ಭಾರತದ ಪ್ರಗತಿಗಾಗಿ ಇಸ್ರೋ ಕೊಡುಗೆ ಅಪಾರ: ನಾಡಗೌಡ

| Published : Apr 07 2024, 01:49 AM IST

ಭಾರತದ ಪ್ರಗತಿಗಾಗಿ ಇಸ್ರೋ ಕೊಡುಗೆ ಅಪಾರ: ನಾಡಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸ್ರೋ ಯೋಜನೆ ಮತ್ತು ಅವುಗಳ ಸಾಮಾಜಿಕ ಪ್ರಯೋಜನಗಳ ಕುರಿತು ದೇಶದ ಹೆಮ್ಮೆಯ ಇಸ್ರೋದ ಸ್ಪೂರ್ತಿದಾಯಕ ಸನ್ನಿವೇಶಗಳು, ಕುತೂಹಲಕಾರಿ ಕಾರ್ಯ ವೈಖರಿ

ಗದಗ:ಭಾರತದ ಪ್ರಗತಿಗಾಗಿ ಇಸ್ರೋ ಕೊಡುಗೆ ಅಪಾರ ಎಂದು ಸಂಪನ್ಮೂಲ ವ್ಯಕ್ತಿ, ವಿಜ್ಞಾನಿ ಆರ್.ವಿ. ನಾಡಗೌಡ ಹೇಳಿದರು.

ನಗರದ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದ ಸಭಾಂಗಣದಲ್ಲಿ ಎಂಎಸ್ಸಿ ಜಿಯೋಇನ್ಫರ್ಮ್ಯಾಟಿಕ್ಸ್, ಎಂಎಸ್ಸಿ ಕಂಪ್ಯೂಟರ್ ಸೈನ್ಸ್, ಬಿಎಸ್ಸಿ, ಜಿಐಎಸ್, ಸಿ.ಎಸ್ವಿ ಭಾಗಗಳ ವತಿಯಿಂದ ಸಾಮಾಜಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಪ್ರಗತಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಪಾತ್ರ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಸ್ರೋ ಯೋಜನೆ ಮತ್ತು ಅವುಗಳ ಸಾಮಾಜಿಕ ಪ್ರಯೋಜನಗಳ ಕುರಿತು ದೇಶದ ಹೆಮ್ಮೆಯ ಇಸ್ರೋದ ಸ್ಪೂರ್ತಿದಾಯಕ ಸನ್ನಿವೇಶಗಳು, ಕುತೂಹಲಕಾರಿ ಕಾರ್ಯ ವೈಖರಿಯನ್ನು ತಿಳಿಸುತ್ತಾ, ಇಸ್ರೋ ಮಿಷನ್‌ಗಳು ಮತ್ತು ಸಾಮಾಜಿಕ ಪ್ರಯೋಜನಗಳು, ಇಸ್ರೋದ ವಿಕಾಸ, ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಅದರ ಪ್ರಮುಖ ಪಾತ್ರ ಮತ್ತು ರಾಷ್ಟ್ರೀಯ ಅಭಿವೃದ್ಧಿ ಹಾಗೂ ಜನರ ಜೀವನಮಟ್ಟದ ಅಭಿವೃದ್ಧಿಗಾಗಿ ಭಾರತೀಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್‌ಗಳ ಬಳಕೆ ಕುರಿತು ಸಮಗ್ರವಾದ ವಿವರಣೆ ನೀಡಿದರು.

ಕುಲಸಚಿವ ಪ್ರೊ. ಡಾ. ಸುರೇಶ.ವಿ. ನಾಡಗೌಡರ ಮಾತನಾಡಿದರು. ಉಪ ಕುಲಪತಿ ಪ್ರೊ. ವಿಷ್ಣುಕಾಂತ್. ಎಸ್. ಚಟಪಲ್ಲಿ ಸೇರಿದಂತೆ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ಇದ್ದರು.