ಐಟಿ, ಇಡಿ ಮೂಲಕ ವಿರೋಧಿಗಳ ಹಣಿಯಲು ಯತ್ನ

| Published : May 23 2025, 12:05 AM IST

ಸಾರಾಂಶ

ಗೃಹ ಸಚಿವ ಪರಮೇಶ್ವರ್ ಅವರ ಮನೆ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಕಳೆದ ಆರು ವರ್ಷದ ಹಿಂದೆ ಐಟಿಯವರು ದಾಳಿ ಮಾಡಿದ್ದರು. ಮತ್ತೇ ಈಗ ಇಡಿ ದಾಳಿ ಮಾಡುವ ಮೂಲಕ ವಿರೋಧ ಪಕ್ಷದ ನಾಯಕರನ್ನು ಹಣಿಯಲು ಯತ್ನಿಸಲಾಗುತ್ತಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ಗೃಹ ಸಚಿವ ಪರಮೇಶ್ವರ್ ಅವರ ಮನೆ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಕಳೆದ ಆರು ವರ್ಷದ ಹಿಂದೆ ಐಟಿಯವರು ದಾಳಿ ಮಾಡಿದ್ದರು. ಮತ್ತೇ ಈಗ ಇಡಿ ದಾಳಿ ಮಾಡುವ ಮೂಲಕ ವಿರೋಧ ಪಕ್ಷದ ನಾಯಕರನ್ನು ಹಣಿಯಲು ಯತ್ನಿಸಲಾಗುತ್ತಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಆರೋಪಿಸಿದ್ದಾರೆ. ಗುಬ್ಬಿ ತಾಲೂಕಿನ ಹಂಡನಹಳ್ಳಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ 31 ಕೋಟಿ ವೆಚ್ಚದ ರಸ್ತೆ ಕಾಮಾಗಾರಿಗೆ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಐಟಿ, ಇಡಿ ದಾಳಿಗಳು ರಾಜಕೀಯ ಪ್ರೇರಿತವಾಗಿದ್ದು. ವಿರೋಧ ಪಕ್ಷದ ಪ್ರಭಾವಿ ನಾಯಕರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರವು ಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಂಡು ಪ್ರಜಾಪ್ರಭುತ್ವದ ಸ್ವಾಸ್ಥ್ಯ ಕಾಯಬೇಕು ಎಂದರು.

ತಾಲೂಕಿನಲ್ಲಿ ಪ್ರಾಣಿ ಬೇಟೆಯಾಡುತ್ತಿರುವ ಸಂಖ್ಯೆ ಹೆಚ್ಚಳವಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಅಪರಾಧಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಾರೆ. ನಾಗರಿಕರೆಲ್ಲರೂ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು. ಇನ್ನೂ ನಾನು ಸಚಿವ ಸ್ಥಾನಕ್ಕೆ ಎಂದು ಆಸೆ ಪಟ್ಟವನಲ್ಲ ಸರ್ಕಾರವು ನೀಡುವ ಜವಾಬ್ದಾರಿಯನ್ನು ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ ಎನ್ನುವ ಮೂಲಕ ತಾವು ಸಹ ಸಚಿವ ಸ್ಥಾನದ ಆಕಾಂಕ್ಷಿ ಎಂಬುದನ್ನು ಸೂಚ್ಯವಾಗಿ ಹೇಳಿದರು.

ಗಣಿ ಭಾಗದ ಪ್ರದೇಶಗಳಾದ ದೊಡ್ಡಗುಣಿ ಹಾಗೂ ಕೊಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಲಭೂತ ಸೌಕರದಯಗಳಾದ ಶಾಲೆ ರಸ್ತೆ , ಅಂಗನವಾಡಿ ಸೇರಿದಂತೆ ಹಲವು ಅಭಿವೃದ್ದಿ ಮಾಡಲು ಯೋಜನೆಯನ್ನು ರೂಪಿಸಲಾಗಿದೆ. ತಾಲೂಕಿನಲ್ಲಿ ಜಲ ಜೀವನ್ ಯೋಜನೆ ಕಳೆಪೆ ಕಾಮಾಗಾರಿ ಬಗ್ಗೆ ವ್ಯಾಪಕವಾಗಿ ಪೋನ್ ಗಳು ಬರುತ್ತಿದ್ದು ಶೀಘ್ರದಲ್ಲಿ ಎಲ್ಲ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಎಂಜಿನಿಯರ್ ಗಳ ಸಭೆ ಕರೆದು ಚರ್ಚಿಸಿ ಸೂಕ್ತವಾಗಿ ಕೆಲಸ ಮಾಡಲು ಸೂಚಿಸುತ್ತೇನೆ. ಜತೆಗೆ ಗುತ್ತಿಗೆದಾರರು ಕೂಡ ಸರಿಯಾದ ಕೆಲಸ ಮಾಡಲಿಲ್ಲ ಅಂದರೇ ಅವರ ವಿರುದ್ದ ಕಾನೂನು ಕ್ರಮಕೈಗೊಳುತ್ತೇನೆ ಎಂದರು

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಗದೀಶ್ ,ಶಂಕರಪ್ಪ ,ದೊಡ್ಡಕೆಂಪಯ್ಯ , ಪಿಡಿಒ ರಂಗರಾಜು , ವಿ ಎಸ್ ಎಸ್ ಎನ್ ಅಧ್ಯಕ್ಷ ರಮೇಶ್ ಮುಖಂಡರಾದ ಕೊಂಡ್ಲಿ ಜಗದೀಶ್ ,ರಾಜು , ಪರಮಣ್ಣ , ಶಶಿಧರ್ , ಈಶಣ್ಣ , ಕೊಟ್ಟಪ್ಪ‌ ,ಮಂಜುನಾಥ್ , ಗುತ್ತಿಗೆದಾರ ಸತೀಶ್ ,ವೀರಣ್ಣಗೌಡ ಇದ್ದರು.