಭಾಗಗಳಿಗೆ ತೆರಳಬೇಕಾಗಿತ್ತು. ಆದರೆ, ಉಗ್ರರ ದಾಳಿ ಹಿನ್ನೆಲೆಯಲ್ಲಿ ಪ್ರವಾಸ ರದ್ದಾಗಿದೆ.