ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಮಹಂತೇಶ್ ಎಂ. ನಡಕಟ್ಟಿ ಮಾತನಾಡಿ ದಶಕದ ಹಿಂದೆ ಆರ್ಥಿಕ ಬೆಳವಣಿಗೆಯಲ್ಲಿ 11ನೇ ಸ್ಥಾನದಲ್ಲಿದ್ದ ಭಾರತ, ಸಾಂಪ್ರದಾಯಿಕ ಆರ್ಥಿಕ ಶಕ್ತಿಗಳನ್ನು ಹಿಂದಿಕ್ಕಿ ಜಾಗತಿಕವಾಗಿ 5ನೇ ಸ್ಥಾನಕ್ಕೆ ಏರಿದೆ. ಇದಕ್ಕೆ ಇಂಜಿನಿಯರಿಂಗ್ ಕ್ಷೇತ್ರದ ಕೊಡುಗೆಯ ಪಾಲಿದೆ. ತನ್ನ ಜಿಡಿಪಿಯನ್ನು ಸರಿಸುಮಾರು 2 ಟ್ರಿಲಿಯನ್ ಡಾಲರ್ನಿಂದ 4 ಟ್ರಿಲಿಯನ್ಗೆ ಡಾಲರ್ಗೆ ವಿಸ್ತರಿಸಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ಇಂದು ನಾವು ಕೇವಲ ವೃತ್ತಿಜೀವನದ ಮೈಲಿಗಲ್ಲುಗಳನ್ನು ಆಚರಿಸಲು ಮಾತ್ರ ಸೀಮಿತವಾಗದೇ ನಮ್ಮ ಕ್ಷೇತ್ರದಲ್ಲಿ ತಾಂತ್ರಿಕ ಪ್ರಾವೀಣ್ಯತೆ, ದೂರದೃಷ್ಟಿ ಮತ್ತು ನಾಯಕತ್ವದ ಅತ್ಯುನ್ನತ ಶಿಖರವನ್ನು ತಲುಪುವ ಗುರಿಯನ್ನಿಟ್ಟುಕೊಳ್ಳಬೇಕು ಎಂದು ಬೆಂಗಳೂರಿನ ಡೀಪ್-ಟೆಕ್ ನಿರ್ದೇಶಕರು ಮತ್ತು ವಾಣಿಜ್ಯೋದ್ಯಮಿ ವಿನಾಯಕ್ ಅಂಬರೀಷ್ ನಂಜುಂಡಪ್ಪ ಕರೆ ನೀಡಿದ್ದಾರೆ.ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ನಗರದ ಶ್ರೀ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಬಿಎ, ಎಂಸಿಎ ಮತ್ತು ಎಂಟೆಕ್ ಸ್ನಾತಕೋತ್ತರ ಕೋರ್ಸ್ ಗಳ ಶೈಕ್ಷಣಿಕ ಚಟುವಟಿಕೆಗಳ ಸ್ವಾಗತ ಕಾರ್ಯಕ್ರಮ ಹಿನ್ನೆಲೆಯಲ್ಲಿ ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್ನ ಜಿ.ಪಿ. ನೆಕ್ಸಸ್ ಸಭಾಂಗಣದಲ್ಲಿ ಎಂ.ಟೆಕ್, ಎಂಸಿಎ ಮತ್ತು ಎಂಬಿಎ ಪ್ರಥಮ ವರ್ಷದ ತರಗತಿಗಳ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಇಂಜಿನಿಯರ್ಗಳಾಗಿ, ಎಂಬಿಎ, ಎಂಸಿಎ ಪದವಿಗಳಿಂದ ನಾವು ಭವಿಷ್ಯವನ್ನು ರೂಪಿಸುತ್ತೇವೆ. ಈ ಕಾರ್ಯಕ್ರಮವು ನಮಗೆ ಹೊಸ ಎತ್ತರಗಳನ್ನು ತಲುಪಲು, ಗಡಿಗಳನ್ನು ಮೀರಿ ಸಹಕರಿಸಲು ಮತ್ತು ಆಧುನಿಕ ಜಗತ್ತನ್ನು ನಿರ್ಮಿಸುವುದನ್ನು ಮುಂದುವರಿಸಲು ಸ್ಫೂರ್ತಿಯಾಗಲಿ. ವತ್ತಿ ಮತ್ತು ಉದ್ಯಮದ ಅನಿಶ್ಚಿತತೆಯನ್ನು ತೊಡದು ಹಾಕಲು ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ಆಧುನಿಕ ಮಾರುಕಟ್ಟೆ ಬೇಡಿಕೆಗಳಿಗೆ ತಕ್ಕಂತೆ ಪಡೆದುಕೊಳ್ಳಬೇಕು. ತಂತ್ರಗಳು ಮಾರುಕಟ್ಟೆ ಸೇವೆ ಮತ್ತು ತರ್ಕಗಳಿಗೆ ಬದ್ಧವಾಗಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಮಹಂತೇಶ್ ಎಂ. ನಡಕಟ್ಟಿ ಮಾತನಾಡಿ ದಶಕದ ಹಿಂದೆ ಆರ್ಥಿಕ ಬೆಳವಣಿಗೆಯಲ್ಲಿ 11ನೇ ಸ್ಥಾನದಲ್ಲಿದ್ದ ಭಾರತ, ಸಾಂಪ್ರದಾಯಿಕ ಆರ್ಥಿಕ ಶಕ್ತಿಗಳನ್ನು ಹಿಂದಿಕ್ಕಿ ಜಾಗತಿಕವಾಗಿ 5ನೇ ಸ್ಥಾನಕ್ಕೆ ಏರಿದೆ. ಇದಕ್ಕೆ ಇಂಜಿನಿಯರಿಂಗ್ ಕ್ಷೇತ್ರದ ಕೊಡುಗೆಯ ಪಾಲಿದೆ. ತನ್ನ ಜಿಡಿಪಿಯನ್ನು ಸರಿಸುಮಾರು 2 ಟ್ರಿಲಿಯನ್ ಡಾಲರ್ನಿಂದ 4 ಟ್ರಿಲಿಯನ್ಗೆ ಡಾಲರ್ಗೆ ವಿಸ್ತರಿಸಿದೆ ಎಂದು ಹೇಳಿದರು.ಅಕಾಡೆಮಿಕ್ ಡೀನ್ ಡಾ.ರೇಣುಕಲತಾ ಎಸ್, ವಿದ್ಯಾರ್ಥಿ ಕ್ಷೇಮಪಾಲನೆ ವಿಭಾಗದ ಡೀನ್ ಡಾ. ದಿವ್ಯಪ್ರಭಾ, ಪ್ರವೇಶಾತಿ ವಿಭಾಗದ ಮುಖ್ಯಸ್ಥರಾದ ಡಾ.ಸಿ.ಎಸ್. ರವೀಂದ್ರ ಸಾಗರ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು. ಎಂಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಅನುರಾಧಾ ಜಿ.ಆರ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ.ಬಿ.ನಾಗಾರ್ಜುನ ಸ್ವಾಗತಿಸಿದರು
ದ್ವೀತೀಯ ವರ್ಷದ ವಿದ್ಯಾರ್ಥಿಗಳಾದ ಅಭಿಷೇಕ್ ಸಿ.ಎಸ್., ಸಾನಿಯಾ ಖಾನ್ ಮತ್ತು ಲಿಖಿತಾ ಆರ್. ಅವರು ಕ್ಯಾಂಪಸ್ನಲ್ಲಿ ನಿರಂತರವಾಗಿ ನಡೆಯುವ ತಂಡದ ಯೋಜನೆಗಳು, ವೈವಿಧ್ಯಮಯ ಮತ್ತು ಸ್ಪರ್ಧಾತ್ಮಕ ಶೈಕ್ಷಣಿಕ ಕಲಾತ್ಮಕ ಕಾರ್ಯಕ್ರಮಗಳ ಬಗ್ಗೆ ತಮ್ಮ ಪ್ರಥಮವರ್ಷದ ಕಾಲೇಜು ಅನುಭವಗಳನ್ನು ಹಂಚಿಕೊಂಡರು.