ಗಿಡಗಳನ್ನು ಬೆಳೆಸಿ ಪೋಷಿಸುವುದು ಪ್ರತಿಯೊಬ್ಬರ ಕರ್ತವ್ಯ: ರೋಟರಿ ಕ್ಲಬ್ ಅಧ್ಯಕ್ಷ ಮಂಜುರಾಂ

| Published : Oct 18 2024, 12:13 AM IST / Updated: Oct 18 2024, 12:14 AM IST

ಗಿಡಗಳನ್ನು ಬೆಳೆಸಿ ಪೋಷಿಸುವುದು ಪ್ರತಿಯೊಬ್ಬರ ಕರ್ತವ್ಯ: ರೋಟರಿ ಕ್ಲಬ್ ಅಧ್ಯಕ್ಷ ಮಂಜುರಾಂ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಬಹುತೇಕ ಮಂದಿ ಅವರ ಲಾಭಕ್ಕಾಗಿ ಮರ ಕಡಿದು ಕಾಡು ನಾಶ ಮಾಡುತ್ತಿದ್ದಾರೆ ವಿನಃ ಮರಳಿ ಒಂದೇ ಒಂದು ಗಿಡ ನೆಡುತ್ತಿಲ್ಲ. ಪ್ರಕೃತಿಯಿಂದ ಎಲ್ಲವನ್ನೂ ಪಡೆದುಕೊಳ್ಳುವ ನಾವು ಮರಳಿ ಪ್ರಕೃತಿಗೆ ಏನನ್ನೂ ಕೊಡುತ್ತಿಲ್ಲ. ಇದರಿಂದ ಪರಿಸರ ನಾಶವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ. ಗಿಡಗಳನ್ನು ಬೆಳೆಸಿ ಪೋಷಣೆ ಮಾಡುವುದು ಪ್ರತಿಯೊಬ್ಬರ ಹೊಣೆಯಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಮಂಜುರಾಂ ತಿಳಿಸಿದರು.

ತಾಲೂಕಿನ ಕರಿಘಟ್ಟ ಬಳಿಯ ಲೋಕಪಾವನಿ ನದಿ ತೀರದಲ್ಲಿ ರೋಟರಿ ಸಂಸ್ಥೆ, ಅಚೀವರ್ಸ್ ಅಕಾಡೆಮಿ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ 120 ಗಿಡ ನೆಟ್ಟು ನೀರುಣಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತಮ ಪರಿಸರವನ್ನು ಸಮಾಜಕ್ಕೆ ಹಾಗೂ ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ನೀಡಬೇಕಾದುದ್ದು ಪ್ರತಿಯೊಬ್ಬರ ಕರ್ತವ್ಯ. ಜೊತೆಗೆ ಪರಿಸರದ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಅಚೀವರ್ಸ್ ಅಕಾಡೆಮಿ ಅಧ್ಯಕ್ಷ ಡಾ. ರಾಘವೇಂದ್ರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಬಹುತೇಕ ಮಂದಿ ಅವರ ಲಾಭಕ್ಕಾಗಿ ಮರ ಕಡಿದು ಕಾಡು ನಾಶ ಮಾಡುತ್ತಿದ್ದಾರೆ ವಿನಃ ಮರಳಿ ಒಂದೇ ಒಂದು ಗಿಡ ನೆಡುತ್ತಿಲ್ಲ. ಪ್ರಕೃತಿಯಿಂದ ಎಲ್ಲವನ್ನೂ ಪಡೆದುಕೊಳ್ಳುವ ನಾವು ಮರಳಿ ಪ್ರಕೃತಿಗೆ ಏನನ್ನೂ ಕೊಡುತ್ತಿಲ್ಲ. ಇದರಿಂದ ಪರಿಸರ ನಾಶವಾಗುತ್ತಿದೆ ಎಂದರು.

ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ನೆಡುವುದರಿಂದ ಪ್ರಾಣಿ, ಪಕ್ಷಿಗಳ ಆಹಾರದ ಜೊತೆಗೆ ಪರಿಸರಕ್ಕೆ ಬೇಕಾದ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ ಎಂದರು.

ಈ ವೇಳೆ ಹಲಸು, ಮಾವು, ಬೇವು, ಹೊಂಗೆ ಸೇರಿದಂತೆ ವಿವಿಧ ಬಗೆಯ 120 ಗಿಡಗಳನ್ನು ನೆಟ್ಟು ನೀರುಣಿಸಿದರು. ಕಸಾಪ ತಾಲೂಕು ಘಟಕದ ಮಹಿಳಾ ಅಧ್ಯಕ್ಷೆ ಸರಸ್ವತಿ, ಪಟ್ಟಣದ ಸಾಮಾಜಿಕ ಅರಣ್ಯ ಅಧಿಕಾರಿ ನಾಗರಾಜೇಗೌಡ, ರೋಟರಿ ಸದಸ್ಯರಾದ ಆಕಾಶ್, ರೇಖಾ, ಪುನೀತ್, ದರ್ಶನ್, ಛಾಯಾ, ಸೇರಿದಂತೆ ವಿದ್ಯಾರ್ಥಿಗಳು ಇದ್ದರು.