ಸಾರಾಂಶ
೭೦ವರ್ಷ ದಾಟಿದ ಬಳಿಕ ಹಿರಿಯ ನಾಗರೀಕರಿಗೆ ಆರೋಗ್ಯ ಕೈಗೊಟ್ಟರೆ ಅವರ ನೆರವಿಗೆಂದೇ ಪ್ರಧಾನಿ ಮೋದಿ ರವರು ಈ ಹೊಸ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಇದು ಬಹುತೇಕ ಜನರಿಗೆ ಅವಿವಿಲ್ಲ, ಹಿರಿಯ ನಾಗರೀಕರಿಗೆ ಉಚಿತವಾಗಿ ೫ ಲಕ್ಷದ ವರೆಗೂ ಚಿಕಿತ್ಸಾ ವೆಚ್ಚ ಬರಿಸಲಾಗುವುದು.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
೭೦ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ೫ ಲಕ್ಷ ರುಯಗರೆಗೆ ಉಚಿತ ಆರೋಗ್ಯ ವಿಮೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿರುವುದು ಕೇಂದ್ರ ಸರ್ಕಾರಕ್ಕೆ ಬಡವ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ಬಿಜೆಪಿಯ ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ ಹೇಳಿದರು.ಪಟ್ಟಣದ ವಿನಾಯಕ ಸೈಬರ್ ಸೆಂಟರ್‌ನ ಮಾಲೀಕರಾದ ಚಿನ್ನಿರವರು ಪ್ರಧಾನಿ ಮೋದಿ ರವರು ಕಳೆದ ಬಜೆಟ್‌ನಲ್ಲಿ ಜಾರಿಗೊಳಿಸಿರುವ ೭೦ವರ್ಷ ದಾಟಿರುವ ಹಿರಿಯ ನಾಗರೀಕರಿಗೆ ಉಚಿತವಾಗಿ ೫ ಲಕ್ಷದ ವರೆಗೂ ಆರೋಗ್ಯ ವಿಮೆಯನ್ನು ಘೋಷಿಸಿದ್ದು ಅದರ ಪಲಾನುಭವಿಗಳಿಗೆ ಗುರುತಿನ ಚೀಟಿಗಳನ್ನು ವಿತರಿಸಿ ಮಾತನಾಡಿದರು.ಯೋಜನೆಯ ಬಗ್ಗೆ ಅರಿವಿಲ್ಲ
೭೦ವರ್ಷ ದಾಟಿದ ಬಳಿಕ ಹಿರಿಯ ನಾಗರೀಕರಿಗೆ ಆರೋಗ್ಯ ಕೈಗೊಟ್ಟರೆ ಅವರ ನೆರವಿಗೆಂದೇ ಪ್ರಧಾನಿ ಮೋದಿ ರವರು ಈ ಹೊಸ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಇದು ಬಹುತೇಕ ಜನರಿಗೆ ಅವಿವಿಲ್ಲ, ಆದರೆ ಚಿನ್ನಿರಂಥರವರು ಸಮಾಜ ಸೇವೆ ಮಾಡಲು ಯಾವುದೇ ಶುಲ್ಕ ಪಡೆಯದೆ ಉಚಿತವಾಗಿ ಹಿರಿಯ ನಾಗರಿಕರನ್ನು ಗುರುತಿಸಿ ಅವರ ಹೆಸರುಗಳನ್ನು ನೋಂದಾಯಿಸಿ ಅವರಿಗೆ ವಿಮೆ ಕಾರ್ಡುಗಳನ್ನು ಕೊಡುವ ಕಾರ್ಯವನ್ನು ಕೈಗೊಂಡಿರುವುದನ್ನು ಶ್ಲಾಘನೀಯ ಎಂದರು.ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಿಂದ ಹತ್ತಾರು ಜನಪರವಾದ ಯೋಜನೆಗಳನ್ನು ರೂಪಿಸಿ ಎಲ್ಲಾ ವರ್ಗದ ಜನರನ್ನು ಸೆಳೆದಿದೆ. ಆದರೆ ಅರಿವಿನ ಕೊರೆತೆಯಿಂದ ಬಹುತೇಕ ಜನರು ಯೋಜನೆಗಳನ್ನು ಪಡೆಯಲಾಗದೆ ಹಿಂದೆ ಸರಿಯುವಂತಾಗಿದೆ.ಬಿಜೆಪಿ ಕಾರ್ಯಕರ್ತರು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.ಹರ್ಯಾಣದಲ್ಲಿ ಬಿಜೆಪಿ ಗೆಲುವು
ಕೇಂದ್ರ ಸರ್ಕಾರದ ಜನಪರ ಯೋಜನೆಗಳಿಂದ ಆಕರ್ಷಿತರಾಗಿರುವ ಹರ್ಯಾಣ ರಾಜ್ಯದಲ್ಲಿ ಸತತವಾಗಿ ಮೂರನೇ ಬಾರಿಯೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕೈಹಿಡಿಯುವಂತಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.ಈ ವೇಳೆ ಕೃಷಿಕ ಸಮಾಜದ ಅಧ್ಯಕ್ಷ ಜಿ.ರಾಜಾರೆಡ್ಡಿ,ವಿಎಸ್‌ಎಸ್‌ಎನ್ ಅಧ್ಯಕ್ಷ ಆರ್.ಸತೀಶ್,ಚಿನ್ನಿ,ವಿನೋದ್,ನರಸಾರೆಡ್ಡಿ,ಓಬಳರೆಡ್ಡಿ ಇತರರು ಇದ್ದರು.