ಸೂಲಿಬೆಲೆ: ಗ್ರಾಮೀಣ ಭಾಗದ ಕಲೆಗಳನ್ನು ಕಲೆಗಳು ಉಳಿಸಿ ಬೆಳೆಸಲು ಪ್ರೋತ್ಸಾಹ ಅವಶ್ಯ ಎಂದು ಯುವ ಮುಖಂಡ ನಾರಾಯಣಗೌಡ ಹೇಳಿದರು.

ಗುಳ್ಳಹಳ್ಳಿ ಗ್ರಾಮದಲ್ಲಿ ಬೆಂಡಿಗಾನಹಳ್ಳಿ ದಿವಂಗತ ವೆಂಕಟರಮಣಗೌಡರ ಸ್ಮರಣಾರ್ಥ ಆಂಜನೇಯಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ಹಮ್ಮಿಕೊಂಡಿದ್ದ ದಾನವೀರಶೂರಕರ್ಣ ಪೌರಾಣಿಕ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ದೃಶ್ಯ ಮಾಧ್ಯಮದ ಭರಾಟೆಯಲ್ಲಿ ಕಲೆಗಳು ನಶಿಸುವ ಹಂತಕ್ಕೆ ತಲುಪಿವೆ ಕಲೆಯನ್ನು ಮುಂದಿನ ಪೀಳಿಗೆಗೆ ಕಾಪಾಡುಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ ಎಂದರು.

ರಂಗ ಕಲಾವಿದ ಡಿ.ಲಕ್ಷ್ಮೀನಾರಾಯಣ್ ಮಾತನಾಡಿ, ಕಲೆಯನ್ನು ಗ್ರಾಮೀಣ ಭಾಗದಲ್ಲಿ ಹವ್ಯಾಸವಾಗಿ ಸ್ವೀಕರಿಸಿದ್ದಾರೆ ಗುಳ್ಳಹಳ್ಳಿ ಗ್ರಾಮದಲ್ಲಿ ವರ್ಷಕ್ಕೆ ೨ ನಾಟಕ ಆಡುತ್ತಾರೆ. ಇವರೆಲ್ಲ ಹವ್ಯಾಸಿ ಕಲಾವಿದರಾಗಿದ್ದು ಅವರನ್ನು ಪ್ರೋತ್ಸಾಹಿಸಬೇಕು ಎಂದರು.

ನಾಟಕ ನಿರ್ದೇಶಕ ಸೂಲಿಬೆಲೆ ಡಾ.ಸಿದ್ದರಾಮಯ್ಯ, ಸಂಗೀತ ನಿರ್ದೇಶಕ ಚನ್ನಹಳ್ಳಿ ವೆಂಕಟೇಶ್ ಅವರನ್ನು ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ ಸನ್ಮಾನಿಸಿದರು.

ರಾಜ್ಯ ಒಕ್ಕಲಿಗ ಸಂಘದ ಕಾರ್ಯಾಧ್ಯಕ್ಷ ಬಿ.ವಿ.ರಾಜಶೇಖರಗೌಡ, ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ, ಯುವ ಮುಖಂಡ ನಾರಾಯಣಗೌಡ, ನಗರೇನಹಳ್ಳಿ ತಮ್ಮೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ನಗರೇನಹಳ್ಳಿ ನಾಗರಾಜಪ್ಪ, ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಜಿ.ಸಿ.ಮುನಿಯಪ್ಪ, ತಾಪಂ ಮಾಜಿ ಸದಸ್ಯ ಡಾ.ಡಿ.ಟಿ.ವೆಂಕಟೇಶ್, ಶಾಲಾ ಆಧ್ಯಕ್ಷ ಶ್ರೀರಾಮ್, ಡೇರಿ ಅಧ್ಯಕ್ಷ ಮುನಿರಾಜು, ಮಾಜಿ ಅಧ್ಯಕ್ಷ ಜಡಿಯಪ್ಪ, ಸಮಾಜ ಸೇವಕ ಸೋಮಶೇಖರ್, ಹಿರಿಯ ಕಲಾವಿದ ಮುನಿಶಾಮಪ್ಪ, ಗ್ರಾಪಂ ಮಾಜಿ ಅಧ್ಯಕ್ಷೆ ನರಸಮ್ಮ, ಮುನಿರಾಜು, ಜಿ.ಎಂ.ನಾಗೇಶ್, ಲೋಕೇಶ್ ಇತರರಿದ್ದರು.


(ಫೋಟೋ ಕ್ಯಾಫ್ಞನ್‌)ಸೂಲಿಬೆಲೆ ಸಮೀಪದ ಗುಳ್ಳಹಳ್ಳಿಯಲ್ಲಿ ನಾಟಕ ನಿರ್ದೇಶಕ ಸಿದ್ದರಾಮಯ್ಯ, ಸಂಗೀತ ನಿರ್ದೇಶಕ ಚನ್ನಹಳ್ಳಿ ವೆಂಕಟೇಶ್ ಅವರನ್ನು ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ ಸನ್ಮಾನಿಸಿದರು.