ಸಾರಾಂಶ
ಗ್ರಾಮೀಣ ಭಾಗದಲ್ಲಿ ಉದ್ಯಮವನ್ನು ಕಟ್ಟಿಬೆಳೆಸಿ, ಅದರ ಮೂಲಕ ನೂರಾರು ಕುಟುಂಬಗಳಿಗೆ ಉದ್ಯೋಗ ನೀಡಿರುವುದು ಶ್ಲಾಘನೀಯ ಎಂದು ಶಾಸಕ ಹೆಚ್.ವೈ.ಮೇಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಅಮೀನಗಡ
ಗ್ರಾಮೀಣ ಭಾಗದಲ್ಲಿ ಉದ್ಯಮವನ್ನು ಕಟ್ಟಿಬೆಳೆಸಿ, ಅದರ ಮೂಲಕ ನೂರಾರು ಕುಟುಂಬಗಳಿಗೆ ಉದ್ಯೋಗ ನೀಡಿರುವುದು ಶ್ಲಾಘನೀಯ ಎಂದು ಶಾಸಕ ಹೆಚ್.ವೈ.ಮೇಟಿ ಹೇಳಿದರು.ಪಟ್ಟಣದಲ್ಲಿ ವಿಜಯಾ ಕರದಂಟು ನೂತನ ಕಟ್ಟಡ ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿ, ನೂರು ವರ್ಷಗಳ ಹಿಂದೆ ಸಾವಳಿಗೆಪ್ಪ ಐಹೊಳ್ಳಿ ಹಿರಿಯರು ಪ್ರಾರಂಭಿಸಿದ ವಿಜಯಾ ಕರದಂಟನ್ನು ಉದ್ಯಮವಾಗಿ ಮೂರನೇ ತಲೆಮಾರಿಗೂ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈ ಮೂಲಕ ಗ್ರಾಮೀಣ ಪ್ರದೇಶದಿಂದ ರಾಜ್ಯವ್ಯಾಪಿ ಶಾಖೆಗಳನ್ನು ತೆರೆಯುವುದರ ಮೂಲಕ, ನೂರಾರು ಕುಟುಂಬಗಳಿಗೆ ಉದ್ಯೋಗ ನೀಡುತ್ತಿರುವ ಮಾಲೀಕ ಸಂತೋಷ ಐಹೊಳ್ಳಿ ಅವರ ಕಾರ್ಯ ಶ್ಲಾಘನೀಯ ಎಂದರು.
ಮಾಜಿ ಶಾಸಕ ವೀರಣ್ಣ ಚರಂತಿಮಠ, ಎಂಎಲ್‌ಸಿ ಪಿ.ಎಚ್.ಪೂಜಾರ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಸ್.ಚಳ್ಳಗಿಡದ, ರಾಜ್ಯ ದೇವಾಂಗ ಸಮಾಜದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಪಪಂ ಅಧ್ಯಕ್ಷೆ ಬೇಬಿ ಚವ್ಹಾಣ ಹಾಗೂ ಸದಸ್ಯರು, ವಿವಿಧ ಪಕ್ಷಗಳ ಮುಖಂಡರು, ಗಣ್ಯರು, ಉದ್ದಿಮೆದಾರರು ಆಗಮಿಸಿ ಶುಭ ಕೋರಿದರು.ಇದೇ ಸಂದರ್ಭದಲ್ಲಿ ವಿಜಯಾ ಕರಂದಂಟು ಮಾಲೀಕರಾದ ಸಂತೋಷ ಐಹೊಳ್ಳಿ, ಲಕ್ಷ್ಮೀ ಸಂತೋಷ ಐಹೊಳ್ಳಿ ಅವರು ಗಣ್ಯರನ್ನು ಸನ್ಮಾನಿಸಿದರು. ಬಸವರಾಜ ಐಹೊಳ್ಳಿ, ವಿಜಯಲಕ್ಷ್ಮೀಐಹೊಳ್ಳಿ, ಸುನೀಲ ನಾಗಠಾಣ, ಕಂಪನಿಯ ಮುಖ್ಯಸ್ಥರು, ಸಿಬ್ಬಂದಿ ಇದ್ದರು.