ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಸದಸ್ಯರು ಹಾಗೂ ಕಾರ್ಮಿಕರಿಗೆ ಜನತಾ ವ್ಯಕ್ತಿಗತ ಅಪಘಾತ ವಿಮೆ ಯೋಜನೆಯಡಿ 4 ಜನ ವಾರಸುದಾರರಿಗೆ ಮಂಜೂರಾದ ₹22 ಲಕ್ಷಗಳ ಅಫಘಾತ ವಿಮೆ ಚೆಕ್‌ನ್ನು ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ನೇತೃತ್ವದಲ್ಲಿ ಆಡಳಿತ ಮಂಡಳಿ ಸದಸ್ಯರು ವಿತರಿಸಿದರು.ಚಿಕ್ಕೋಡಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯು ಸದಸ್ಯರು ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಮಾಡಿದ ಜನತಾ ವ್ಯಕ್ತಿಗತ ಅಪಘಾತ ವಿಮೆ ಯೋಜನೆಯಡಿ ಸನ್ 2022-23ರ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ ಸದಸ್ಯರಿಗೆ ವ್ಯಕ್ತಿಗತ ಅಪಘಾತ ವಿಮೆ ಮಾಡಿಸಲಾಗಿತ್ತು. ಈ ಯೋಜನೆಯಡಿ ವಿಮೆಗೆ ಒಳಪಟ್ಟ ಸದಸ್ಯರ ಪೈಕಿ ಅಪಘಾತದಲ್ಲಿ ಮರಣಹೊಂದಿದ ಒಟ್ಟು 2 ಜನ ಸದಸ್ಯರ ವಾರಸುದಾರರಾದ ಮಹಾಂತೇಶ ಕಲ್ಲಪ್ಪ ತೋರಸೆ ವಾರಸುದಾರ ಜಯಶ್ರೀ ಮಹಾಂತೇಶ ತೋರಸೆಗೆ, ಹುಸೇನ ಕೆರೂರೆ ವಾರಸುದಾರರಾದ ಶಮಾ ಹುಸೇನ್ ಕೆರೂರೆಗೆ ತಲಾ ₹10 ಲಕ್ಷಗಳ ಚೆಕ್‌ನ್ನು ಆಡಳಿತ ಮಂಡಳಿ ಸದಸ್ಯರು ವಿತರಣೆ ಮಾಡಿದರು. ಕಾರ್ಖಾನೆಯು ಹಲವು ವರ್ಷಗಳಿಂದ ತನ್ನ ಎಲ್ಲ ಸದಸ್ಯರಿಗೆ ಮಾಡಿಸುತ್ತ ಬಂದಿರುವ ತಲಾ ₹1 ಲಕ್ಷದ ವ್ಯಕ್ತಿಗತ ಅಪಘಾತ ವಿಮೆ ಯೋಜನೆಯಡಿ 2022-23 ರ ಸಾಲಿಗಾಗಿ ಮಂಜೂರಾದ ಸದಸ್ಯರ ವಾರಸುದಾರರಿಗೆ ತಲಾ ₹1 ಲಕ್ಷದ ವಿಮೆ ಹಣ ಚೆಕ್‌ಗಳನ್ನು ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳಿ ಹೊಸದೆಹಲಿ ಹಾಗೂ ಕಾರ್ಖಾನೆಯ ನಿರ್ದೇಶಕ ಅಮಿತ್ ಕೋರೆ ವಿತರಿಸಿದರು. ಕಾರ್ಖಾನೆಯ ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ಸಂಚಾಲಕರಾದ ಅಜೀತ ದೇಸಾಯಿ, ಭರತೇಶ ಬನವಣೆ, ಸಂದೀಪ ಪಾಟೀಲ, ವ್ಯವಸ್ಥಾಪಕ ನಿರ್ದೇಶಕರಾದ ಐ.ಎನ್.ಗೊಲಭಾವಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.