ಸಮಾಜದಲ್ಲಿ ಜಾತಿ ವ್ಯವಸ್ಥೆ ತೊಲಗಿಸಲು ಸಾಧ್ಯವಾಗಿಲ್ಲ: ಡಾ.ಮಹೇಶ್ ಮದೇನಟ್ಟಿ

| Published : Apr 15 2025, 12:57 AM IST

ಸಾರಾಂಶ

ಜಾತಿ ಆಧಾರದ ಮೇಲೆ ಎಲ್ಲರೂ ತೀರ್ಮಾನವಾಗುತ್ತಿದ್ದ ದೇಶದ ಒಳಗೆ ಆ ವ್ಯವಸ್ಥೆ ಹೋಗಿ ಎಲ್ಲರಿಗೂ ಸಮಾನವಾಗಿರುವ ನ್ಯಾಯ, ಅವಕಾಶ ಸಿಗಬೇಕು ಎನ್ನುವುದು ಅಂಬೇಡ್ಕರ್ ಕನಸು. ಪ್ರಸ್ತುತ ಸಮಾಜದಲ್ಲಿ ಅಂಬೇಡ್ಕರ್ ಕನಸು ಇದುವರೆಗೂ ನನಸಾಗಿಲ್ಲ. ಇಂದಿಗೂ ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ದೌರ್ಜನ್ಯಗಳು ನಡೆಯುತ್ತಿವೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸಮಾಜದಲ್ಲಿ ಮಕ್ಕಳ ಮನಸ್ಸಿನಲ್ಲಿ ಜಾತಿ ಎಂಬ ವಿಷಬೀಜ ಬಿತ್ತಲಾಗಿದೆ. ಸಮಾಜದಲ್ಲಿ ಜಾತಿ ವ್ಯವಸ್ಥೆ ತೊಲಗಿಸಲು ಸಾಧ್ಯವಾಗಿಲ್ಲ ಎಂದು ಅಕ್ಷರ ಸೂರ್ಯ ಪತ್ರಿಕೆ ಸಂಪಾದಕ ಡಾ.ಮಹೇಶ್ ಮದೇನಟ್ಟಿ ವಿಷಾದಿಸಿದರು.

ಪಟ್ಟಣದ ತಾಪಂ ಸಭಾಂಗಣದ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಜಾತಿ ಆಧಾರದ ಮೇಲೆ ಎಲ್ಲರೂ ತೀರ್ಮಾನವಾಗುತ್ತಿದ್ದ ದೇಶದ ಒಳಗೆ ಆ ವ್ಯವಸ್ಥೆ ಹೋಗಿ ಎಲ್ಲರಿಗೂ ಸಮಾನವಾಗಿರುವ ನ್ಯಾಯ, ಅವಕಾಶ ಸಿಗಬೇಕು ಎನ್ನುವುದು ಅಂಬೇಡ್ಕರ್ ಕನಸು. ಪ್ರಸ್ತುತ ಸಮಾಜದಲ್ಲಿ ಅಂಬೇಡ್ಕರ್ ಕನಸು ಇದುವರೆಗೂ ನನಸಾಗಿಲ್ಲ. ಇಂದಿಗೂ ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಡಿಸಿದರು.

ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದಿಂದ ನಾವೆಲ್ಲರು ನೆಮ್ಮದಿಯಿಂದ ಬದುಕುವಂತಾಗಿದೆ. ಅಂಬೇಡ್ಕರ್‌ ಮಹಾನ್ ನಾಯಕರ ಜಯಂತಿಯನ್ನು ಪ್ರತಿಯೊಬ್ಬರು ಹಬ್ಬದಂತೆ ವರ್ಷವಿಡಿ ಆಚರಣೆ ಮಾಡಬೇಕು ಎಂದರು.

ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್‌ರಾಂ, ಜಯಂತಿ ಪ್ರಯುಕ್ತ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು. ಈ ವೇಳೆ ಇಒ ಲೋಕೇಶ್‌ಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೇರ್ಶಕ ಪ್ರಭಾಕರ್, ಉಪವಿಭಾಗಧಿಕಾರಿ ಕಚೇರಿ ತಹಸೀಲ್ದಾರ್ ಪ್ರಕಾಶ್, ತೋಟಗಾರಿಗೆ ಇಲಾಖೆ ಸಹಾಯಕ ನಿದೇರ್ಶಕ ಪ್ರಸನ್ನ, ಇಳ್ಳೇನಹಳ್ಳಿ ದೇವರಾಜು, ದಸಂಸ ಮುಖಂಡರಾದ ಅಲ್ಪಳ್ಳಿ ಗೋವಿಂದಯ್ಯ, ಅರಳಕುಪ್ಪೆ ದೇವರಾಜು, ಹರಹಳ್ಳಿ ಸಿದ್ದಲಿಂಗಯ್ಯ, ಬಿಇಒ ರವಿಕುಮಾರ್, ಬಿಆರ್ ಸಿ ಪ್ರಕಾಶ್, ಪಿ.ಎಸ್.ಐ. ಉಮೇಶ್, ಡಾ.ಅರವಿಂದ್, ಇಲಾಖೆ ಮ್ಯಾನೇಜರ್ ಕೋಮಾಲ, ಲೋಕೇಶ್, ಸೇರಿದಂತೆ ಹಲವರಿದ್ದಾರೆ.

ಶಾಸಕರು ಗೈರು:

ತಾಲೂಕು ಆಡಳಿತದಿಂದ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗೈರಾಗಿದ್ದರು. ಶಾಸಕರು ಅಮೆರಿಕಾಗೆ ತೆರಳಿದ್ದರಿಂದ ಜಯಂತಿಯಲ್ಲಿ ಭಾಗವಹಿಸಿರಲಿಲ್ಲ. ನಾಡಹಬ್ಬಗಳು, ಜಯಂತಿಗಳಿಗೆ ಶಾಸಕರು ಕೈಗಾರಿಗ್ದರಿಂದ ಸಾರ್ವಜನಿಕರ ಆಕ್ರೋಶ ಕಾರಣವಾಗಿತ್ತು.