ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ಪ್ರೊ. ಯು. ಆರ್. ರಾವ್ ಉಪಗ್ರಹ ಕೇಂದ್ರ ಸಹಯೋಗದಲ್ಲಿ, ಯಾದಗಿರಿಯ ಸಹ್ಯಾದ್ರಿ ಪಿಯು ಕಾಲೇಜಿನಲ್ಲಿ ಅ.5ರಂದು ಒಂದು ದಿನದ ವಿಜ್ಞಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಾಹ್ಯಾಕಾಶ ವಸ್ತುಪ್ರದರ್ಶನವಿದ್ದು, ಬೆಳಗ್ಗೆ 10:00 ರಿಂದ ಸಂಜೆ 4:30 ರವರೆಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಪ್ರದರ್ಶನದಲ್ಲಿ ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ಉಡಾವಣಾ ವಾಹನಗಳ ನೈಜ ಮಾದರಿಗಳು, ಇಸ್ರೋ ಉಡಾವಣೆ ಮಾಡಿದ
ಕನ್ನಡಪ್ರಭ ವಾರ್ತೆ ಯಾದಗಿರಿ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ಪ್ರೊ. ಯು. ಆರ್. ರಾವ್ ಉಪಗ್ರಹ ಕೇಂದ್ರ ಸಹಯೋಗದಲ್ಲಿ, ಯಾದಗಿರಿಯ ಸಹ್ಯಾದ್ರಿ ಪಿಯು ಕಾಲೇಜಿನಲ್ಲಿ ಅ.5ರಂದು ಒಂದು ದಿನದ ವಿಜ್ಞಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಾಹ್ಯಾಕಾಶ ವಸ್ತುಪ್ರದರ್ಶನವಿದ್ದು, ಬೆಳಗ್ಗೆ 10:00 ರಿಂದ ಸಂಜೆ 4:30 ರವರೆಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಪ್ರದರ್ಶನದಲ್ಲಿ ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ಉಡಾವಣಾ ವಾಹನಗಳ ನೈಜ ಮಾದರಿಗಳು, ಇಸ್ರೋ ಉಡಾವಣೆ ಮಾಡಿದ ವಿವಿಧ ಉಪಗ್ರಹಗಳ ಮಾದರಿಗಳು, ಚಂದ್ರಯಾನ, ಮಂಗಳಯಾನ, ಆದಿತ್ಯ-ಎಲ್1 ಮಿಷನ್‌ಗಳ ಪೋಸ್ಟರ್ ಮತ್ತು ವೀಡಿಯೋ ಪ್ರದರ್ಶನ ಹಾಗೂ ವಿಜ್ಞಾನಿಗಳಿಂದ ನೇರ ಸಂವಾದ ಏರ್ಪಡಿಲಾಗಿದೆ.ಮೂರು ವಿಧದ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಸ್ಮರಣ ಶಕ್ತಿ ಪರೀಕ್ಷಿಸುವ ಸ್ಪರ್ಧೆ, ಬಾಹ್ಯಾಕಾಶ, ಇಸ್ರೋ ಮತ್ತು ಸಾಮಾನ್ಯ ವಿಜ್ಞಾನದ ಬಗ್ಗೆ ಬಹು ಆಯ್ಕೆ ಪ್ರಶ್ನೆಗಳುಳ್ಳ ರಸಪ್ರಶ್ನೆ ಸ್ಪರ್ಧೆಗಳು, ಪಿಕ್ ಆ್ಯಂಡ್ ಸ್ಪೀಕ್, ವಿದ್ಯಾರ್ಥಿಯು ಒಂದು ಚೀಟಿಯನ್ನು ಆರಿಸಿಕೊಳ್ಳಬೇಕು. ಅದರಲ್ಲಿ ಬರೆದಿರುವ ಬಾಹ್ಯಾಕಾಶಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಕನಿಷ್ಠ 2 ನಿಮಿಷ ಮಾತನಾಡಬೇಕು. ಇದು ವಿದ್ಯಾರ್ಥಿಗಳ ಭಾಷಣ ಕಲೆ ಮತ್ತು ವಿಷಯದ ಜ್ಞಾನ ಪರೀಕ್ಷಿಸುವ ಸ್ಪರ್ಧೆಯಾಗಿದೆ.
*ರಾಕೆಟ್ ಕ್ರಾಂತಿ " ಥೀಮ್ ಹೆಸರಲ್ಲಿ ಸಪ್ತಾಹ: ಜಗತ್ತಿನ ಮೊದಲ ಮಾನವ ನಿರ್ಮಿತ ಉಪಗ್ರಹ ''''''''ಸ್ಪುಟ್ನಿಕ್-1'''''''' ಅನ್ನು ರಷ್ಯಾ ಉಡಾವಣೆ ಮಾಡಿದ ದಿನ ಸ್ಮರಣೆ ಹಾಗೂ ಬಾಹ್ಯಾಕಾಶವನ್ನು ಶಾಂತಿಯುತ ಕಾರ್ಯಗಳಿಗೆ ಮಾತ್ರ ಬಳಸಬೇಕು ಎಂಬ ಐತಿಹಾಸಿಕ ಒಪ್ಪಂದಕ್ಕೆ ವಿಶ್ವಸಂಸ್ಥೆ ಸಹಿ ಹಾಕಿದ ದಿನದ ಹಿನ್ನೆಲೆಯಲ್ಲಿ, ಪ್ರತಿ ವರ್ಷ ಅ. 4 ರಿಂದ 10 ರವರೆಗೆ, ಬಾಹ್ಯಾಕಾಶದ ಸಾಧನೆಗಳನ್ನು ಸ್ಮರಿಸಲು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಬಾಹ್ಯಾಕಾಶ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ಪ್ರೊ. ಯು. ಆರ್. ರಾವ್ ಉಪಗ್ರಹ ಕೇಂದ್ರ (ISRO-URSC) ವತಿಯಿಂದ ವಿಶ್ವ ಬಾಹ್ಯಾಕಾಶ ಸಪ್ತಾಹವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ರಾಕೆಟ್ ತಂತ್ರಜ್ಞಾನದಲ್ಲಿ ಆಗುತ್ತಿರುವ ಹೊಸ ಕ್ರಾಂತಿ, ಮರುಬಳಕೆ ಮಾಡಬಹುದಾದ ರಾಕೆಟ್‌ಗಳು, ಭವಿಷ್ಯದ ಅಂತರಗ್ರಹಯಾನದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವುದು ಈ ವರ್ಷದ "ರಾಕೆಟ್ ಕ್ರಾಂತಿ " ಥೀಮ್ ಹೆಸರನ ಸಪ್ತಾಹದ ಉದ್ದೇಶ.*ಇಸ್ರೋ ಇಂಜಿನೀಯರ್ ಡಾ.ವೆಂಕಟೇಶ ಉಪಸ್ಥಿತಿ: ಬೆಂಗಳೂರಿನ ಯು. ಆರ್. ರಾವ್ ಉಪಗ್ರಹ ಕೇಂದ್ರದಲ್ಲಿ ಹಿರಿಯ ಇಂಜಿನೀಯರ್ ಹಾಗೂ ಸಾಫ್ಟ್‌ವೇರ್ ಟೆಸ್ಟಿಂಗ್ ಮತ್ತು ಐಎಸ್‌ಒ ಸಪೋರ್ಟ್ ವಿಭಾಗದ ಮುಖ್ಯಸ್ಥರಾಗಿರುವ, ಯಲಸತ್ತಿ ಗ್ರಾಮ ಮೂಲದ ಇಸ್ರೋ ಸಂಸ್ಥೆಯ ಡಾ. ವೆಂಕಟೇಶ್ ಸಹಿತ 15 ಜನ ಇಸ್ರೋ ವಿಜ್ಞಾನಿಗಳ ತಂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾಗವಹಿಸುವ ವಿದ್ಯಾರ್ಥಿಗಳು ಇಸ್ರೋ ವಿಜ್ಞಾನಿಗಳನ್ನು ನೇರವಾಗಿ ಭೇಟಿಯಾಗಿ, ರಾಕೆಟ್ ಮಾದರಿಗಳನ್ನು ಹತ್ತಿರದಿಂದ ನೋಡುವ ಅಪರೂಪದ ಅವಕಾಶ ಇದಾಗಿದೆ.
ಹೀಗಿವೆ ಸ್ಪರ್ಧಾ ನಿಯಮಗಳು: ಅ.5 ರಂದು ಬೆಳಗ್ಗೆ 8:00 - 9:30 ನೋಂದಣಿ ಮತ್ತು ಸ್ವಾಗತ, ಬೆಳಗ್ಗೆ 9:30 - 10 ವಸ್ತುಪ್ರದರ್ಶನದ ಉದ್ಘಾಟನೆ ನಡೆಯಲಿದೆ. ಬೆಳಗ್ಗೆ 10- 11ರವರೆಗೆ ಇಸ್ರೋ ವಿಜ್ಞಾನಿಗಳಿಂದ ವಿಶೇಷ ಉಪನ್ಯಾಸ, 11- ಮಧ್ಯಾಹ್ನ 12:30 ರವರೆಗೆಎಲ್ಲ ಸ್ಪರ್ಧೆಗಳ ಪ್ರಾಥಮಿಕ ಸುತ್ತು ನಡೆಯಲಿದೆ. ಭೋಜನ ವಿರಾಮದ ಬಳಿಕ ಮಧ್ಯಾಹ್ನ 1:30 - 3:30ರವರೆಗೆ ರಸಪ್ರಶ್ನೆ ಸ್ಪರ್ಧೆಯ ಅಂತಿಮ ಮೌಖಿಕ ಸುತ್ತು. ಸಂಜೆ 3:30 - 4:30ರೊಳಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಎಲ್ಲ ಸ್ಪರ್ಧೆಗಳನ್ನು ನೇರವಾಗಿ ಇಸ್ರೋ ಮತ್ತು ಯುಎಸ್ಆರ್‌ಓ ತಂಡವೇ ನಡೆಸುತ್ತದೆ. 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಒಂದು ಶಾಲೆಯಿಂದ 5 ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು, ಎಲ್ಲ ವಿದ್ಯಾರ್ಥಿಗಳು ಬೆಳಗ್ಗೆ 8ಕ್ಕೆ ಕ್ಯಾಂಪಸ್‌ನ ನೋಂದಣಿ ಡೆಸ್ಕ್‌ನಲ್ಲಿ ಹಾಜರಿರಬೇಕು, ಎಲ್ಲ ಸ್ಪರ್ಧಾಳುಗಳಿಗೆ ಇಸ್ರೋ ಮತ್ತು ಯುಎಸ್ಆರ್‌ಓ ವತಿಯಿಂದ ಪ್ರಮಾಣಪತ್ರ ನೀಡಲಾಗುವುದು ಮತ್ತು ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು.