ತುರ್ತು ಪರಿಸ್ಥಿತಿ ಮರುಕಳಿಸದಂತೆ ಎಚ್ಚರ ವಹಿಸುವುದು ಅವಶ್ಯ

| Published : Jul 28 2025, 12:30 AM IST

ತುರ್ತು ಪರಿಸ್ಥಿತಿ ಮರುಕಳಿಸದಂತೆ ಎಚ್ಚರ ವಹಿಸುವುದು ಅವಶ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕರಾಳ ತುರ್ತು ಪರಿಸ್ಥಿತಿಯ ಭೀಕರತೆಯನ್ನು ಮುಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡುವ ಮೂಲಕ ಮತ್ತೊಮ್ಮೆ ಈ ದೇಶದಲ್ಲಿ ಮರುಕಳಿಸದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಪುತ್ತೂರು ವಿವೇಕಾನಂದ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ತೀರ್ಥಹಳ್ಳಿ: ಕರಾಳ ತುರ್ತು ಪರಿಸ್ಥಿತಿಯ ಭೀಕರತೆಯನ್ನು ಮುಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡುವ ಮೂಲಕ ಮತ್ತೊಮ್ಮೆ ಈ ದೇಶದಲ್ಲಿ ಮರುಕಳಿಸದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಪುತ್ತೂರು ವಿವೇಕಾನಂದ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.ತೀರ್ಥಹಳ್ಳಿ ಪಟ್ಟಣದ ಗಾಯತ್ರಿ ಮಂದಿರದಲ್ಲಿ ತುರ್ತು ಪರಿಸ್ಥಿತಿಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಡಗೋಲು ವಿಚಾರ ಮಂಥನ ವೇದಿಕೆ ವತಿಯಿಂದ ನಡೆದ ಮರುಮುದ್ರಿತ ಭುಗಿಲು ಪುಸ್ತಕದ ಲೋಕಾರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ತುರ್ತುಸ್ಥಿತಿಯ ನಂತರ ದೇಶಕ್ಕೆ ಎರಡನೇ ಸ್ವಾತಂತ್ರ್ಯ ಲಭಿಸಿದೆಯದರೂ ಹಿಂದೂಗಳಿಗೆ ಪೂರ್ಣ ಸ್ವಾತಂತ್ರ್ಯ ದೊರೆತಿಲ್ಲಾ. ಈ ನಿಟ್ಟಿನಲ್ಲಿ ಹೋರಾಟ ಮುಂದುವರಿಸಬೇಕಿದ್ದು ಇದರಲ್ಲಿ ಮಾತೆಯರ ಪಾತ್ರ ನಿರ್ಣಾಯಕವಾಗಿದೆ ಎಂದರು.ತುರ್ತುಸ್ಥಿತಿ ಘೋಷಣೆಯಾಗಿದ್ದ ಸಂಧರ್ಭ ಭೂಗತರಾಗಿದ್ದಕೊಂಡು ಹೋರಾಟವನ್ನು ಸಂಘಟಿಸಿದ ಮತ್ತು ಅನುಭವಿಸಿದ ಸಂಕಷ್ಟಗಳ ಘಟನಾವಳಿಗಳನ್ನು ವಿವರಿಸಿದ ಅವರು, ರಾತ್ರಿ ಬೆಳಗಾಗುವುದರೊಳಗೆ ರಾಷ್ಟ್ರ ನಾಯಕರುಗಳನ್ನು ಬಂಧನಕ್ಕೊಳಪಡಿಸಿ ಜೈಲಿಗಟ್ಟಿದ್ದ ಇಂದಿರಗಾಂಧಿ, ಪತ್ರಿಕಾ ಮಾಧ್ಯಮದ ಕತ್ತನ್ನು ಹಿಸುಕಿ ಇಡೀ ದೇಶದಾದ್ಯಂತ ಭಯಾನಕ ವಾತಾವರಣವನ್ನು ಮೂಡಿಸಿದ್ದರು. ಇಂದಿರಾಗಾಂಧಿ ಮತ್ತೊಮ್ಮೆ ಗೆಲ್ಲುವ ಭ್ರಮೆಯಲ್ಲಿ 1977ರಲ್ಲಿ ಘೋಷಣೆ ಚುನಾವಣೆ ಘೋಷಣೆ ಮಾಡಿದ್ದೇ ಈ ದೇಶದ ಅದೃಷ್ಟವಾಗಿತ್ತು ಎಂದು ತಿಳಿಸಿದರು.ಇಂದಿರಾಗಾಂಧಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ತನ್ನ ಸುತ್ತಲಿನ ದುಷ್ಟಕೂಟದ ಸಲಹೆಯನ್ನು ಆಧರಿಸಿ ಅಲಹಾಬಾದ್ ಉಚ್ಚನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ್ದು ಮಾತ್ರವಲ್ಲದೇ 1975 ಜೂನ್ 25 ರಂದು ಮಧ್ಯರಾತ್ರಿ ಆಂತರಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿ ದೇಶದಲ್ಲಿ ಕತ್ತಲೆಯ ಕಾರ್ಮೋಡ ಕವಿಯುವಂತೆ ಮಾಡಿದ್ದರು. ಹಿಂದಿನ ತುರ್ತು ಪರಿಸ್ಥಿತಿಯ ಕರಾಳ ಅಧ್ಯಾಯ ಈ ದೇಶದಲ್ಲಿ ಮತ್ತೊಮ್ಮೆ ಮರುಕಳಿಸದಂತೆ ಅದರ ಭೀಕರತೆಯನ್ನು ಮುಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ಹೇಳಿದರು.ಪುಸ್ತಕವನ್ನು ಬಿಡುಗಡೆಗೊಳಿಸಿದ ಪತ್ರಕರ್ತ ದು.ಗು.ಲಕ್ಷ್ಮಣ್ ಮಾತನಾಡಿ, ತುರ್ತು ಪರಿಸ್ಥಿತಿಯ ವಿರುದ್ಧ ಇಡೀ ದೇಶದಲ್ಲಿ ಯುದ್ಧದ ಸಿದ್ಧತೆ ಮಾಡಿರುವುದು ಆರ್‌ಎಸ್‍ಎಸ್ ಸಂಘಟನೆ. ಆದರೆ ಇದನ್ನು ಸಾರ್ವಜನಿಕವಾಗಿ ಹೇಳಿಕೊಳ್ಳುವುದಕ್ಕೆ ಹಿಂಜರಿಕೆ ಯಾಕೆ ಎಂದು ತಿಳಿಯುತ್ತಿಲ್ಲಾ. ತುರ್ತು ಪರಿಸ್ಥಿತಿಯ ಬಗ್ಗೆ ಹಲವಾರು ಲೇಖನಗಳು ಪ್ರಕಟವಾಗಿದ್ದು ಅದರಲ್ಲಿ ಕೆಲವೇ ಕೆಲವು ದೇಶಭಕ್ತರು ಎಂದು ಹೇಳಲಾಗಿದೆ. ಇದು ಚರಿತ್ರೆಯನ್ನು ತಿರುಚುವ ಯತ್ನವಾಗಿದ್ದು ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಬೇಕಿದೆ ಎಂದು ಹೇಳಿದರು.

ಕಳೆದ 50 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯಾಗಿದ್ದರೂ ಅಧಿಕಾರದಲ್ಲಿ ಕೂತವರು ವ್ಯಾಪ್ತಿಯನ್ನು ಮೀರದಂತೆ ಪ್ರಜಾತಂತ್ರ ವ್ಯವಸ್ಥೆಯ ಉಳಿವಿಗೂ ಚಿಂತನೆ ನಡೆಸಬೇಕಿದೆ. ದೇಶಕ್ಕೆ ದೊರೆತ ಎರಡನೇ ಸ್ವಾತಂತ್ರ್ಯದ ಬಗ್ಗೆ ಈಗಿನ ತಲೆಮಾರಿಗೆ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಲು ಮತ್ತು ಭಾರತವನ್ನು ಭಾರತವಾಗಿ ಉಳಿಸಲು ನಿರಂತರ ಪ್ರಯತ್ನ ಅಗತ್ಯ ಎಂದರು.ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, 5 ದಶಕಗಳ ಹಿಂದಿನ ಘಟನೆಯನ್ನು ಸ್ಮರಿಸುವಾಗ ರಂಜನೆಯಾಗುತ್ತದೆ. ಆದರೆ ತುರ್ತು ಪರಿಸ್ಥಿತಿಯ ಭೀಕರತೆ ಎಣಿಸುವುದಕ್ಕೂ ಅಸಾಧ್ಯವಾಗಿದೆ. ಭಾರತ ಮಾತಾಕಿ ಜೈ ಎಂದ ಕಾರಣಕ್ಕೆ ನಾನೂ ಜೈಲುವಾಸ ಅನುಭವಿಸಿದ್ದೇನೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಕೆ.ಎಂ.ಜಯಶೀಲ ವಹಿಸಿದ್ದರು.

ವೇದಿಕೆಯಲ್ಲಿ ದಿನೇಶ್ ಭಾರತಿಪುರ ಇದ್ದರು. ಚಕ್ಕೋಡಬೈಲು ಶ್ರೀವತ್ಸಾ ಸ್ವಾಗತಿಸಿದರು.