ಸಾರಾಂಶ
ನಮೂನೆ 53 ಮತ್ತು 57 ರಲ್ಲಿ ಸಾಗುವಳಿ ಚೀಟಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿರುವ ರೈತರು ಜಮೀನನ್ನು ಸರ್ಕಾರದ ವತಿಯಿಂದ ಸರ್ವೆ ಮಾಡಿಸಿ ವಿಸ್ತೀರ್ಣದ ಸರ್ಕಾರದ ಜಮೀನನ್ನು ಅವರಿಗೆ ಸಾಗುವಳಿ ಚೀಟಿ ನೀಡಿ ಭೂಮಿಯ ಒಡೆಯರೆಂದು ಘೋಷಿಸಬೇಕು.
ಕನ್ನಡ ಪ್ರಭವಾರ್ತೆ ಜಗಳೂರು
ಹಲವು ವರ್ಷಗಳಿಂದ ಬಗರ್ ಹುಕುಂ ಜಮೀನು ಸಾಗುವಳಿದಾರರಿಗೆ ಅಧಿಕೃತವಾಗಿ ಸಾಗುವಳಿ ಚೀಟಿ ನೀಡಬೇಕೆಂದು ಒತ್ತಾಯಿಸಿ ತಾಲೂಕು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಚ್ಚವನಹಳ್ಳಿ ಮಂಜುನಾಥ್ ಬಣದಿಂದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ಬೈಕ್ ರ್‍ಯಾಲಿ ನಡೆಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.ಈ ವೇಳೆ ತಾಲೂಕು ರೈತ ಸಂಘದ ಅಧ್ಯಕ್ಷ ಚಿರಂಜೀವಿ ಮಾತನಾಡಿ, ನಮೂನೆ 53 ಮತ್ತು 57 ರಲ್ಲಿ ಸಾಗುವಳಿ ಚೀಟಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿರುವ ರೈತರು ಜಮೀನನ್ನು ಸರ್ಕಾರದ ವತಿಯಿಂದ ಸರ್ವೆ ಮಾಡಿಸಿ ವಿಸ್ತೀರ್ಣದ ಸರ್ಕಾರದ ಜಮೀನನ್ನು ಅವರಿಗೆ ಸಾಗುವಳಿ ಚೀಟಿ ನೀಡಿ ಭೂಮಿಯ ಒಡೆಯರೆಂದು ಘೋಷಿಸಬೇಕೆಂದು ಆಗ್ರಹ ಮಾಡಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ರಾಜು ಮಾತನಾಡಿದರು. ಈ ವೇಳೆ ಜಿಲ್ಲಾ ರೈತ ಮುಖಂಡ ಕಾನನಕಟ್ಟೆ ತಿಪ್ಪೇಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಸತೀಶ್, ಹಸಿರು ಸೇನೆ ಅಧ್ಯಕ್ಷ ನಾಗರಾಜ್, ತಾಲೂಕು ಗೌರವಾಧ್ಯಕ್ಷ ಗಂಗಾಧರಪ್ಪ, ಲಿಂಗನಹಳ್ಳಿ ಅಂಜಿನಪ್ಪ, ಪರಸಪ್ಪ, ದೊಣ್ಣೆಹಳ್ಳಿ ತಿಪ್ಪಣ್ಣ ಸೇರಿ ಹಲವು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.