ಸಾರಾಂಶ
ಇಲ್ಲಿನ ಅಶೋಕನಗರದ ಅವರ ನಿವಾಸ, ಗಣೇಶಪೇಟೆಯ ಕೆಜಿಪಿ ಆಭರಣ ಮಳಿಗೆ, ಲ್ಯಾಮಿಂಗ್ಟನ್ ರಸ್ತೆಯ ಮಹಾದೇವಿ ಸಿಲ್ಕ್ಸ್ ಆ್ಯಂಡ್ ಸ್ಯಾರೀಸ್, ಅಮರಗೋಳದ ರಾಯಲ್ ರಿಟ್ಜ್ ರೆಸಾರ್ಟ್ ಮೇಲೆ ಏಕಕಾಲಕ್ಕೆ 115ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದರು.
ಹುಬ್ಬಳ್ಳಿ: ನಗರದ ಉದ್ಯಮಿ ಗಣೇಶ ಶೇಟ್ ಅವರ ಮನೆ, ಕಚೇರಿ, ಹೋಟೆಲ್ ಮೇಲೆ ಐಟಿ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು.
ಸೋಮವಾರ ಕೆಲಕಾಲ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳ ತಂಡ, ಮಂಗಳವಾರ ಮತ್ತೆ ದಾಳಿ ಮುಂದುವರಿಸಿತು. ಬೆಳಗ್ಗೆಯಿಂದ ಸಂಜೆ ವರೆಗೂ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಕೆಲವೊಂದಿಷ್ಟು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.ಇಲ್ಲಿನ ಅಶೋಕನಗರದ ಅವರ ನಿವಾಸ, ಗಣೇಶಪೇಟೆಯ ಕೆಜಿಪಿ ಆಭರಣ ಮಳಿಗೆ, ಲ್ಯಾಮಿಂಗ್ಟನ್ ರಸ್ತೆಯ ಮಹಾದೇವಿ ಸಿಲ್ಕ್ಸ್ ಆ್ಯಂಡ್ ಸ್ಯಾರೀಸ್, ಅಮರಗೋಳದ ರಾಯಲ್ ರಿಟ್ಜ್ ರೆಸಾರ್ಟ್ ಮೇಲೆ ಏಕಕಾಲಕ್ಕೆ 115ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದರು.
ಹೊಸಪೇಟೆಯಲ್ಲಿ ಇರುವ ತಾರಾ ಪ್ಯಾಲೇಸ್, ಸಿಲ್ಕ್ ಸ್ಯಾರೀಸ್ ಮಳಿಗೆಗಳ ಮೇಲೂ ದಾಳಿ ನಡೆದಿದೆ. ಕೆಜಿಪಿ ಜ್ಯುವೆಲರ್ಸ್ ಮಳಿಗೆಗೆ ಗಣೇಶ್ ಶೇಟ್ ಪುತ್ರ ಶ್ರೀಗಂಧ ಶೇಟ್ ಅವರನ್ನು ಕರೆಸಿದ ಅಧಿಕಾರಿಗಳು, ಕೆಲ ಸಮಯ ವಿಚಾರಣೆ ನಡೆಸಿದರು. ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಆದಾಯ ಮೂಲಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಹುಬ್ಬಳ್ಳಿ, ಬೆಳಗಾವಿ, ಗೋವಾದ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.